ಕನಕಮಜಲಿನಲ್ಲಿ ಮೇಳೈಸಿದ ರಾಷ್ಟ್ರೀಯ ನೃತ್ಯೋತ್ಸವ

0

ಮೂರ್ಜೆ ಮುತ್ತಣ್ಣ ಗೌಡ ಮತ್ತು ಶ್ರೀಮತಿ ನಳಿನಿ ಮುತ್ತಣ್ಣ ಸ್ಮಾರಕ ಮೇದಿ‌ನಿ ಉತ್ಸವ

ರಾಷ್ಟ್ರಮಟ್ಟದ ನೃತ್ಯ ಕಲಾವಿದರಿಂದ ವಿವಿಧ ನೃತ್ಯ ಪ್ರದರ್ಶನ

ಶ್ರೀ ಗುರುದೇವ ಲಲಿತಕಲಾ ಅಕಾಡೆಮಿ ವತಿಯಿಂದ ರಾಷ್ಟ್ರೀಯ ನೃತ್ಯೋತ್ಸವ, ಮೂರ್ಜೆ ಮುತ್ತಣ್ಣ ಗೌಡ ಮತ್ತು ಶ್ರೀಮತಿ ನಳಿನಿ ಮುತ್ತಣ್ಣ ಸ್ಮಾರಕ ಮೇದಿನಿ ಉತ್ಸವವು ಕನಕಮಜಲಿನ ಕನಕಕಲಾ ಗ್ರಾಮದ ಗುರುದೇವ ನಿಲಯದಲ್ಲಿ ನ.25 ರಂದು ಜರುಗಿತು.

ಕಾರ್ಯಕ್ರಮವನ್ನು ಪದ್ಮಶ್ರೀ ಪುರಸ್ಕೃತ ಡಾ. ಗಿರೀಶ್ ಭಾರದ್ವಾಜ್ ಅವರು ದೀಪ ಬೆಳಗಿಸಿ, ಉದ್ಘಾಟಿಸಿ, ಶುಭಹಾರೈಸಿದರು.

ಕೊಡಗು ಜಿಲ್ಲಾ ಸಾಹಿತ್ಯ ಪರಿಷತ್ ಕೋಶಾಧಿಕಾರಿ ಸಂಪತ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಕಲಾವಿದ ನಾರಾಯಣ್, ವಿದುಷಿ ನಯನ ರೈ, ವಿದ್ವಾನ್ ದೀಪಕ್ ಕುಮಾರ್, ಮಹಾಲಸಾ ದೃಶ್ಯ ಕಲಾ ಮಹಾವಿದ್ಯಾಲಯದ ಅನ್ವಯ ಕಲಾ ವಿಭಾಗದ ಮುಖ್ಯಸ್ಥ ಸಯ್ಯದ್ ಆಸೀಫ್ ಆಲಿ, ಕನಕಮಜಲು ಗ್ರಾ. ಪಂ. ಅಧ್ಯಕ್ಷೆ ಶಾರದಾ ಉಗ್ಗಮೂಲೆ ಉಪಸ್ಥಿತರಿದ್ದರು.

ಗೌರವ ಉಪಸ್ಥಿತರಾಗಿ ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕೃತಿ ಅಕಾಡೆಮಿ ಮಾಜಿ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ, ಕನಕಮಜಲು ಸಹಕಾರಿ ಸಂಘದ ಅಧ್ಯಕ್ಷ ನಾರಾಯಣ ಗೌಡ ಬೊಮ್ಮೆಟ್ಟಿ, ಮಹಿಳಾ ಮಂಡಲದ ಅಧ್ಯಕ್ಷೆ ಕುಸುಮ, ಕನಕಮಜಲು ಯುವಕ ಮಂಡಲದ ಅಧ್ಯಕ್ಷ ರಕ್ಷಿತ್ ಅಕ್ಕಿಮಲೆ, ಕಲಾ ಪೋಷಕ ರವಿಶಂಕರ ಕಲ್ಲೂರಾಯ, ಲೇಖಕ ಕುಮಾರ್ ಪೆರ್ನಾಜೆ, ಬಾಲಕೃಷ್ಣ ಗೌಡ ಮೂರ್ಜೆ, ಹರೀಶ್ ಮೂರ್ಜೆ, ಶ್ರೀಮತಿ ನಳಿನಾಕ್ಷಿ ಪಲ್ಲತಡ್ಕ, ತೀರ್ಥಾನಂದ ದುಗ್ಗಳ ಮೊದಲಾದವರು ಉಪಸ್ಥಿತರಿದ್ದರು.

ಬೆಳ್ಳಾರೆ ಡಾ. ಶಿವರಾಮ ಕಾರಂತ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ದಾಮೋದರ ಕಣಜಾಲು ಕಾರ್ಯಕ್ರಮ ನಿರೂಪಿಸಿದರು.

ಸಭಾ ಕಾರ್ಯಕ್ರಮಕ್ಕೂ ಮೊದಲು ಶ್ರೀ ಕನಕದಾಸ ಮಕ್ಕಳ ಭಜನಾ ತಂಡದವರಿಂದ ಕುಣಿತ ಭಜನೆ ನಡೆಯಿತು.

ರಾಷ್ಟ್ರೀಯ ನೃತ್ಯೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರಮಟ್ಟದ ನೃತ್ಯ ಕಲಾವಿದರಿಂದ ವಿವಿಧ ನೃತ್ಯ ಪ್ರದರ್ಶನ ನಡೆಯುತ್ತಿದೆ.

ಶ್ರೀ ಗುರುದೇವ ಲಲಿತಕಲಾ ಅಕಾಡೆಮಿಯ ವ್ಯವಸ್ಥಾಪಕ ನಿರ್ದೇಶಕರಾದ ರಾಧಾಕೃಷ್ಣ ಮೂರ್ಜೆ, ನಿರ್ದೇಶಕಿ ಶ್ರೀಮತಿ ಚೇತನಾ ರಾಧಾಕೃಷ್ಣ ಮೂರ್ಜೆಯವರು ಕಲಾವಿದರನ್ನು ಗೌರವಿಸಿದರು.