ಸುಳ್ಯ ಸರಕಾರಿ‌ ನೌಕರರ ಸಂಘ : ರಾಜ್ಯ‌ ಪರಿಷತ್ ಸದಸ್ಯತ್ವಕ್ಕೆ ನಡೆದ ಚುನಾವಣೆ

0

ನ್ಯಾಯಾಂಗ ಇಲಾಖೆಯ ಮಂಜು ಗೆಲುವು

ಸುಳ್ಯ ತಾಲೂಕು‌ ಸರಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯತ್ವಕ್ಕೆ ನಡೆದ ಚುನಾವಣೆಯಲ್ಲಿ ಮಂಜು ಆಯ್ಕೆಯಾಗಿದ್ದಾರೆ.

ರಾಜ್ಯ ಪರಿಷತ್ ಸದಸ್ಯತ್ವಕ್ಕೆ ಸುಳ್ಯ ಬಿ.ಇ.ಒ. ಕಚೇರಿಯ ಪ್ರಥಮ ದರ್ಜೆ ಸಹಾಯಕ ಶಿವಪ್ರಸಾದ್ ಕೆ.ವಿ. ಹಾಗೂ ನ್ಯಾಯಾಂಗ ಇಲಾಖೆಯ ಮಂಜು ಸ್ಪರ್ಧಿಸಿದ್ದರು.

ಸರಕಾರಿ‌ ನೌಕರರ ಸಂಘದ 33 ಮಂದಿ‌ ನಿರ್ದೇಶಕರು ಮತದಾರರಾಗಿದ್ದರು. ಬೆಳಗ್ಗೆ 9 ಗಂಟೆಯಿಂದ ಮತದಾನ ಆಭಗೊಂಡು ಸಂಜೆ 4 ಗಂಟೆಗೆ ಮತದಾನ ನಡೆಯಿತು. ಸಂಜೆ ಮತ ಎಣಿಕೆ ನಡೆದಾಗ ನ್ಯಾಯಾಂಗ ಇಲಾಖೆಯ ಮಂಜು 23 ಮತ ಪಡೆದು ಗೆಲುವು ಸಾಧಿಸಿದರೆ, ಬಿ.ಇ.ಒ. ಕಚೇರಿಯ ಶಿವಪ್ರಸಾದ್ ಕೆ.ವಿ. 10 ಮತ ಪಡೆದು ಪರಾಭವಗೊಂಡರು.

ನಿವೃತ್ತ ಅಧ್ಯಾಪಕ ಅಚ್ಚುತ ಮರ್ಕಂಜ ರವರು ಚುನಾವಣಾಧಿಕಾರಿಯಾಗಿದ್ದರು. ಸಿಆರ್ ಪಿ ಶ್ರೀಮತಿ ಮಮತಾ ಸಹಾಯಕ ಚುನಾವಣಾಧಿಕಾರಿಯಾಗಿದ್ದರು.