ಸುಳ್ಯ ಗಾಂಧಿನಗರ ಮತ್ತು ಇನ್ನಿತರ ಕಡೆಗಳಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಅಂಕಿತ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿ ಕೆಲವು ಹೊಟೇಲ್ ಗಳಿಗೆ ನೋಟಿಸ್ ನೀಡಿದ್ದಾರೆ.
ಸಾರ್ವಜನಿಕರ ಅರೋಗ್ಯ ಹಿತದೃಷ್ಟಿಯಿಂದ ಸುಳ್ಯದ ಹೊಟೇಲ್ ಗಳಲ್ಲಿ ಪರಿಶೀಲನೆ ನಡೆಸಿರುತ್ತಾರೆ.
ಹೊಟೇಲ್, ಉಪಹಾರ ಗೃಹ,ಸಂಚಾರಿ ಕ್ಯಾಂಟೀನ್, ಇನ್ನಿತರ ಆಹಾರ ಉತ್ಪನ್ನ ಸಂಗ್ರಹ ಕೇಂದ್ರಗಳ ಶುಚಿತ್ವ,ಆಹಾರ ಪದಾರ್ಥಗಳ ಮುಚ್ಚದೆ ಇಟ್ಟಿರುವುದು,ಹೊಟೇಲ್ ಪರಿಸರದಲ್ಲಿ ಸೊಳ್ಳೆ ಉತ್ಪತ್ತಿಯಾಗುವ ಸ್ಥಳಗಳು,ಶುಚಿಯಾದ ಹಾಗೂ ಸುರಕ್ಷಿತವಾದ ಆಹಾರ ನೀಡದೆ ಇರುವುದು, ಆಹಾರ ನೋಂದಣಿ ಮತ್ತು ಪರವಾನಿಗೆ ಪಡೆಯದೆ ಹಾಗೂ ನವೀಕರಣ ಮಾಡದೆ ಇರುವುದು,ಸಾರ್ವಜನಿಕ ಅರೋಗ್ಯದ ಕಡೆ ಸೂಕ್ತ ಗಮನಹರಿಸದೆ ಅವರಣದ ಸುತ್ತ ಮುತ್ತ ತ್ಯಾಜ್ಯ ವಸ್ತುಗಳ ರಾಶಿ ಹಾಕಿರುವುದು,ಆಹಾರ ಪದಾರ್ಥಗಳನ್ನು ವಾರ್ತಾ ಪತ್ರಿಕೆಯಲ್ಲಿ ಕಟ್ಟಿಕೊಡುವುದು,ಹಳಸಿದ ಆಹಾರ ಪದಾರ್ಥಗಳನ್ನು ಪ್ರೀಡ್ಜ್ ಗಳಲ್ಲಿ ಶೇಖರಣೆ ಮಾಡಿರುವುದು ಕಂಡು ಬಂದಿದ್ದು ಅತಂಹ ಹೋಟೆಲ್ ಇನ್ನಿತರ ಆಹಾರ ಉತ್ಪನ್ನ ತಯಾರಕರಿಗೆ ನೋಟಿಸು ಮಾಡಲಾಗಿದೆ.
ಸುಳ್ಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಅಧಿಕಾರಿಗಳ ತಂಡದಿಂದ ಹೊಟೇಲ್ ಇನ್ನಿತರ ಕಡೆಯಲ್ಲಿ ಪರಿಶೀಲನೆ ನಡೆಸಿದರು.