ದತ್ತಿನಿಧಿ ಪುರಸ್ಕಾರ – ಲಯನ್ಸ್ ಕ್ಲಬ್ ವತಿಯಿಂದ ಟ್ರ್ಯಾಕ್ ಪ್ಯಾಂಟ್ ಮತ್ತು ಟೀಶರ್ಟ್ ವಿತರಣೆ
ಕನಕಮಜಲು ಗ್ರಾಮದ ಮುಗೇರು – ಮಾಣಿಮಜಲು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಹಾಗೂ ದತ್ತಿನಿಧಿ ವಿತರಣಾ ಕಾರ್ಯಕ್ರಮವು ನ.14ರಂದು ನಡೆಯಿತು.
ಈ ಸಂದರ್ಭದಲ್ಲಿ ಶಾಲಾ ಮಕ್ಕಳಿಗೆ ದತ್ತಿನಿಧಿ ಪುರಸ್ಕಾರ ಮಾಡಲಾಯಿತು. ಸುಳ್ಯ ಲಯನ್ಸ್ ಕ್ಲಬ್ ವತಿಯಿಂದ ಶಾಲಾ ಮಕ್ಕಳಿಗೆ ಟ್ರ್ಯಾಕ್ ಪ್ಯಾಂಟ್ ಮತ್ತು ಟೀಶರ್ಟ್ ವಿತರಿಸಲಾಯಿತು. ಕನಕಮಜಲು ಯುವಕ ಮಂಡಲದ ವತಿಯಿಂದ ಆಟೋಟ ಸ್ಪರ್ಧೆಯ ಬಹುಮಾನ ವಿತರಿಸಲಾಯಿತು. ಶ್ರೀಮತಿ ಶ್ಯಾಮಲ ಮಠ ಮತ್ತು ಮನೆಯವರು ಮಕ್ಕಳಿಗೆ ಬೇಕಾದ ಕಲಿಕಾ ಕಿಟ್ ಗಳನ್ನು ಒದಗಿಸಿದರು.
ಶಾಲಾ ಮಾಜಿ ಎಸ್.ಡಿ.ಎಂ.ಸಿ. ಅಧ್ಯಕ್ಷ ಹಾಗೂ ಅತಿಥಿಶಿಕ್ಷಕರನ್ನು ಈ ವೇಳೆ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿ ನಾಯಕ ಪ್ರದೀಶ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ ದಿವಾಕರ ಕಾಳಪ್ಪಜ್ಜನಮನೆ, ಕನಕಮಜಲು ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಶಾರದಾ ಉಗ್ಗಮೂಲೆ, ಗ್ರಾ.ಪಂ. ಸದಸ್ಯರುಗಳಾದ ಶ್ರೀಧರ ಕುತ್ಯಾಳ, ಶ್ರೀಮತಿ ದೇವಕಿ ಕುದ್ಕುಳಿ, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಶ್ರೀಮತಿ ಸರೋಜಿನಿ, ಕನಕಮಜಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ನಾರಾಯಣ ಗೌಡ ಬೊಮ್ಮೆಟ್ಟಿ, ಶಾಲಾ ಎಸ್.ಡಿ.ಎಂ.ಸಿ. ಉಪಾಧ್ಯಕ್ಷೆ ಶ್ರೀಮತಿ ಸಾವಿತ್ರಿ ಕುದ್ಕುಳಿ, ಸುಳ್ಯದ ಎಲ್ಲೈಸಿ ಶಾಖಾಧಿಕಾರಿ ಗುರುದತ್ ನಾಯಕ್, ಸುಳ್ಯ ಲಯನ್ಸ್ ಕ್ಲಬ್ ಅಧ್ಯಕ್ಷ ರಾಮಕೃಷ್ಣ ರೈ, ಕಾರ್ಯದರ್ಶಿ ರಾಮಚಂದ್ರ ಪಲ್ಲತ್ತಡ್ಕ, ಸಂಯೋಜಕ ಕಿರಣ್ ನೀರ್ಪಾಡಿ, ನಿರ್ದೇಶಕ ರಂಗನಾಥ್ ಪಿ.ಎಂ., ಜಾಲ್ಸೂರಿನ ಎಲ್ಲೈಸಿ ಜೀವವಿಮಾ ಪ್ರತಿನಿಧಿ ಮಾದವ ಜಾಲ್ಸೂರು, ಕನಕಮಜಲು ಯುವಕ ಮಂಡಲದ ಅಧ್ಯಕ್ಷ ಹರ್ಷಿತ್ ಉಗ್ಗಮೂಲೆ, ನಿವೃತ್ತ ಶಿಕ್ಷಕ ಆನಂದ ಮಾಸ್ತರ್ ಅಕ್ಕಿಮಲೆ, ಗ್ರಾ.ಪಂ. ಮಾಜಿ ಅಧ್ಯಕ್ಷ ವಸಂತ ಗಬ್ಬಲಡ್ಕ ಉಪಸ್ಥಿತರಿದ್ದರು.
ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ರತಿ ಅವರು ಸ್ವಾಗತಿಸಿ, ವಂದಿಸಿದರು. ಸಹಶಿಕ್ಷಕಿ ಶುಭ ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿತು.