ತಿರುಮಲೇಶ್ವರ ಗೌಡ ಬೊಳ್ಳೂರು ಮತ್ತು ಶಶಿಕಲಾ ದಂಪತಿಯ 35 ರವೈವಾಹಿಕ ಜೀವನದ ಸಂಭ್ರಮ

0

ಅಮರಮುಡ್ನೂರು ಗ್ರಾಮದ ಬೊಳ್ಳೂರು ನಿವೃತ್ತ ಕೆ.ಎಸ್.ಆರ್.ಟಿ.ಸಿ ಉದ್ಯೋಗಿ, ಕೃಷಿಕ ತಿರುಮಲೇಶ್ವರ ಗೌಡ ಬೊಳ್ಳೂರು ಮತ್ತು ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ಶಶಿಕಲಾ ಪಿ. ಬೊಳ್ಳೂರು ದಂಪತಿಯ 35 ರ ವೈವಾಹಿಕ ಜೀವನದ ಸಂಭ್ರಮವು ಜೂ.24 ರಂದು ಬೊಳ್ಳೂರು ಮನೆಯಲ್ಲಿ ನಡೆಯಿತು.

ವೈವಾಹಿಕ ಜೀವನದ 35 ಸಂವತ್ಸರ ಪೂರೈಸಿರುವ ದಂಪತಿಯವರು ಕೇಕ್ ಕತ್ತರಿಸಿ ಸಿಹಿ ಹಂಚಿ ಸಂತಸ ಹಂಚಿಕೊಂಡರು. ಈ ಸಂದರ್ಭದಲ್ಲಿ ಪುತ್ರಿ ಯರಾದ ಶ್ರೀಮತಿ ದೇವಿಕಾ, ಕು.ಅಶ್ವಿನಿ ಬೊಳ್ಳೂರು, ಕು.ಚಂಪಾಶ್ರೀ ಬೊಳ್ಳೂರು ,ಅಳಿಯ ಸಚಿನ್ ಶಿವರಾಜ್ ಹಾಗೂ ಕುಟುಂಬಸ್ಥರು, ಬಂಧುಗಳು, ಹಿತೈಷಿ ಮಿತ್ರರು ಉಪಸ್ಥಿತರಿದ್ದರು. ಆಗಮಿಸಿದ ಎಲ್ಲಾ ಬಂಧು ಮಿತ್ರರು ಶುಭ ದಂಪತಿಯ ವರಿಗೆ ಶುಭ ಹಾರೈಸಿದರು.

ಸುದ್ದಿ ವರದಿಗಾರ, ಗಾಯಕ ಶಿವಪ್ರಸಾದ್ ಆಲೆಟ್ಟಿ ಮತ್ತು ಬಳಗದವರಿಂದ ಸಂಗೀತ ರಸಮಂಜರಿ ಮತ್ತು ಪ್ರೇಕ್ಷಕರಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಆಗಮಿಸಿದ ಎಲ್ಲರಿಗೂ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಶ್ರೀಮತಿ ದೇವಿಕಾಸಚಿನ್ ಶಿವರಾಜ್ ಸ್ವಾಗತಿಸಿ, ವಂದಿಸಿದರು.