ರಾಜ್ಯ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಗೌರಿತಾ ತೃತೀಯ ಸ್ಥಾನ

0

ಮೂಡಬಿದ್ರೆಯಲ್ಲಿ ಅ. 20ರಂದು ನಡೆದ ರಾಜ್ಯ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ನಿರಂತರ ಯೋಗ ಕೇಂದ್ರ ಗುತ್ತಿಗಾರು ಇದರ ವಿದ್ಯಾರ್ಥಿನಿ ಗೌರಿತಾ ಕೆ ಜಿ ಕಿರಿಯ ಪ್ರಾಥಮಿಕ ವಿಭಾಗ 1ನೇ ತರಗತಿಯಿಂದ 4ನೇ ತರಗತಿವರೆಗಿನ ಬಾಲಕಿಯರ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದಿರುತ್ತಾಳೆ. ಕುಮಾರಸ್ವಾಮಿ ವಿದ್ಯಾಲಯದ ಮೂರನೇ ತರಗತಿ ವಿದ್ಯಾರ್ಥಿಯಾಗಿರುವ ಇವಳು ಕಳಗಿ ಡಾ ಗೌತಮ್ ಕೆ. ವಿ ಮತ್ತು ಡಾ ರಾಜೇಶ್ವರಿ ಎಂ. ಎಂ. ದಂಪತಿ ಸುಪುತ್ರಿ. ಇವಳಿಗೆ ಯೋಗ ಗುರು ಶರತ್ ಮರ್ಗಿಲಡ್ಕ ಮಾರ್ಗದರ್ಶನ ನೀಡಿದ್ದಾರೆ.