ಚೊಕ್ಕಾಡಿ ರಾಮ ದೇವಾಲಯದಲ್ಲಿ ಭಜಕರ ಸಂಂಘಟನೆಯ ಭಜನೋತ್ಸವ- ಸಾಯಿ ಮಂದಿರದ ಬಳಿಯಂದ ಭಜನಾ ಮೆರವಣಿಗೆಗೆ ಚಾಲನೆ

0

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ,ಸುಳ್ಯ ತಾಲೂಕು ಭಜನಾ ಪರಿಷತ್ ,ಭಜನೋತ್ಸವ ಸಮಿತಿ ದೊಡ್ಡತೋಟ ವಲಯ ಹಾಗೂ ತಾಲೂಕಿನ ಭಜನಾ ಮಂಡಳಿಯ ಸಹಯೋಗದಲ್ಲಿ ಭಜಕರ ಸಂಘಟನೆಯ ಉದ್ದೇಶಕ್ಕಾಗಿ ಭಜನೋತ್ಸವ ಕಾರ್ಯಕ್ರಮವು ಚೊಕ್ಕಾಡಿ ಶ್ರೀ ರಾಮ ದೇವಾಲಯದ ದೇಸಿ ಭವನದಲ್ಲಿ ನ.26 ರಂದು ನಡೆಯಿತು.

ಬೆಳಗ್ಗೆ ಕ್ಷೇತ್ರದಲ್ಲಿ ಅರ್ಚಕ ಮಹೇಶ್ ಭಟ್ ಚೂಂತಾರು ರವರ ನೇತೃತ್ವದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ದೇವರ ಪೂಜೆಯು ನಡೆಯಿತು.
ಬಳಿಕ ಭಗವಾನ್ ಶ್ರೀ ಸತ್ಯ ಸಾಯಿ ವಿದ್ಯಾ ಮಂದಿರದ ಗಣಪತಿ ಗುಡಿಯಲ್ಲಿ ದೇವರಿಗೆ ಮಂಗಳಾರತಿ ಬೆಳಗಿ, ತೆಂಗಿನಕಾಯಿಯ ಒಡೆದು ಸತ್ಯ ಸಾಯಿ ಸೇವಾ ಟ್ರಸ್ಟ್ ಅಧ್ಯಕ್ಷ ಲಕ್ಷ್ಮೀ ನಾರಾಯಣ ಕೋಟೆ ಯವರು ಮೆರವಣಿಗೆಗೆ ಚಾಲನೆ ನೀಡಿದರು.

ಆಕರ್ಷಕ ಕುಣಿತ ಭಜನೆಯು ಚೊಕ್ಕಾಡಿಯ ಉಳ್ಳಾಕುಲು ದೈವದ ಕಟ್ಟೆಗೆ ಸುತ್ತು ಹಾಕಿ ತೆಂಗಿನಕಾಯಿಯ ಒಡೆದು ರಾಮ ದೇವಾಲಯದ ತನಕ ವಿಜೃಂಭಣೆಯಿಂದ ಸಾಗಿ ಬಂತು.

ಉದ್ಘಾಟನಾ ಸಮಾರಂಭ:

ಭಜನೋತ್ಸವದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ತಾಲೂಕು ಭಜನಾ ಪರಿಷತ್ ಅಧ್ಯಕ್ಷ ಯತೀಶ್ ರೈ ದುಗಲಡ್ಕ ವಹಿಸಿದ್ದರು.
ಹಿರಿಯರು ಪ್ರಗತಿಪರ ಕೃಷಿಕ ಆನೆಕಾರ ಗಣಪಯ್ಯ ರವರು ದೀಪ ಪ್ರಜ್ವಲಿಸಿದರು. ಈ ಸಂದರ್ಭದಲ್ಲಿ ಮುಖ್ಯ ಅಭ್ಯಾಗತರಾಗಿ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಕಮ್ಮಟದ ಸಂಚಾಲಕ ಸುಬ್ರಹ್ಮಣ್ಯ ಪ್ರಸಾದ್ ಧರ್ಮಸ್ಥಳ, ಪರಿಷತ್ ರಾಜ್ಯಾಧ್ಯಕ್ಷ ಬಾಲಕೃಷ್ಣ ಪಂಜ, ಸುಳ್ಯ ಯೋಜನಾಧಿಕಾರಿ ನಾಗೇಶ್ ಪಿ, ಜನಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷ ವಿಶ್ವನಾಥ ರೈ ಕಳಂಜ, ಪರಿಷತ್ ಗೌರವಾಧ್ಯಕ್ಷರಾದ ವಿಶ್ವನಾಥ ರೈ ಅರ್ಗುಡಿ, ಶಿವಪ್ರಸಾದ್ ಆಲೆಟ್ಟಿ,
ಭಜನೋತ್ಸವ ಸಮಿತಿ ಅಧ್ಯಕ್ಷ ನಾರಾಯಣ ಕೋಡ್ತುಗುಳಿ,
ಪರಿಷತ್ ಕಾರ್ಯದರ್ಶಿ ಸತೀಶ್ ಟಿ.ಎನ್, ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಮೀನಾ, ವಲಯದ ಅಧ್ಯಕ್ಷ ನಾರಾಯಣ ಕಳಂಜ ಉಪಸ್ಥಿತರಿದ್ದರು.

ಪೂರ್ಣಿಮಾ ಮತ್ತು ಬಳಗದವರುಪ್ರಾರ್ಥಿಸಿದರು. ಸಮಿತಿ ಅಧ್ಯಕ್ಷ ನಾರಾಯಣ ಕೋಡ್ತುಗುಳಿ ಸ್ವಾಗತಿಸಿದರು. ಪರಿಷತ್ ಗೌರವಾಧ್ಯಕ್ಷ ಶಿವಪ್ರಸಾದ್ ಆಲೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಕೋಶಾಧಿಕಾರಿ ಮಹೇಶ್ ಮೇರ್ಕಜೆ ವಂದಿಸಿದರು. ನಿರ್ದೇಶಕ ದಯಾನಂದ ಕೊರತ್ತೋಡಿ,ಮೇಲ್ವಿಚಾರಕ ಕೃಷ್ಣಪ್ಪ ಎಂ ಕಾರ್ಯಕ್ರಮ ನಿರೂಪಿಸಿದರು.

ತಾಲೂಕಿನ ಭಜನಾ ಮಂಡಳಿಯ ಸದಸ್ಯರು ಹಾಗೂ ಸ್ಥಳೀಯ ಸಂಘ ಸಂಸ್ಥೆಯ ಸದಸ್ಯರು, ಯೋಜನೆಯ ಮೇಲ್ವಿಚಾರಕರು, ಸೇವಾ ಪ್ರತಿನಿಧಿಗಳು , ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರು ಸ್ವಯಂ ಸೇವಕರಾಗಿ ಸಹಕರಿಸಿದರು.