ಕೆಎಸ್‌ಎಸ್ ಕಾಲೇಜಿನಲ್ಲಿ ಮೆಳೈಸಿದ ಹಲಸು ಮೇಳ

ಹಲಸಿನ ವೆರೈಟಿ ಖಾದ್ಯಗಳ ರುಚಿಗೆ ಮನಸೋತ ಗ್ರಾಹಕರು

0

ಕುಕ್ಕೆಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ ಆಂತರಿಕ ಗುಣಮಟ್ಟ ಭರವಸಾ ಕೋಶ ಹಾಗೂ ವಾಣಿಜ್ಯ ಮತ್ತು ಉದ್ಯಮಾಡಳಿತ ವಿಭಾಗದ ಆಶ್ರದಲ್ಲಿ ಹಲಸು ಮೇಳ ಕಾರ್ಯಕ್ರಮ ಜೂ.30ರಂದು ನಡೆಯಿತು.

ಹಲಸು ಮೇಳದ ಉದ್ಗಾಟನೆಯನ್ನು ಕಡಬ ಸರಸ್ವತಿ ವಿದ್ಯಾಲಯ ಸಮೂಹ ಸಂಸ್ಥೆಗಳ ಸಂಚಾಲಕ ಮಂಕುಡೆ ವೆಂಕಟರಮಣ ರಾವ್ ನೆರವೇರಿಸಿದರು. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ, ಕಾಲೇಜಿನ ಪ್ರಾಂಶುಪಾಲ ಡಾ.ದಿನೇಶ ಪಿ.ಟಿ., ವಾಣಿಜ್ಯ ಮತ್ತು ಉದ್ಯಮಾಡಳಿತ ವಿಭಾಗದ ಮುಖ್ಯಸ್ಥೆ ಲತಾ ಬಿ.ಟಿ., ಐಕ್ಯೂಎಸಿ ಸಂಯೋಜಕ ಡಾ.ಗೋವಿಂದ ಎನ್.ಎಸ್., ಕಾರ್ಯಕ್ರಮ ಸಂಯೋಜಕರಾದ ಶಿವಪ್ರಸಾದ್ ಎಸ್, ಮಧುರಾ ಕೆ., ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿಗಳು, ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಒಂದೊಮ್ಮೆ ಯಾರಿಗೂ ಬೇಡವಾಗಿದ್ದ ಹಲಸು ಇಂದು ಬಾರೀ ಬೇಡಿಕೆ ಪಡೆದಿದೆ. ಎಲ್ಲೆಲ್ಲೂ ಹಲಸು ಮೇಳಗಳ ಮೂಲಕ ಹಲಸಿಗೆ ಪೂರಕ ವೇದಿಕೆ ಕಲ್ಪಿಸಲಾಗುತ್ತಿದ್ದು ಕೆಎಸ್‌ಎಸ್ ಕಾಲೇಜಿನಲ್ಲೂ ಹಲಸಿಗೆ ಪೂರಕ ವ್ಯವಹಾರದ ವೇದಿಕೆ ಕಲ್ಪಿಸಲಾಗಿತ್ತು.

ಕೆಎಸ್‌ಎಸ್ ಕಾಲೇಜಿನ ಹೊರ ಭಾಗದಲ್ಲಿ ಹಾಗೂ ಸಭಾಂಗಣದಲ್ಲಿ ಹಲಸಿನ ಉತ್ಪನ್ನಗಳ ಮಾರಾಟ ಹಾಗೂ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಹಲಸಿನಿಂದಲೇ ತಯಾರಿಸಿದ ವಿವಿಧ ಬಗೆಯ ಖಾದ್ಯಗಳ ಪ್ರದರ್ಶನ ಹಾಗೂ ಮಾರಾಟ ವ್ಯವಸ್ಥೆ ಮಾಡಲಾಗಿತ್ತು. ಸುಮಾರು 20-30 ಬಗೆಯ ಹಲಸಿನ ಖಾದ್ಯಗಳನ್ನು ವಿದ್ಯಾರ್ಥಿಗಳೇ ತಯಾರಿಸಿ ಮಾರಾಟಕ್ಕಿಟ್ಟಿದ್ದರು. ಹಲಸಿನ ಹಪ್ಪಲ, ಚಿಪ್ಸ್, ಹಲ್ವಾ, ಪಕೋಡ, ದೋಸೆ, ಕಬಾಬ್, ಮುಳ್ಕ, ಹಲಸಿನ ಹೋಳು, ಲಡ್ಡು, ಗೋಬಿ, ಹಲಸಿನ ಗಟ್ಟಿ, ನಣ್ಣೇರಿ, ಪಾಯಸ, ಹಲಸಿನ ಉಪ್ಪುಕರಿ, ಹಲಸಿನ ಜ್ಯೂಸ್, ಹಲಸಿನ ಅಪ್ಪದಿಟ್ಟು, ಹಲಸಿನ ಇಡ್ಲಿ ಚಟ್ನಿ, ಹಲಸಿನ ಕಾಯಿ, ಹಲಸಿನ ಪಾನಿಪೂರಿ ಸೇರಿದಂತೆ ವಿವಿಧ ಬಗೆಯ ಖಾದ್ಯಗಳು ಪ್ರದರ್ಶನ ಹಾಗೂ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿತ್ತು.

ಹಲಸು ಮೇಳದಲ್ಲಿ ವಿಶೇಷವಾಗಿ ವಿದ್ಯಾರ್ಥಿಗಳೇ ಕೇಂದ್ರ ಂದುಗಳಾಗಿದ್ದು ಕಾಲೇಜಿನ ತೃತೀಯ ಬಿಕಾಂ ಹಾಗೂ ಬಿಬಿಎ ವಿದ್ಯಾರ್ಥಿಗಳು ಕಾರ್ಯಕ್ರಮ ಆಯೋಜಿಸಿದ್ದರು. ಇಲ್ಲಿ ಹಲಸಿನ ಖಾದ್ಯಗಳನ್ನು ವಿದ್ಯಾರ್ಥಿಗಳೇ ತಯಾರಿಸಿ ಮಾರಾಟ ಮಾಡುತ್ತಿದ್ದು ಉಪನ್ಯಾಕರು, ಅತಿಥಿಗಳು, ವಿದ್ಯಾರ್ಥಿಗಳು, ಸಾರ್ವಜನಿಕರು ಆಗಮಿಸಿ ಹಲಸು ಮೇಳದಲ್ಲಿ ಭಾಗವಹಿಸಿ, ಖರೀದಿಯಲ್ಲಿ ತೊಡಗಿದ್ದರು.