ಪೂರ್ವ ಸಂಪ್ರದಾಯದಂತೆ ಗುಹೆ ಪ್ರವೇಶ
ಶ್ರೀ ದೇವರ ಉತ್ಸವ ಬಲಿ, ಪ್ರಸಾದ ವಿತರಣೆ, ಅನ್ನಸಂತರ್ಪಣೆ
ಸುಳ್ಯ ಕಾಸರಗೋಡು ಗಡಿ ಪ್ರದೇಶವಾದ ಬಂದಡ್ಕ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಷಷ್ಠಿ ಮಹೋತ್ಸವವು ಇಂದು ಬ್ರಹ್ಮಶ್ರೀ ಇರಿವಲ್ ಕೇಶವ ತಂತ್ರಿಗಳ ನೇತೃತ್ವದಲ್ಲಿ ನಡೆಯಿತು. ಪ್ರಾತಃ ಕಾಲ ಮಹಾಗಣಪತಿ ಹೋಮ, ಉಷಾಪೂಜೆ, ರಾಶಿಪೂಜೆ ತುಲಭಾರ ಸೇವೆ ನಡೆಯಿತು.
ಬಳಿಕ ಇತಿಹಾಸ ಪ್ರಸಿದ್ಧವಾದ ಷಷ್ಠಿ ದಿನದಂದು ಮಾತ್ರ ನಡೆಯುವ ಸುಬ್ರಹ್ಮಣ್ಯ ದೇವಾಲಯದ ಪಕ್ಕದಲ್ಲಿರುವ ಗುಹೆ ಪ್ರವೇಶ ನಡೆಯಿತು. ಸುಮಾರು 100ಕ್ಕೂ ಹೆಚ್ಚು ಭಕ್ತರು ಸುಬ್ರಹ್ಮಣ್ಯ ದೇವರ ನಾಮಸ್ಮರಣೆಯೊಂದಿಗೆ ಗುಹೆ ಪ್ರವೇಶಿಸಿ ಮೃತ್ತಿಕೆ ತಂದು ಶ್ರೀ ದೇವರ ಭಕ್ತರಿಗೆ ವಿತರಿಸಿ, ಪುನೀತರಾದರು.
ಬಳಿಕ ದೇವಸ್ಥಾನದಲ್ಲಿ ನವಕಾಭಿಷೇಕ ಮಧ್ಯಾಹ್ನ ಮಹಾಪೂಜೆ, ಶ್ರೀ ಭೂತಬಲಿ, ದರ್ಶನಬಲಿ, ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ, ಅನ್ನದಾನ ನಡೆಯಿತು.
ಈ ಸಂದರ್ಭದಲ್ಲಿ ಆಡಳಿತ ಮೊಕ್ತೇಸರ ಬಿ.ಸದಾನಂದ ರೈ, ಅಧ್ಯಕ್ಷರಾದ ಶುಭಾಶ್ವಂದ್ರ ರೈ ತೋಟ, ಉಪಾಧ್ಯಕ್ಷರಾದ ಬೋಜಪ್ಪ ಗೌಡ ಪಾಲಾರುಮೂಲೆ, ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಬೊಡ್ಡನಕೊಚ್ಚಿ ಸೇತಿದಂತೆ ಸಾವಿರಕ್ಕೂ ಹೆಚ್ಚು ಭಕ್ತರು, ದೇವಾಲಯದ ವಿವಿಧ ಸಮಿತಿಗಳ ಭಕ್ತರು ಪಾಲ್ಗೊಂಡು ದೇವರ ಪ್ರಸಾದ ಸ್ವೀಕರಿಸಿದರು.