ಹಳೆಗೇಟಿನಿಂದ ಜಯನಗರ ಸಂಪರ್ಕಿಸುವ ರಸ್ತೆಯಲ್ಲಿರುವ ಮರದ ಮಿಲ್ ವೊಂದರಲ್ಲಿ ಅಕ್ರಮವಾಗಿ ಮರಗಳನ್ನು ದಾಸ್ತಾನು ಮಾಡಲಾಗಿದೆ ಎಂಬ ದೂರಿನ ಮೇರೆಗೆ ಅರಣ್ಯಾಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿರುವ ಘಟನೆ ಅಕ್ಟೋಬರ್ 30 ರಂದು ಸಂಜೆ ನಡೆದಿದೆ.
ಖಲಿದಿಯಾ ಮರದ ಮಿಲ್ ನಲ್ಲಿ ಮರಗಳನ್ನು ಅಕ್ರಮವಾಗಿ ದಾಸ್ತಾನು ಮಾಡಲಾಗಿದೆ ಎಂದು ಅರಣ್ಯಾಧಿಕಾರಿಗಳಿಗೆ ದೂರು ಬಂದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ ಎನ್ನಲಾಗಿದೆ.
ಮಧ್ಯಾಹ್ನ ಸುಮಾರು 3:30ರ ಸಮಯಕ್ಕೆ ದಾಳಿ ನಡೆಸಿದ ಅಧಿಕಾರಿಗಳು ಸಂಜೆ 6 ಗಂಟೆಯವರೆಗೆ ಸುದೀರ್ಘವಾಗಿ ಪರಿಶೀಲನೆಗಳನ್ನು ನಡೆಸಿದ್ದಾರೆ ಎನ್ನಲಾಗಿದೆ.
ಈ ವಿಷಯದ ಕುರಿತು ಸುದ್ದಿ ವತಿಯಿಂದ ಮಿಲ್ ನ ಮಾಲಕರು ಅಬ್ದುಲ್ ಸಮದ್ ಹಾಜಿ ಅವರೊಂದಿಗೆ ವಿಚಾರಿಸಿದಾಗ ನಮ್ಮ ಮಿಲ್ಲಿನಲ್ಲಿ ಅಕ್ರಮ ಮರಗಳನ್ನು ದಾಸ್ತಾನು ಮಾಡಿರುವುದಾಗಿ ಯಾರೋ ಅರಣ್ಯ ಇಲಾಖೆಯವರಿಗೆ ದೂರು ನೀಡಿದ್ದು ಅಧಿಕಾರಿಗಳು ಬಂದು ಪರಿಶೀಲನೆ ನಡೆಸಿದ್ದಾರೆ.
ಆದರೆ ನಮ್ಮಲ್ಲಿ ಇರುವ ಎಲ್ಲಾ ಮರಗಳಿಗೆ ದಾಖಲೆಗಳು ಸರಿಯಾಗಿದ್ದು ಯಾವುದೇ ರೀತಿಯ ಅಕ್ರಮ ದಾಸ್ತಾನು ಇಲ್ಲಿ ಇರುವುದಿಲ್ಲ ಎಂದು ಅಧಿಕಾರಿಗಳ ಗಮನಕ್ಕೆ ಬಂದಿರುತ್ತದೆ. ಬಳಿಕ ಅವರು ತಪಾಷಣೆ ನಡೆಸಿ ತೆರಳಿದ್ದು ಯಾವುದೇ ಗೊಂದಲಗಳು ನಡೆಯಲಿಲ್ಲ ಎಂದು ಅವರು ತಿಳಿಸಿದ್ದಾರೆ.