ಗದ್ದೆಗಿಳಿದು ನೇಜಿ ನಾಟಿ ಮಾಡಿದ ಆಲೆಟ್ಟಿ ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳು

ಬೇಸಾಯದ ಶ್ರಮ ಜೀವನದ ಮೌಲ್ಯ ತಿಳಿಸುವ ನಿಟ್ಟಿನಲ್ಲಿ ನಡೆದ ಕಾರ್ಯಕ್ರಮ

0

ಆಲೆಟ್ಟಿ ಸರಕಾರಿ ಪ್ರೌಢಶಾಲೆಯ ವಿಜ್ಞಾನ ಸಂಘ ಇಕೋ ಕ್ಲಬ್ ವಿದ್ಯಾರ್ಥಿಗಳು ಕೆಳಗಿನ ಆಲೆಟ್ಟಿಯ ಬಾಲಕೃಷ್ಣ ಗೌಡರವರ ಬೇಸಾಯದ ಗದ್ದೆಯಲ್ಲಿ ಒಂದು ದಿನದ ನೇಜಿ ನಾಟಿ ಮಾಡುವ ಕಾರ್ಯಕ್ರಮ ಜು.1 ರಂದು ನಡೆಯಿತು. ಶಾಲೆಯ ವಿದ್ಯಾರ್ಥಿಗಳು ಗದ್ದೆಗಿಳಿದು ನೇಜಿ ನೆಟ್ಟು, ಸಂಭ್ರಮಿಸಿದರು.


ಶಾಲಾ ಮುಖ್ಯ ಶಿಕ್ಷಕರು ಮತ್ತು ಅಧ್ಯಾಪಕ ವೃಂದದವರು, ಎಸ್.ಡಿ.ಎಂ.ಸಿ ಅಧ್ಯಕ್ಷರು ಮತ್ತು ಸದಸ್ಯರು ಭಾಗವಹಿಸಿದರು. ಗ್ರಾಮೀಣ ಪ್ರದೇಶಗಳಲ್ಲಿ ಹಿಂದಿನ ಕಾಲದಲ್ಲಿ ಸಾಕಷ್ಟು ಕಡೆಗಳಲ್ಲಿ ಗದ್ದೆ ಬೇಸಾಯದ ಪದ್ದತಿ ಕಂಡು ಬರುತ್ತಿತ್ತು. ಕಾಲಕ್ರಮೇಣ ಗದ್ದೆಯಲ್ಲಿ ಅಡಿಕೆ ತೋಟ ಬೆಳೆಸಿ ಬೇಸಾಯ ಎಂಬುದು ಕಣ್ಮರೆಯಾಗಿವೆ. ಮುಂದಿನ ಯುವ ಪೀಳಿಗೆಗೆ ರೈತರ ಬೇಸಾಯದ ಶ್ರಮ ಜೀವನದ ಮೌಲ್ಯ ತಿಳಿಸುವ ನಿಟ್ಟಿನಲ್ಲಿ ಇಂತಹ ಮಾದರಿ ಕಾರ್ಯಗಳು ನಿರಂತರವಾಗಿ ನಡೆಯುವಂತಾಗಬೇಕು ಎಂಬುವುದು ಈ ಕಾರ್ಯಕ್ರಮದ ಉದ್ದೇಶವಾಗಿತ್ತು.