ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ), ಮತದಾರರ ಸಾಕ್ಷರತಾ ಸಂಘ( E LC), ಶ್ರೀ ಶಾರದಾ ಮಹಿಳಾ ಪದವಿಪೂರ್ವ ಕಾಲೇಜು, ಸುಳ್ಯ ಇವುಗಳ ಜಂಟಿ ಆಶ್ರಯದಲ್ಲಿ ಮತದಾನದ ಸಾಕ್ಷರತೆಯ ಬಗ್ಗೆ ತಾಲೂಕು ಮಟ್ಟದ ವಿವಿಧ ಸ್ಪರ್ಧೆಗಳು ಕಾಲೇಜಿನಲ್ಲಿ ನಡೆಯಿತು.
ಸ್ಪರ್ಧಾ ಕಾರ್ಯಕ್ರಮದ ಉದ್ಘಾಟನೆಯನ್ನು ದಕ್ಷಿಣ ಕನ್ನಡ ಗೌಡ ವಿದ್ಯಾ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಮತಿ ಡಾ. ರೇವತಿ ನಂದನ್ ರವರು ದೀಪ ಬೆಳಗಿಸಿ ಉದ್ಘಾಟಿಸಿದರು. ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ದಯಾಮಣಿ.ಕೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು. ಮತದಾರರ ಸಾಕ್ಷರತಾ ಸಂಘದ ಸಂಘಟಕರಾದ ದಾಮೋದರ. ಎನ್ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮವನ್ನು ನಿರ್ವಹಿಸಿದರು. ಸುಳ್ಯ ತಾಲೂಕಿನ ಎಲ್ಲಾ 12 ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ರಸಪ್ರಶ್ನೆ, ಪ್ರಬಂಧ ಮತ್ತು ಪೋಸ್ಟರ್ ಮೇಕಿಂಗ್ ಸ್ಪರ್ಧೆಗಳಲ್ಲಿ ಭಾಗವಹಿಸಿದರು.
ಅರ್ಥಶಾಸ್ತ್ರ ಉಪನ್ಯಾಸಕಿ ಸ್ವರ್ಣ ಕಲಾ. ಎ . ಎಸ್ ಅವರು ಸ್ವಾಗತಿಸಿ ಇತಿಹಾಸ ಉಪನ್ಯಾಸಕ ಪ್ರಸನ್ನ ಎನ್. ಎಚ್ ಧನ್ಯವಾದ ಸಮರ್ಪಿಸಿದರು.