ಬಂಟ್ವಾಳ ತಾಲೂಕು, ಪುಣಚ ಗ್ರಾಮದ ಅಕ್ಷಯ್ ಕುಮಾರ್ ಇವರು ಕಳೆದ ಮೂರುವರೆ ವರುಷಗಳಿಂದ ದೊಡ್ಡತೋಟ ಉಪ- ಅಂಚೆ ಕಛೇರಿಯಲ್ಲಿ ಉದ್ಯೋಗಿಯಾಗಿ ಹಾಗೂ ಸುಳ್ಯ ಮುಖ್ಯ ಅಂಚೆ ಕಛೇರಿಯಲ್ಲಿ ೨ ವರುಷಗಳಿಂದ ಆಧಾರ್ ಆಪರೇಟರ್ (Adhar Operator) ಆಗಿ ಕಾರ್ಯನಿ ರ್ವಹಿಸಿಕೊಂಡು ಬಂದಿದ್ದು ಇದೀಗ ಮಂಗಳೂರಿನ ಕೇಂದ್ರ ಕಚೇರಿಗೆ ವರ್ಗಾವಣೆ ಗೊಂಡಿರುತ್ತಾರೆ.
ಹಾಗೂ ನೆಲ್ಲೂರು ಕೆಮ್ರಾಜೆ ಶಾಖಾ ಅಂಚೆ -ಕಛೇರಿಯ ರವಿ ಇವರು ಗುತ್ತಿಗಾರು ಉಪ ಅಂಚೆಕಛೇರಿಗೆ ವರ್ಗಾವಣೆ ಗೊಂಡಿದ್ದು ಬೀಳ್ಕೊಡುಗೆ ಸಮಾರಂಭ ನಡೆಯಿತು.
ಪ್ರಸ್ತುತ ಸುಳ್ಯದಲ್ಲಿ, ಸುಳ್ಯ ಮತ್ತು ಬೆಳ್ಳಾರೆ ಅಂಚೆಕಛೇರಿಯಲ್ಲಿ ಮಾತ್ರ ಆಧಾರ್ ಸೇವೆ ಲಭ್ಯವಿದ್ದು ಅಕ್ಷಯ್ ಕುಮಾರ್ ಇವರ ವರ್ಗಾವಣೆಯಿಂದ ಸ್ವಲ್ಪ ಸಮಯ ಸುಳ್ಯದಲ್ಲಿ ಆಧಾರ್ ಸೇವೆಯಲ್ಲಿ ವ್ಯತ್ಯಯವಾಗಿ, ಬೆಳ್ಳಾರೆಯಲ್ಲಿ ಮಾತ್ರ ಅಂಚೆ ಸೇವೆ ಲಭ್ಯವಾಗುವ ಸಾಧ್ಯತೆ ಇದೆ.