ಮಡಪ್ಪಾಡಿ : ಚಂದ್ರಶೇಖರ ಗೌಡ ಗುಡ್ಡೆಮನೆ‌ ನಿಧನ

0

ಮಡಪ್ಪಾಡಿ ಗ್ರಾಮದ ಚಂದ್ರಶೇಖರ ಗೌಡ ಗುಡ್ಡೆಮನೆ ಎಂಬವರು ಇಂದು‌ ಸಂಜೆ ಮಂಗಳೂರಿನ‌ ಆಸ್ಪತ್ರೆ ಯಲ್ಲಿ‌ ನಿಧನರಾದರು‌. ಅವರಿಗೆ ಸುಮಾರು 65 ವರ್ಷ ಪ್ರಾಯವಾಗಿತ್ತು.


ಚಂದ್ರಶೇಖರರವರು ಕಳೆದ ಹಲವು‌ ಸಮಯಗಳಿಂದ ಇತಿಹಾಸ ಪ್ರಸಿದ್ಧ ಕಂದ್ರಪ್ಪಾಡಿ‌ ಶ್ರೀ ರಾಜ್ಯ ದೈವ ಮತ್ತು ಪುರುಷ ದೈವಸ್ಥಾನ, ಮಡಪ್ಪಾಡಿ‌, ದೇವಚಳ್ಳ ಗ್ರಾಮದ ಅನೇಕ ಕಡೆಗಳಲ್ಲಿ ಉಳ್ಳಾಕುಳು ದೈವ ಸೇರಿದಂತೆ ಇತರ ದೈವಗಳ ಪರಿಚಾರಕರಾಗಿ ಹಾಗೂ ಇತರ ಕಾರ್ಯಕ್ರಮಗಳಲ್ಲಿಯೂ ಊರು ಗೌಡರಾಗಿಯೂ
ಸೇವೆ ಸಲ್ಲಿಸುತ್ತಿದ್ದರು. ಅಲ್ಲದೇ ಯಕ್ಷಗಾನ ಕಲಾವಿದರಾಗಿಯೂ ಹೆಸರಾಗಿದ್ದರು.‌
ಮೃತರು ಪತ್ನಿ ಮಡಪ್ಪಾಡಿ‌ ಪ್ರಾ.ಕೃ.ಪ.ಸ.ಸಂಘದ ನಿರ್ದೇಶಕಿ ಶ್ರೀಮತಿ ತಾರಾ ಜೆ.ಸಿ. , ಇಬ್ಬರು ಪುತ್ರಿಯರಾದ ಶ್ರೀಮತಿ ಶಾಸ್ತ, ಜ್ಞಾನವಿ ಹಾಗೂ ಬಂಧುಗಳನ್ನು ಅಗಲಿದ್ದಾರೆ.