ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ

0

ವ್ಯವಸ್ಥಾಪನಾ ಸಮಿತಿಗೆ 9 ಮಂದಿ ಸದಸ್ಯರ ನೇಮಕ

ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ 9 ಮಂದಿ ಸದಸ್ಯರು ನೇಮಕ ಆಗಿದ್ದಾರೆ.
ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅವಧಿ ಮುಗಿದು ಒಂದು ವರ್ಷವಾಗಿದ್ದು ನೂತನ ಆಡಳಿತ ಮಂಡಳಿಗೆ 11 ಮಂದಿ ನಾಮಪತ್ರ ಸಲ್ಲಿಸಿದ್ದು 9 ಮಂದಿ ಸದಸ್ಯರು ಆಯ್ಕೆಯಾಗಿದ್ದಾರೆ.


ದೇವಸ್ಥಾನದ ಪ್ರದಾನ ಅರ್ಚಕ ರಾಮಚಂದ್ರ ಪಿ.ಜಿ ,ಕರುಣಾಕರ ಉದ್ದಂಪಾಡಿ,ಶಿವರಾಮ ನೆಕ್ರೆಪ್ಪಾಡಿ, ರಾಜೇಶ್ ಭಟ್ ಬಾಂಜಿಕೋಡಿ,ಶ್ರೀಮತಿ ಶೀಲಾವತಿ ಕುಳ್ಳಂಪಾಡಿ, ಶ್ರೀಮತಿ ಆಶಾ ಮಡ್ತಿಲ, ರಾಧಾಕೃಷ್ಣ ಚಾಕೋಟೆ, ಬಾಲಕೃಷ್ಣ ಮಡ್ತಿಲ ಬಿಎಸ್ಸೆನ್ನೆಲ್, ಮುರಳೀಧರ ಕೊಚ್ಚಿ ಸದಸ್ಯರಾಗಿ ಆಯ್ಕೆಯಾದರು.