ಅಯ್ಯನಕಟ್ಟೆ ಶ್ರೀ ಇಷ್ಟದೇವತಾ ಉಳ್ಳಾಕುಲು ಸೇವಾ ಸಮಿತಿಯ ಭಕ್ತಾಧಿಗಳ ಸಭೆ

0

ಅಯ್ಯನಕಟ್ಟೆ ಶ್ರೀ ಇಷ್ಟದೇವತಾ ಉಳ್ಳಾಕುಲು ಸೇವಾ ಸಮಿತಿ ಮೂರುಕಲ್ಲಡ ಇದರ ಭಕ್ತಾಧಿಗಳ ಸಭೆ ನ.25 ರಂದು ನಡೆಯಿತು. ಸಭೆಯಲ್ಲಿ ಜಾತ್ರೋತ್ಸವ ಬಗ್ಗೆ ಚರ್ಚಿಸಲಾಯಿತು. ವಿವಿಧ ಸಮಿತಿಗಳನ್ನು ಪುನರ್ ರಚಿಸಲಾಯಿತು.

ವೇದಿಕೆಯಲ್ಲಿ ಅಯ್ಯನಕಟ್ಟೆ ಶ್ರೀ ಇಷ್ಟದೇವತಾ ಉಳ್ಳಾಕುಲು ಸೇವಾ ಸಮಿತಿಯ ಅಧ್ಯಕ್ಷ ಚೆನ್ನಪ್ಪ ಗೌಡ ಕಜೆಮೂಲೆ, ಜಾತ್ರೋತ್ಸವ ಸಮಿತಿ ಅಧ್ಯಕ್ಷ ಶ್ರೀನಾಥ್ ರೈ ಬಾಳಿಲ, ಕಾರ್ಯಾಧ್ಯಕ್ಷ ಚಂದ್ರಶೇಖರ ರೈ, ಗೌರವಾಧ್ಯಕ್ಷ ಪುರಂದರ ಗೌಡ, ಕಾರ್ಯದರ್ಶಿ ಪ್ರಶಾಂತ್ ಕಿಲಂಗೋಡಿ, ಉಪಾಧ್ಯಕ್ಷ ಅನಂತಕೃಷ್ಣ ತಂಟೆಪ್ಪಾಡಿ, ಕೋಶಾಧಿಕಾರಿ ಪ್ರಭಾಕರ ಆಳ್ವ, ವಿಶ್ವಸ್ಥರುಗಳಾದ ಶೀನಪ್ಪ ಗೌಡ, ವೆಂಕಟ್ರಮಣ ತಂಟೆಪ್ಪಾಡಿ, ಸಲಹೆಗಾರರಾದ ರಾಂ ಪ್ರಸಾದ್ ಕಾಂಚೋಡು, ರಾಮಚಂದ್ರ ರಾವ್ ಉಪಸ್ಥಿತರಿದ್ದರು.

ಪ್ರಶಾಂತ್ ಕಿಲಂಗೋಡಿ ಸ್ವಾಗತಿಸಿದರು. ರಾಂ ಪ್ರಸಾದ್ ಪ್ರಾಸ್ತಾವಿಕವಾಗಿ ಮಾತನಾಡಿದರು.