ಗ್ರಾಮ ಪಂಚಾಯತ್ ಮಕ೯ಂಜ ಮತ್ತು ಬ್ಯಾಂಕ್ ಆಫ್ ಬರೋಡ ದೊಡ್ಡತೋಟ ಇವುಗಳ ಜಂಟಿ ಆಶ್ರಮದಲ್ಲಿ ಭಾರತ ವಿಕಸಿತ ಸಂಕಲ್ಪ ಯಾತ್ರೆ ಕಾಯ೯ಕ್ರಮ ನಡೆಯಿತು.
ಗ್ರಾಮ ಪಂಚಾಯತ್ ಅಧ್ಯಕ್ಷೆ ಗೀತಾ ಹೋಸೋಳಿಕೆ ಅಧ್ಯಕ್ಷತೆ ವಹಿಸಿ ಕಾಯ೯ಕ್ರಮವನ್ನು ಉದ್ಘಾಟಿಸಿದರು. ಬ್ಯಾಂಕ್ ಮಿತ್ರರಾದ ಸವಿತಾ ಕಾಯರ ಪ್ರಾಸ್ತಾವಿಕ ಭಾಷಣ ಮಾಡಿದರು. ಪ್ರತಿಜ್ಞಾ ವಿಧಿ ಸ್ವೀಕಾರವನ್ನು ಪಂಚಾಯತ್ ಸಿಬ್ಬಂದಿ ನೇತ್ರಾವತಿ ನೆರವೇರಿಸಿದರು. ಬಳಿಕ ಸಂಕಲ್ಪ ವಿಕಸಿತ ಭಾರತ ರಥದ ಆಗಮನ, ಸಂಕಲ್ಪ ರಥದ ಸ್ವಾಗತವನ್ನು ಪೂಣ೯ಕುಂಭ ಸ್ವಾಗತದೊಂದಿಗೆ ಬರಮಾಡಿಕೊಂಡು ವೀಡಿಯೋ ಪ್ಲೇ ಮಾಡಲಾಯಿತು. ಕಾಯ೯ಕ್ರಮ ದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮನ್ವಿತರವರಿಗೆ, ಸ್ವ ಉದ್ಯೋಗ ದಲ್ಲಿ ಸಾಧನೆ ಮಾಡಿದ ಜೇನು ಕೃಷಿಯಲ್ಲಿ ಪ್ರಗತಿ ಕಂಡ ಲತಾ ಚೆನ್ನಕೇಶವ ಜೋಗಿಮೂಲೆ, ಹಿರಿಯ ಆಟಗಾರರಾದ ನಾರಾಯಣ ಅಜ್ಜಿಕಲ್ಲು ರವರನ್ನು ಸನ್ಮಾನಿಸಲಾಯಿತು. ಬಳಿಕ ಮಿತ್ತಡ್ಕ ಶಾಲಾ ಮಕ್ಕಳಿಂದ ಸಾಂಸ್ಕತಿಕ ಕಾಯ೯ಕ್ರಮ ನಡೆಯಿತು.
ಇದೇ ಸಂದರ್ಭದಲ್ಲಿ ನಡೆದ ಉಜ್ವಲ ಯೋಜನೆಯಡಿಯಲ್ಲಿ ಆಯ್ಕೆಯಾದ ಫಲಾನುಭವಿಗಳ ಗ್ಯಾಸ್ ಸಂಪಕ೯ಕ್ಕೆ ಆಧಾರ್ ಧೃಡೀಕರಣದ ಮಾಹಿತಿಯನ್ನು ಬುಡಿಯಾರ್ ಇಂಡಿಯನ್ ಗ್ಯಾಸ್ ಸಿಬ್ಬಂದಿ ಯವರು ನೆರವೇರಿಸಿದರು. ಗೃಹಲಕ್ಷ್ಮಿ ಯೋಜನೆಯ ಪಲಾನುಭವಿಗಳ ಬ್ಯಾಂಕ್ ಖಾತೆ ಗೆ ಕೆವೈಸಿ ಆಗದ ಬಗ್ಗೆ ಗ್ರಾಮ ಓನ್ ಕೇಂದ್ರ ದ ಮಾಲಕರಾದ ಭರತ್ ಬೊಮ್ಮಾರ್ ರವರು ನೆರವೇರಿಸಿದರು. ಸಿ ಹೆಚ್ ಒ ವೈಭವ ಪಲಾನುಭವಿಗಳ ಆರೋಗ್ಯ ತಪಾಸನೆ ಮತ್ತು ಮಾಹಿತಿ ನೀಡಿದರು. ವೇದಿಕೆಯಲ್ಲಿ ಬ್ಯಾಂಕ್ ಮೇನೇಜರ್ ಉದಯ ಕುಮಾರ್, ಪಂಚಾಯತ್ ಅಭಿವೃದ್ಧಿ ಆಧಿಕಾರಿಯವರಾದ ವಿದ್ಯಾದರ, ಗ್ರಾಮ ಪಂಚಾಯತ್ ಉಪಾಧ್ಯಕ್ಷ ರಾದ ಸಂಧ್ಯಾ ಸೇವಾಜೆ, ಪಂಚಾಯತ್ ಸದಸ್ಯರಾದ ಚಿತ್ತರಂಜನ್ ಕೋಡಿ, ಯಶವಂತ ಸೂಟೆಗದ್ದೆ ಉಪಸ್ಥಿತರಿದ್ದರು. ಅಭಿವೃದ್ಧಿ ಅಧಿಕಾರಿ ಸ್ವಾಗತಿಸಿ , ದಮಯಂತಿ ಪ್ರಾರ್ಥಿಸಿದರು. ಕಾಯ೯ಕ್ರಮ ಮದಲ್ಲಿ ಪಲಾನುಭವಿಗಳು,ಪಂಚಾಯತಿ ಸಿಬ್ಬಂದಿ ವಗ೯ದವರು, ಸಂಜೀವಿನಿ ಒಕ್ಕೂಟದ ಸದಸ್ಯರು, ಅಂಗನವಾಡಿಯ ಕಯ೯ಕತೆ೯ ಯವರು, ಮಿತ್ತಡ್ಕ ಶಾಲಾ ಮುಖ್ಯೋಪಾಧ್ಯಾಯ ರು, ವಿದ್ಯಾರ್ಥಿ ಯವರು ಭಾಗವಹಿಸಿದರು. ಪಂಚಾಯತಿ ಮಾಜಿ ಉಪಾಧ್ಯಕ್ಷ ರಾದ ಗೋವಿಂದ ಅಳವುಪಾರೆ ಕಾಯ೯ಕ್ರಮ ನಿರೂಪಿಸಿ, ವಂದಿಸಿದರು.