ಬೆಳ್ಳಾರೆ ಜಲದುರ್ಗ ಲಯನ್ಸ್ ಕ್ಲಬ್‌ನ 2022 – 23 ನೇ ಸಾಲಿನ ಜೂನ್ ತಿಂಗಳ ಕೊನೆಯ ಮಾಸಿಕ ಸಭೆ ಹಾಗೂ ಬಿ.ಒ.ಡಿ ಸಭೆ ಜೂ. 24ರಂದು ಕ್ಲಬ್‌ನ ಸ್ಥಾಪಕ ಅಧ್ಯಕ್ಷರಾದ ಲ. ವಿಠಲ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಜೆ.ಡಿ ಸಭಾಭವನದಲ್ಲಿ ನಡೆಯಿತು.
ಪ್ರಾಂತ್ಯದ ಎಲ್ಲಾ ಕ್ಲಬ್‌ಗಳ ಪದಗ್ರಹಣ ಹಾಗೂ ಜುಲೈ 16 ರಂದು ಸುಳ್ಯ ಕ್ಲಬ್‌ನಲ್ಲಿ ನಡೆಯಲಿರುವ ಪಿ.ಎಸ್.ಟಿ ಸೆಮಿನಾರ್ ನಲ್ಲಿ ಭಾಗವಹಿಸುವಂತೆ ಅಧ್ಯಕ್ಷರು ವಿನಂತಿಸಿದರು.
ಕ್ಲಬ್‌ನ ಸದಸ್ಯರು ಉಪಸ್ಥಿತರಿದ್ದು, ಮುಂದಿನ ಸಾಲಿನಲ್ಲಿ ಕೈಗೊಳ್ಳಬೇಕಾದ ಸೇವಾ ಕಾರ್ಯಗಳ ಬಗ್ಗೆ ಸಲಹೆ ಸೂಚನೆಗಳನ್ನು ನೀಡಿದರು. ವೇದಿಕೆಯಲ್ಲಿ ಕ್ಲಬ್ Extension chairperson ಲ. ಆನಂದ ರೈ ಉಪಸ್ಥಿತರಿದ್ದರು. ಪ್ರೇಯರ್ ಲ. ಉಷಾ ಬಿ. ಭಟ್ ಹಾಗೂ ಧ್ವಜವಂದನೆಯನ್ನು ಲ. ಪದ್ಮನಾಭ ಶೆಟ್ಟಿ ಮಾಡಿದರು.
ಅಧ್ಯಕ್ಷರು ಸ್ವಾಗತಿಸಿ ಕಾರ್ಯದರ್ಶಿ ಲ. ದಯಾನಂದ ನಾಯ್ಕ್ ವಂದಿಸಿದರು.