ಭೂ ಸುರಕ್ಷಾ ದಾಖಲೆಗಳ ಇ-ಖಜಾನೆ ಕಚೇರಿ ಪ್ರಾರಂಭ

0

ಸುಳ್ಯ ತಾಲೂಕು ಕಛೇರಿಯಲ್ಲಿ ಭೂ ಸುರಕ್ಷಾ ಭೂ ದಾಖಲೆಗಳ ಇ-ಖಜಾನೆ ಕಛೇರಿಯನ್ನು ಜ.೧೦ ರಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕರ್ನಾಟಕ ಸರ್ಕಾರದ ಗ್ಯಾರಂಟಿ ಅನುಷ್ಠಾನ ಸಮಿತಿ ಸುಳ್ಯ ತಾಲೂಕು ಅಧ್ಯಕ್ಷರಾದ ಹಮೀದ್ ಕುತ್ತಮೊಟ್ಟೆ ,ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ಎ. ನೀರಬಿದಿರೆ ಉಪಸ್ಥಿತರಿದ್ದರು.
ಸುಳ್ಯ ತಹಶೀಲ್ದಾರ್ ಮಂಜುಳಾ ಸ್ವಾಗತಿಸಿ, ಉಪತಹಶೀಲ್ದಾರ್ ಮಂಜುನಾಥ್ ಕಾರ್ಯಕ್ರಮ ನಿರೂಪಿಸಿದರು.