ಮಂಡೆಕೋಲು : ಶ್ರಮ ವಿನಿಮಯ ಕಾರ್ಯಕ್ರಮ

0

ಒಡಿಯೂರು ಶ್ರೀ ವಯನಾಟ್ ಕುಲವನ್ ವಿಕಾಸ ವಾಹಿನಿ ಸ್ವ ಸಹಾಯ ಸಂಘ ಕಣೆಮರಡ್ಕ ಮಂಡೆಕೋಲು ಈ ತಂಡದ ಸದಸ್ಯರು ವಾರದ ಸಭೆ ಯ ಜೊತೆ ಸದಸ್ಯರ ಮನೆಯಲ್ಲಿ ಶ್ರಮವಿನಿಮಯ ಡಿ.20ರಂದು ನಡೆಯಿತು.

ಇದರ ವಾರ್ಷಿಕ ದಿನವನ್ನು ಸದಸ್ಯರಾದ ಸರಸ್ವತಿ ಉದ್ಧಾರ ಕಣೆಮರಡ್ಕ ಇವರ ಮನೆಯಲ್ಲಿ ಸರಳವಾಗಿ ಆಚರಿಸಿದರು. ಅಧ್ಯಕ್ಷತೆಯನ್ನು ತಂಡದ ಅಧ್ಯಕ್ಷರಾದ ವನಜಾಕ್ಷಿ ವಹಿಸಿದ್ದರು. ಮನೆಯ ಹಿರಿಯರಾದ ಸರಸ್ವತಿ ರವರು ದೀಪ ಬೆಳಗಿಸಿ ಉದ್ಘಾಟಿಸಿದರು. ತಂಡದ ಸದಸ್ಯರಾದ ಸುಜಾತಾ ರವರು ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ವಲಯ ಸಂಯೋಜಕಿ ಶ್ರೀಮತಿ ರೇವತಿ ರವರು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಗ್ರಾಮ ಸೇವಾಧೀಕ್ಷಿತೆ ಶ್ರೀಮತಿ ಸರೋಜಿನಿ ಹಾಗೂ ತಂಡದ ಸದಸ್ಯರು ಉಪಸ್ಥಿತರಿದ್ದರು.