ಕಲೆ, ಸಾಹಿತ್ಯ, ಸಂಸ್ಕೃತಿಯಿಂದ ಬದುಕು ಆಹ್ಲಾದಕರ : ಆನೆಕಾರ್ ಗಣಪಯ್ಯ
ಕಲೆ, ಸಾಹಿತ್ಯ, ಸಂಗೀತ , ಯಕ್ಷಗಾನ, ನಾಟಕ ಗಳು ಆಗಾಗ ನಡೆಯುತ್ತಿದ್ದರೆ ಮನುಷ್ಯನ ಬದುಕು ಆಹ್ಲಾದಕರವಾಗಿರುತ್ತದೆ. ಇಂತಹಸಂಸ್ಕೃತಿಯೊಂದುಪೈಲಾರಿನಲ್ಲಿರುವುದರಿಂದ ಈ ಊರು ಜೀವಂತಿಕೆಯಿಂದ ಕೂಡಿದೆ ಎಂದು ಹಿರಿಯರಾದ ಪ್ರಗತಿಪರ ಕೃಷಿಕ ಆನೆಕಾರ ಗಣಪಯ್ಯ ರವರು ಹೇಳಿದರು.
ಪೈಲಾರು ಫ್ರೆಂಡ್ಸ್ ಕ್ಲಬ್ ಮತ್ತು ಶೌರ್ಯ ಯುವತಿ ಮಂಡಲದ ಸಹಯೋಗದಲ್ಲಿ 11ನೇ ವರ್ಷದ ಪೈಲಾರು ಯಕ್ಷೋತ್ಸವದ ಉದ್ಘಾಟನಾ ಸಮಾರಂಭದಲ್ಲಿ
ಯಕ್ಷೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಸದಸ್ಯೆ ಚಂದ್ರಾವತಿ ಬಡ್ಡಡ್ಕ ರವರು ಮಾತನಾಡಿ
ಆಚರಣೆ,ಸಂಪ್ರದಾಯಗಳನ್ನು ಮುಂದಿನ ತಲೆಮಾರಿಗೆ ದಾಟಿಸುವಲ್ಲಿ ಇಂತಹ ಕಾರ್ಯಕ್ರಮಗಳು ಬಹಳ ಮುಖ್ಯವಾಗಿರುವುದು ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಅಮರ ಮುಡ್ನೂರು ಗ್ರಾಮ ಗೌಡ ಸಮಿತಿಯ ಅಧ್ಯಕ್ಷ ಕೃಷ್ಣಪ್ಪ ಕೋಡ್ತುಗುಳಿ, ಚೊಕ್ಕಾಡಿ ಪ್ರಾ.ಕೃ.ಪ. ಸಹಕಾರಿ ಸಂಘದ ಅಧ್ಯಕ್ಷ ಕೇಶವ ಕರ್ಮಜೆ, ಪೈಲಾರು ಸ.ಹಿ. ಪ್ರಾ. ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷೆ ಶ್ರೀಮತಿ ದೇವಕಿ ಪೈಲಾರು, ಮುಖ್ಯ ಶಿಕ್ಷಕಿ ಶ್ರೀಮತಿ ಚಂದ್ರಾವತಿ ಹೆಚ್, ಫ್ರೆಂಡ್ಸ್ ಕ್ಲಬ್ ಪೈಲಾರಿನ ಅಧ್ಯಕ್ಷ ಜೈದೀಪ್ ಕಡಪಳ
ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕು.ಚರಿಷ್ಮ ಕಡಪಳ ಸ್ವಾಗತಿಸಿ, ಫ್ರೆಂಡ್ ಕ್ಲಬ್ ಗೌರವಾಧ್ಯಕ್ಷ ಶಶಿಕಾಂತ್ ಮಿತ್ತೂರು ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಕರ್ನಾಟಕ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಸಹಯೋಗದಲ್ಲಿ ಶರ ಸೇತು ಬಂಧನ ಎಂಬ ಅರೆಭಾಷೆಯ ಯಕ್ಷಗಾನ ತಾಳಮದ್ದಲೆಯು ಪ್ರದರ್ಶನವಾಯಿತು.