ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ ಟ್ರಸ್ಟ್ ಸುಳ್ಯ ಹಾಗೂ ಬಾರ್ಬಾರ್ಸ್ ಅಸೋಸಿಯೇಶನ್ ವತಿಯಿಂದ ಡಿ. 26 ರಂದು ಸುಳ್ಯ ಯೋಜನಾ ಕಛೇರಿ ಸಭಾಂಗಣದಲ್ಲಿ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯ ಪ್ರಾಥಮಿಕ ಹಂತದ ಮಾಹಿತಿ ಕಾರ್ಯಗಾರ ಹಾಗೂ ನೋಂದಾವಣೆಯು ನಡೆಯಿತು.
ಸುಳ್ಯ ತಾಲೂಕು
ಯೋಜನಾಧಿಕಾರಿ ನಾಗೇಶ್ .ಪಿ ಕಾರ್ಯಕ್ರಮ ಉದ್ಘಾಟಿಸಿದರು.
18 ಸಾಂಪ್ರದಾಯಿಕ ಕಸುಬುಗಳನ್ನು ಒಳಗೊಂಡ ಪಿ.ಎಮ್ ವಿಶ್ವಕರ್ಮ ಯೋಜನೆ ಇದಾಗಿದ್ದು ಇವುಗಳಲ್ಲಿ ಬಡಗಿ ಕೆಲಸಗಾರರು, ಕಮ್ಮಾರರು, ಕುಂಬಾರರು, ಅಕ್ಕಸಾಲಿಗರು, ಮೂರ್ತಿ ಮಾಡುವ ಶಿಲ್ಪಿ, ಕಲ್ಲು ಒಡೆಯುವವರು, ಚಮ್ಮಾರ, ಪಾದರಕ್ಷೆ ತಯಾರಕರು, ಗಾರೆ ಮೇಸ್ತ್ರಿಗಳು, ಬುಟ್ಟಿ , ಚಾಪೆ, ಹಿಡಿಸೂಡಿ ತಯಾರಕರು,ಸೆಣಬು ನೇಕಾರರು, ಗೊಂಬೆ, ಆಟಿಕೆ ತಯಾರಕರು, ಕ್ಷೌರಿಕರು, ಮಾಲೆ ತಯಾರಕರು, ಧೋಬಿ ಅಥವಾ ಮಡಿವಾಳರು, ಟೈಲರ್, ಸುತ್ತಿಗೆ ಮತ್ತು ಇತರೆ ಸಾಮಾಗ್ರಿ ತಯಾರಕರು ಇದರ ಕುರಿತು ಸಿ.ಎಸ್.ಸಿ ವಿಭಾಗದ ಜಿಲ್ಲಾ ಪ್ರಬಂಧಕ ಗೋವರ್ಧನ್ ರವರು ವಿಶ್ವಕರ್ಮ ಯೋಜನೆಯ ಕುರಿತು ಮಾಹಿತಿ ನೀಡಿದರು. ಸಿ.ಎಸ್.ಸಿ ಕಾರ್ಯಕ್ರಮ ಮತ್ತು ಸವಲತ್ತುಗಳ ಕುರಿತು ಸಿ.ಎಸ್.ಸಿ ವಿಭಾಗದ ಜಿಲ್ಲಾ ನೋಡೆಲ್ ಅಧಿಕಾರಿ ರಾಮ್ ರವರು ಮಾಹಿತಿ ನೀಡಿದರು.
ತರಬೇತಿಕಾರ್ಯಾಗಾರದಲ್ಲಿ 70 ಮಂದಿ ಭಾಗವಹಿಸಿ ನೊಂದಾವಣೆ ಮಾಡಿದರು.
ಈ ಸಂದರ್ಭದಲ್ಲಿ ಸುಳ್ಯ ಬಾರ್ಬಾಸ್ ಅಸೋಸಿಯೇಷನ್ ಅಧ್ಯಕ್ಷ ಪದ್ಮನಾಭ ಭಂಡಾರಿ ಜಟ್ಟಿಪಳ್ಳ, ಕಾರ್ಯದರ್ಶಿ ಭವಾನಿ ಶಂಕರ್ ಕೇರ್ಪಳ, ಕೋಶಾಧಿಕಾರಿ ಧನಂಜಯ ಮೂರ್ನಾಡ್, ಸಿ.ಎಸ್.ಸಿ ವಿಭಾಗದ ತಾಲೂಕು ನೋಡೆಲ್ ಅಧಿಕಾರಿ ಹೇಮಂತ್ ಉಪಸ್ಥಿತರಿದ್ದರು. ಭವಾನಿ ಶಂಕರ್ ಕೇರ್ಪಳ ಸ್ವಾಗತಿಸಿದರು. ಉದಯ್ ವಂದಿಸಿದರು.