ಜ.6 ರಂದು ಭಜನಾ ಕಾರ್ಯಕ್ರಮ ಹಾಗೂ “ಕಥೆ ಎಡ್ಡೆಂಡು” ತುಳು ನಾಟಕ
ಸುಳ್ಯ ಶ್ರೀ ಚೆನ್ನಕೇಶವ ಕಲಾ ಮತ್ತು ಸಾಂಸ್ಕೃತಿಕ ಸಂಘದ ವತಿಯಿಂದ ಚೆನ್ನಕೇಶವ ದೇವರ ಜಾತ್ರೋತ್ಸವದ ಅಂಗವಾಗಿ ಜ.6 ರಂದು ಹಮ್ಮಿಕೊಂಡಿರುವ ಸಾಂಸ್ಕೃತಿಕ ಕಾರ್ಯಕ್ರಮದ ಆಮಂತ್ರಣ ಪತ್ರ ಬಿಡುಗಡೆಯು ಡಿ.23 ರಂದು ಚೆನ್ನಕೇಶವ ದೇವಸ್ಥಾನದಲ್ಲಿ ನೆರವೇರಿತು.
ಅರ್ಚಕರಾದ ಹರಿಕೃಷ್ಣ ಭಟ್ ಪ್ರಾರ್ಥನೆ ನೆರವೇರಿಸಿದರು.
ಕೆ.ವಿ.ಜಿ.ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಡಾ.ಲೀಲಾಧರ ಡಿ.ವಿ ಯವರು ಬಿಡುಗಡೆ ಗೊಳಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಕೃಪಾಶಂಕರ ತುದಿಯಡ್ಕ, ಗೋಪಾಲಕೃಷ್ಣ ಭಟ್, ಎನ್.ಎ.ರಾಮಚಂದ್ರ, ಪಂ.ಸದಸ್ಯ ಕಿಶೋರಿ ಶೇಟ್, ರಂಜಿತ್ ಪೂಜಾರಿ ಸುಳ್ಯ,ಸಂಘದ ಸಂಚಾಲಕ ಜಯಂತ್ ಶೇಟ್,ಸದಸ್ಯರಾದ ಲೋಕೇಶ್ ಎಸ್ ಸುಳ್ಯ, ಲೋಕೇಶ್ ಕೆರೆಮೂಲೆ, ವಿಜೆ ವಿಖ್ಯಾತ್, ಹರಿಪ್ರಸಾದ್, ಸತೀಶ್ ಕಾಟೂರು,ಸುದೀಶ್, ಧನಂಜಯ,ಪ್ರಕಾಶ್,ಪಿ.ಜಿ.ಜಯರಾಮ, ವೆಂಕಟೇಶ ಮತ್ತಿತರರು ಉಪಸ್ಥಿತರಿದ್ದರು.
ಜ.6 ರಂದು ಸಂಜೆ 4.00 ಗಂಟೆಗೆ ದೀಪ ಪ್ರಜ್ವ ಲನೆಯಾಗಿ ಸ್ಥಳೀಯ ಭಜನಾಮಂಡಳಿಯವರಿಂದ ಭಜನೆ ಮತ್ತು ಕುಣಿತ ಭಜನೆಪ್ರದರ್ಶನವಾಗಲಿರುವುದು. ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನಾ ಸಮಾರಂಭವು ನಡೆಯಲಿರುವುದು. ಬಳಿಕ ಶಾರದಾ ಆರ್ಟ್ಸ್ ಕಲಾವಿದರು ಮಂಜೇಶ್ವರ ಅಭಿನಯದ “ಕಥೆ ಎಡ್ಡೆಂಡು” ಎಂಬ ತುಳು ನಾಟಕ ಸುಳ್ಯದಲ್ಲಿ ಪ್ರಥಮ ಬಾರಿಗೆ ಪ್ರದರ್ಶನವಾಗಲಿರುವುದು.