ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಕೊಡುವ ಕೆಲಸವನ್ನು ನಿನಾದ ಮಾಡುತ್ತಿದೆ: ಪಟ್ಲ ಸತೀಶ್ ಶೆಟ್ಟಿ
ನಿನಾದ ಸಾಂಸ್ಕೃತಿಕ ಕೇಂದ್ರ ತಂಟೆಪ್ಪಾಡಿ ಇದು ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಕೊಡುವ ಕೆಲಸವನ್ನು ಮಾಡುತ್ತಿದೆ. ಹಲವು ಮಕ್ಕಳನ್ನು, ಕಲಾವಿದರನ್ನು ಪೋಷಿಸುವ ಕೆಲಸ ನಿನಾದ ಮಾಡುತ್ತಿದೆ. ಸಮಾಜ ವಸಂತ ಶೆಟ್ಟಿಯವರ ನಿನಾದಕ್ಕೆ ನೈತಿಕ ಬೆಂಬಲ ನೀಡಲು ನಾವು ಮುಂದಾಗಬೇಕು ಎಂದು ಪಟ್ಲ ಫೌಂಡೇಶನ್ ನ ಸತೀಶ್ ಪಟ್ಲ ಕರೆಯಿತ್ತರು.
ಅವರು ಕಳಂಜ ಗ್ರಾಮದ ತಂಟೆಪ್ಪಾಡಿ ನಿನಾದ ಸಾಂಸ್ಕೃತಿಕ ಕೇಂದ್ರದಲ್ಲಿ ಡಿ.29 ರಂದು ನಡೆದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಬೆಳಾಲು ಶ್ರೀ ಮಂಜುನಾಥೇಶ್ವರ ಪ್ರೌಢಶಾಲಾ ಮುಖ್ಯ ಶಿಕ್ಷಣ ರಾಮಕೃಷ್ಣ ಭಟ್ ಚೂಂತಾರು ಮತ್ತು ಬಾಳಿಲ ವಿದ್ಯಾಬೋಧಿನೀ ಪ್ರೌಢಶಾಲಾ ಶಿಕ್ಷಕ ಉದಯಕುಮಾರ್ ರೈ ಶೇಣಿಯವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಖ್ಯಾತ ಉದ್ಯಮಿ ಶಶಿಧರ ಶೆಟ್ಟಿ ಬರೋಡ ವಹಿಸಿದ್ದರು. ನಿನಾದ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷ ಐತ್ತಪ್ಪ ಶೆಟ್ಟಿ, ಉಪಾಧ್ಯಕ್ಷ ವಾಸಪ್ಪ ಶೆಟ್ಟಿ, ಕಾರ್ಯದರ್ಶಿ ವಸಂತ ಶೆಟ್ಟಿ, ಟ್ರಸ್ಟಿ ಹಿತೈಷಿ ಶೆಟ್ಟಿ ವೇದಿಕೆಯಲ್ಲಿದ್ದರು. ಸಭೆಯಲ್ಲಿ ಶಶಿಧರ ಶೆಟ್ಟಿ, ಸತೀಶ್ ಪಟ್ಲ, ಪ್ರಮೋದ್ ಕುಮಾರ್ ರೈ ಮತ್ತು ವಿಧುಷಿ ಮಂಜುಶ್ರಿ, ಅಶೋಕ್ ಅವರುಗಳನ್ನು ಗೌರವಿಸಲಾಯಿತು.
ಹಿತೈಷಿ ಶೆಟ್ಟಿ ಸ್ವಾಗತಿಸಿ, ವಸಂತ ಶೆಟ್ಟಿ ವಂದಿಸಿದರು.
ಪ್ರಸಾದ್ ಸೇವಿತ ಕಾರ್ಯಕ್ರಮ ನಿರೂಪಿಸಿದರು.