ಸುಳ್ಯ ರಾಮ ಮಂದಿರದಲ್ಲಿ ಅರ್ಧ ಏಕಾಹ ಭಜನೆಯು ಇಂದು ಪ್ರಾತ:ಕಾಲ ದೀಪ ಸ್ಥಾಪನೆಯೊಂದಿಗೆ ಆರಂಭಗೊಂಡಿತು.
ಅರ್ಚಕರು ದೀಪ ಪ್ರಜ್ವಲಿಸಿ ಪ್ರಾರ್ಥನೆ ನೆರವೇರಿಸಿ ಭಜನಾ ಸಂಕೀರ್ತನೆ ಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ
ಮಂದಿರದ ಆಡಳಿತ ಧರ್ಮದರ್ಶಿಗಳಾದ ಕೆ.ಉಪೇಂದ್ರ ಪ್ರಭು,ಉಪಾಧ್ಯಕ್ಷ ಕೃಷ್ಣ ಕಾಮತ್ ಅರಂಬೂರು, ಕಾರ್ಯದರ್ಶಿ ಶ್ರೀನಿವಾಸ ರಾವ್, ಜತೆ ಕಾರ್ಯದರ್ಶಿ ಮಹಾಬಲಯು.ಕೆ,ಸದಸ್ಯರಾದ ಭಾಸ್ಕರ ನಾಯರ್ ಅರಂಬೂರು, ಬಾಬು ರಾಯ ಕಾಮತ್, ಪ್ರದೀಪ್ ಪ್ರಭು, ಬಂಗಾರು ಭಾರದ್ವಾಜ್, ಬೆಳ್ಯಪ್ಪ ಗೌಡ ಬಳ್ಳಡ್ಕ, ಸೌಮ್ಯ ಭಾರದ್ವಾಜ್,ಗಣೇಶ್ ಆಚಾರ್ಯ ಹಾಗೂ ಜಿ.ಜಿ.ನಾಯಕ್, ಜಯಪ್ರಕಾಶ್ ಸುಳ್ಯ, ಶಿವಪ್ರಸಾದ್ ಆಲೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಇಂದು
ಸೂರ್ಯೋದಯದಿಂದ ಸೂರ್ಯಾಸ್ತಮಾನದ ತನಕ ಭಜನಾ ಸಂಕೀರ್ತನೆಯು ತಾಲೂಕಿನ ವಿವಿಧ ಸಂತ ಭಜನಾ ಮಂಡಳಿಯ ವರಿಂದನೆರವೇರಲಿದೆ.
ರಾತ್ರಿ ಗಂಟೆ 7.00 ರಿಂದ ಸಾರ್ವಜನಿಕ ಶ್ರೀ ದುರ್ಗಾ ಪೂಜೆಯು ನಡೆಯಲಿದೆ. ಬಳಿಕಮಹಾಪೂಜೆಯಾಗಿ ಪ್ರಸಾದ ವಿತರಣೆ
ಹಾಗೂ ರಾತ್ರಿ ಅನ್ನ ಸಂತರ್ಪಣೆಯು ನಡೆಯಲಿರುವುದು.