ವೀರಾಂಜನೇಯ ಸ್ಪೋರ್ಟ್ಸ್ ಕ್ಲಬ್ (ರಿ) ಗುತ್ತಿಗಾರು ಸುಳ್ಯ ಆಶ್ರಯದಲ್ಲಿ ನಡೆಯಲಿರುವ ಮೂರು ದಿನಗಳ ಸೂರ್ಯ-ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಡಿ. 10 ರಂದು ದೇವಿಸಿಟಿ ಸಭಾಂಗಣದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ವೀರಾಂಜನೇಯ ಸ್ಪೋರ್ಟ್ಸ್ ಕ್ಲಬ್ ಸ್ಥಾಪಕಾಧ್ಯಕ್ಷ, ರಾಷ್ಟ್ರೀಯ ಕ್ರೀಡಾಪಟು ಆಗಿರುವ ಮಾಯಿಲಪ್ಪ ಗೌಡ ಕೊಂಬೆಟ್ಟು, ಕೋಶಾಧಿಕಾರಿ ಆಗಿರುವ ನಿರಂತ್ ದೇವಶ್ಯ, ಕ್ಲಬ್ ನಿರ್ದೇಶಕರುಗಳು ಆಗಿರುವ ಚಂದ್ರಶೇಖರ್ ಕಡೋಡಿ, ಶಿವಪ್ರಸಾದ್ ಚಣಿಲ, ವಸಂತ್ ಚತ್ರಪಾಡಿ,ಸುನೀಲ್ ಸಂಪ್ಯಾಡಿ, ವಿನೋದ್ ಗುತ್ತಿಗಾರು ಹಾಗೂ ದೇವಿಸಿಟಿ ಕಾಂಪ್ಲೆಕ್ಸ್ ಮಾಲಕರು ಆಗಿರುವ ದೇವಿಪ್ರಸಾದ್ ಚಿಕ್ಮುಳಿ ಉಪಸ್ಥಿತರಿದ್ದರು.
ಡಿ 20,21,22 ಮೂರು ದಿನ ಸೂರ್ಯ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ ಗುತ್ತಿಗಾರಿನ ದೇವಿಸಿಟಿ ಒಳ ಕ್ರೀಡಾಂಗಣದಲ್ಲಿ ನಡೆಯಲಿದೆ. ಡಿ 20 ರಂದು ಬೆಳಿಗ್ಗೆ 10: 30 ರಿಂದ ಪ್ರಾಥಮಿಕ ಶಾಲಾ ಬಾಲಕ ಬಾಲಕಿಯರ, 8 ನೇ ತರಗತಿ ಬಾಲಕರ , ಪ್ರೌಢಶಾಲಾ ಬಾಲಕ ಬಾಲಕಿಯರ ನಡೆದರೆ, ಅಪರಾಹ್ನ 19 ವರ್ಷದ ಒಳಗಿನ ಬಾಲಕಿಯರ ಹಾಗೂ ಡಿ. 21 ಬೆಳಿಗ್ಗೆ 11ರಿಂದ ಪುರುಷರ 55KG ವಿಭಾಗದ ಪುರುಷರ , 65 KG ವಿಭಾಗದ ಕಬಡ್ಡಿ ನಡೆಯಲಿದೆ. ಡಿ. 22 ರಂದು ಬೆಳಿಗ್ಗೆ 11 ಗಂಟೆಗೆ ಗೌಡ ಕುಟುಂಬಗಳ ಮುಕ್ತ ಕಬಡ್ಡಿ ಪಂದ್ಯಾಕೂಟ ನಡೆಯಲಿದೆ. ಪ್ರಥಮ ದಿನದ ಪಂದ್ಯಾಟವನ್ನು ಸುದ್ದಿ ಯೂಟ್ಯೂಬ್ ಚಾನೆಲ್ ನಲ್ಲಿ ನೇರಪ್ರಸಾರ ಇರಲಿದೆ.