ಅಡ್ತಲೆಯಲ್ಲಿ ತೋಟಕ್ಕೆ ಆನೆ ದಾಳಿ : ಕೃಷಿ‌ಹಾನಿ

0

ಅರಂತೋಡು ಗ್ರಾಮದ ಅಡ್ತಲೆಯಲ್ಲಿ ಡಿ.10ರಂದು ರಾತ್ರಿ ಕಾಡಾನೆಗಳು ತೋಟಕ್ಕೆ ಬಂದು ಕೃಷಿ ಹಾನಿ ಮಾಡಿರುವ ಘಟನೆ ವರದಿಯಾಗಿದೆ.

ಅಡ್ತಲೆಯ ಮೋಹನ್ ಪಂಜದಬೈಲು ರವರ ತೋಟಕ್ಕೆ ಆನೆಗಳು‌ಬಂದಿದ್ದು, ಅಡಿಕೆ ಮರಗಳು, ತೆಂಗಿನ ಗಿಡಗಳು ಹಾಗೂ ‌ಬಾಳೆ,‌ಕೊಕ್ಕೊ ಗಿಡಗಳನ್ನು ಹಾನಿಗೊಳಿಸಿರುವುದಾಗಿ ತಿಳಿದುಬಂದಿದೆ.