ಸುಳ್ಯದಲ್ಲಿ ಲಯನ್ಸ್ ಪ್ರಾಂತೀಯ ಸಮ್ಮೇಳನ

0

ಡಾ. ಆರ್.ಕೆ. ನಾಯರ್ ಸಹಿತ 11 ಮಂದಿಗೆ ಎಂಜೆಎಫ್ ಫೆಲೋಶಿಪ್

ಲಯನ್ಸ್ ಪ್ರಾಂತೀಯ ಸಮ್ಮೇಳನ ‘ದಿಶಾನಿ’ ಸುಳ್ಯದ ಕೊಡಿಯಾಲಬೈಲು ಗೌಡ ಸಮುದಾಯ ಭವನದಲ್ಲಿ ಜ. 20 ರಂದು ಸಂಜೆ ನಡೆಯಿತು.

ಪ್ರಾಂತೀಯ ಪ್ರಥಮ ಲಯನ್ ಜಾಕೆ ಸದಾನಂದರವರು ಸಮ್ಮೇಳನ ಉದ್ಘಾಟಿಸಿ ಶುಭ ಹಾರೈಸಿದರು.

ಅಧ್ಯಕ್ಷತೆಯನ್ನು ಪ್ರಾಂತೀಯ ಅಧ್ಯಕ್ಷೆ ಶ್ರೀಮತಿ ರೇಣುಕಾ ಸದಾನಂದ ಜಾಕೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಮಂಗಳೂರು ಶ್ರೀ ರಾಮಕೃಷ್ಣ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಎಂ. ಬಾಲಕೃಷ್ಣ ಶೆಟ್ಟಿ, ಉಪಸ್ಥಿತರಿದ್ದು ಮಾತನಾಡಿ, ” ಜೀವನದಲ್ಲಿ ಗಾಂಧೀಜಿಯ ಸಪ್ತ ಸೂತ್ರಗಳನ್ನು ಅಳವಡಿಸಿಕೊಳ್ಳಬೇಕೆಂದು” ಹೇಳಿದರು.

ಲಯನ್ಸ್ ಮಾಜಿ ಗವರ್ನರ್ ಅರುಣ್ ಶೆಟ್ಟಿ ಗೌರವ ಉಪಸ್ಥಿತಿಯಲ್ಲಿದ್ದರು.
ಇದೇ ಸಂದರ್ಭ ಲಯನ್ಸ್ ಪ್ರಾಕೃತಿಕ ವಿಕೋಪಕ್ಕಾಗಿ ಹಾಗೂ ಇನ್ನಿತರ ಸೇವಾ ಚಟುವಟಿಕೆಗಳ ಎಲ್‌ಸಿಐಎಫ್ ಫಂಡ್‌ಗೆ ಒಂದು ಸಾವಿರ ಡಾಲರ್ ದೇಣಿಗೆ ನೀಡಿದ ಲಯನೇತರ, ಗ್ರೀನ್ ಹೀರೋ ಆಫ್ ಇಂಡಿಯಾ ಡಾ.ಆರ್.ಕೆ.ನಾಯರ್‌ರವರಿಗೆ, ಸುಳ್ಯ ಲಯನ್ಸ್ ಕ್ಲಬ್‌ನಿಂದ ಲಯನ್‌ಗಳಾದ ಜಾಕೆ ಸದಾನಂದ ಗೌಡ, ಪ್ರೊ. ಬಾಲಚಂದ್ರ ಗೌಡ, ಜಾನ್ ವಿಲಿಯಂ ಲಸ್ರಾದೋ, ಸುಬ್ರಹ್ಮಣ್ಯ ಲಯನ್ಸ್ ಕ್ಲಬ್‌ನಿಂದ ವಿಮಲಾ ರಂಗಯ್ಯ, ದಿನೇಶ್ ಆಚಾರ್ ಸುಬ್ರಹ್ಮಣ್ಯ, ಸಂಪಾಜೆ ಲಯನ್ಸ್ ಕ್ಲಬ್‌ನಿಂದ ಯೋಗೇಶ್ವರ್ ಸಂಪಾಜೆ, ಕಡಬ ಲಯನ್ಸ್ ಕ್ಲಬ್‌ನಿಂದ ಥೋಮಸ್, ಗುತ್ತಿಗಾರು ಲಯನ್ಸ್ ಕ್ಲಬ್‌ನಿಂದ ಲಿಜೋ ಜೋಸ್,ಬೆಳ್ಳಾರೆ ಜಲದುರ್ಗಾ ಲಯನ್ಸ್ ಕ್ಲಬ್‌ನಿಂದ ಎಸ್.ಬಿ. ಜಯರಾಮ್ ರೈ ಬಳೆಜ್ಜರವರಿಗೆ ಮತ್ತು ಪಂಜ ಲಯನ್ಸ್ ಕ್ಲಬ್‌ನಿಂದ ಶ್ರೇಯಾಂಸ್‌ಕುಮಾರ್ ಶೆಟ್ಟಿಮೂಲೆಯವರಿಗೆ ಎಂಜೆಎಫ್ ಪುರಸ್ಕಾರವನ್ನು ಪಡೆದುದಕ್ಕಾಗಿ ಲಯನ್ಸ್ ಪ್ರಾಂತ್ಯದಿಂದ ಗೌರವಿಸಿ ಸನ್ಮಾನಿಸಲಾಯಿತು.

ಇದೇ ಸಂದರ್ಭ ಕಡಬ, ಪಂಜ, ಸಂಪಾಜೆ ಲಯನ್ಸ್ ಕ್ಲಬ್‌ನವರು ನೂತನವಾಗಿ ನಿರ್ಮಿಸುತ್ತಿರುವ ಲಯನ್ಸ್ ಭವನಕ್ಕೆ ತಲಾ 20,000 ದಂತೆ ಒಟ್ಟು 6೦,೦೦೦ವನ್ನು ದೇಣಿಗೆ ನೀಡಲಾಯಿತು.

ವೇದಿಕೆಯಲ್ಲಿ ಚೀಫ್ ಎಡ್ವಸೈಸರ್ ಎಂ.ಬಿ.ಸದಾಶಿವ, ಮೆಂಟರ್ ಜಯಪ್ರಕಾಶ್ ರೈ, ಪ್ರಾಂತೀಯ ರಾಯಭಾರಿ ಪ್ರೊ.ಎಂ.ಬಾಲಚಂದ್ರ ಗೌಡ, ರೀಜನ್ ಕೋ ಆರ್ಡಿನೇಟರ್ ಪ್ರಕಾಶ್ ಡಿಸೋಜಾ, ವಲಯಾಧ್ಯಕ್ಷರುಗಳಾದ ಸಂತೋಷ್ ಜಾಕೆ, ಲಿಜೋ ಜೋಸ್, ಝೋನ್ ಕೋ ಆರ್ಡಿನೇಟರ್ ಥೋಮಸ್ ಕೆ.ಎಸ್., ಪ್ರೊ.ರಂಗಯ್ಯ ಶೆಟ್ಟಿಗಾರ್, ಪ್ರಾಂತೀಯ ಸಮ್ಮೇಳನ ಸಮಿತಿ ಅಧ್ಯಕ್ಷೆ ಅನಿತಾ ಲಸ್ರಾದೋ, ಕಾರ್ಯದರ್ಶಿ ಡಾ.ಲಕ್ಷ್ಮೀಶ ಕೆ.ಎಸ್, ಖಜಾಂಜಿ ದೀಪಕ್ ಕುತ್ತಮೊಟ್ಟೆ , ಸುಳ್ಯ ಲಯನ್ಸ್ ಕ್ಲಬ್ ಅಧ್ಯಕ್ಷ ವೀರಪ್ಪ ಗೌಡ ಕಣ್ಕಲ್, ಕಾರ್ಯದರ್ಶಿ ದೊಡ್ಡಣ್ಣ ಬರೆಮೇಲು, ಖಜಾಂಜಿ ಕಿರಣ್ ನೀರ್ಪಾಡಿ, ಬೆಳ್ಳಾರೆ ಜಲದುರ್ಗಾ ಲಯನ್ಸ್ ಕ್ಲಬ್ ಅಧ್ಯಕ್ಷ ವಿಠಲ್ ಶೆಟ್ಟಿ, ಪಂಜ ಲಯನ್ಸ್ ಕ್ಲಬ್ ಅಧ್ಯಕ್ಷ ದಿಲೀಪ್ ಬಾಬ್ಲುಬೆಟ್ಟು, ಕಡಬ ಲಯನ್ಸ್ ಕ್ಲಬ್ ಅಧ್ಯಕ್ಷ ಗೋಪಾಲಕೃಷ್ಣ ಎ.ಎಸ್., ಲಯನ್ಸ್ ಕುಕ್ಕೆ ಸುಬ್ರಹ್ಮಣ್ಯ ಅಧ್ಯಕ್ಷ ರಾಮಚಂದ್ರ ಪಿ., ಸಂಪಾಜೆ ಲಯನ್ಸ್ ಕ್ಲಬ್ ಅಧ್ಯಕ್ಷ ಯೋಗೀಶ್ವರ ಎಸ್., ಗುತ್ತಿಗಾರು ಲಯನ್ಸ್ ಕ್ಲಬ್ ಅಧ್ಯಕ್ಷ ಜಯರಾಮ್, ಸಹಪ್ರಾಂತೀಯ ಅಧ್ಯಕ್ಷರುಗಳಾದ ಉಷಾ ಮನೋಜ್, ಜಯಪ್ರಕಾಶ್ ಬಿ., ಚಂದ್ರಹಾಸ ರೈ, ಉಮಾ ಬಿ. ಹೆಗ್ಡೆ, ರಮಾನಂದ ನೂಜಿಪಾಡಿ, ಲ್ಯಾನ್ಸಿ ಮಸ್ಕರೇನಸ್, ನವೀನ ಅಂಬೆಕಲ್ಲು, ಡಾ. ಬಿ.ಎ. ವಿಶಾಲಾಕ್ಷಿ, ಎಂ.ಎಸ್.ಜಗದೀಶ್, ಮಂಜುನಾಥ ಆರ್., ಹಾಗೂ ಹೆರಾಲ್ಡ್ ಥಾವ್ರೋ ಉಪಸ್ಥಿತರಿದ್ದರು. ಶ್ರೀಮತಿ ರಮ್ಯಾ ದಿಲೀಪ್ ಬಾಬ್ಲುಬೆಟ್ಟು ಪ್ರಾರ್ಥಿಸಿದರು. ಸಮ್ಮೇಳನ ಸಮಿತಿ ಅಧ್ಯಕ್ಷೆ ಶ್ರೀಮತಿ ಅನಿತಾ ಲಸ್ರಾದೋ ಸ್ವಾಗತಿಸಿ, ಕಾರ್ಯದರ್ಶಿ ಡಾ. ಲಕ್ಷ್ಮೀಶ ಕೆ.ಎಸ್. ವಂದಿಸಿದರು.

ಹೈಲೈಟ್ಸ್

  • ಆರಂಭದಲ್ಲಿ ಪ್ರಾಂತೀಯ ಅಧ್ಯಕ್ಷೆ ಶ್ರೀಮತಿ ರೇಣುಕಾ – ಸದಾನಂದ ದಂಪತಿಯವರನ್ನು ಮುಖ್ಯದ್ವಾರದಿಂದ ವೇದಿಕೆಯವರೆಗೆ ಯಕ್ಷಗಾನ ನೃತ್ಯದ ವೇಷಧಾರಿಗಳು ಚೆಂಡೆಯ ಮೂಲಕ ಕರೆತಂದರು.
  • ಪ್ರಾಂತೀಯ ಸಮ್ಮೇಳನದ ಆರಂಭದಲ್ಲಿ ಎನ್‌ಎಂಸಿ ನಿವೃತ್ತ ಪ್ರಾಂಶುಪಾಲ ಡಾ. ಗಿರಿಧರ ಗೌಡ ವೇದಿಕೆಗೆ ರಾಷ್ಟ್ರಧ್ವಜವನ್ನು ಬರಮಾಡಿಕೊಂಡರು. ಇವರಿಗೆ ಎನ್‌ಸಿಸಿ ವಿದ್ಯಾರ್ಥಿಗಳು ಸಾಥ್ ನೀಡಿದರು.
    *ಲಯನ್ಸ್ ಜಿಲ್ಲಾ ಸೇವಾ ಯೋಜನೆಯಡಿಯಲ್ಲಿ ಕಿನ್ನಿಗೋಳಿಯಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ ವೈದ್ಯಕೀಯ ಸೇವೆ ಹಾಗೂ ಯೋಗ ತರಬೇತಿ ಕೇಂದ್ರಕ್ಕೆ ದಿಶಾನಿ ಪ್ರಾಂತೀಯ ಸಮ್ಮೇಳನದ ಸವಿ ನೆನಪಿನಲ್ಲಿ ಪ್ರಾಂತೀಯ ಅಧ್ಯಕ್ಷೆ ರೇಣುಕಾ ಸದಾನಂದ ಜಾಕೆ ದಂಪತಿಗಳು ರೂ. 1 ಲಕ್ಷ ಚೆಕ್‌ನ್ನು ಲಯನ್ಸ್ ಜಿಲ್ಲಾ ಗವರ್ನರ್ ಡಾ.ಮೆಲ್ವಿನ್ ಡಿಸೋಜಾ ಪಿಎಂಜೆಎಫ್ ರವರಿಗೆ ಹಸ್ತಾಂತರಿಸಿದರು. 1 ಲಕ್ಷ ಚೆಕ್‌ನ್ನು ಪ್ರಾಂತೀಯ ಅಧ್ಯಕ್ಷೆಯ ಪುತ್ರ ಆಶಿತ್ ಜಾಕೆಯವರು ತನ್ನ ಅಮ್ಮನಿಗೆ ಪ್ರಾಂತೀಯ ಅಧ್ಯಕ್ಷರಾದ ಹಿನ್ನಲೆಯಲ್ಲಿ ಕೊಟ್ಟಿದ್ದರು. ಇದನ್ನು ಈಗ ಸೇವಾ ಚಟುವಟಿಕೆಗಾಗಿ ಪ್ರಾಂತೀಯ ಅಧ್ಯಕ್ಷರು ವಿನಿಯೋಗಿಸಿದ್ದಾರೆ.
  • ಸಮ್ಮೇಳನದಲ್ಲಿ ಪ್ರಾಂತ್ಯದ ವ್ಯಾಪ್ತಿಯ 7 ಲಯನ್ಸ್ ಕ್ಲಬ್‌ಗಳ ಸದಸ್ಯರು, ಲಯನ್ಸ್ ಜಿಲ್ಲೆಯ ವಿವಿಧ ಗಣ್ಯರು, ಪದಾಧಿಕಾರಿಗಳು ಕುಟುಂಬ ಸಮೇತ ಭಾಗವಹಿಸಿದ್ದರು
  • ವೇದಿಕೆಯಲ್ಲಿದ್ದ ಎಲ್ಲಾ ಗಣ್ಯರು ರೇಣುಕಾ ಸದಾನಂದರವರ ಸೇವಾ ಚಟುವಟಿಕೆ, ಕಾರ್ಯವೈಖರಿ ಹಾಗೂ ಲಯನ್ಸ್ ಪ್ರಾಂತೀಯ ಸಮ್ಮೇಳನ ಯಶಸ್ವಿಗಾಗಿ ಮೆಚ್ಚುಗೆ ವ್ಯಕ್ತಪಡಿಸಿದರು.
  • ವೇದಿಕೆಯ ಅಲಂಕಾರ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
  • ಪಂಜ ಲಯನ್ಸ್ ಕ್ಲಬ್ ನಿಂದ ಪ್ರಾಯೋಜಿಸಲ್ಪಟ್ಟ ಫೀಸ್‌ಪೋಸ್ಟರ್ ಕಂಟೆಸ್ಟ್‌ನಲ್ಲಿ ಜಿಲ್ಲೆಯಿಂದ ಪ್ರಥಮ ಸ್ಥಾನ ಪಡೆದ ನಾಗತೀರ್ಥ ಸ.ಹಿ.ಪ್ರಾ.ಶಾಲೆಯ ವಿದ್ಯಾರ್ಥಿನಿ ಅನ್ವಿತಾರನ್ನು ಪುರಸ್ಕರಿಸಲಾಯಿತು.
  • ಪ್ರಾಂತೀಯ ಅಧ್ಯಕ್ಷರ ತಂದೆ ಪಾಲ್ತಾಡು ಮೋನಪ್ಪ ಗೌಡ ಹಾಗೂ ತಾಯಿ ಶ್ರೀಮತಿ ದೇವಕಿಯವರನ್ನು ಇದೇ ಸಂದರ್ಭ ಗೌರವಿಸಲಾಯಿತು.
  • ತನ್ನ ಅಮ್ಮನಿಗೆ ಲಯನ್ಸ್ ಪ್ರಾಂತೀಯ ಅಧ್ಯಕ್ಷೆಯಾದ ಸಂದರ್ಭದಲ್ಲಿ ರೂ 1 ಲಕ್ಷ ದೇಣಿಗೆ ನೀಡಿದ ಆಶಿತ್ ಜಾಕೆಯವರನ್ನು ಲಯನ್ಸ್ ಜಿಲ್ಲಾ ಗವರ್ನರ್ ಡಾ. ಮೆಲ್ವಿನ್ ಡಿಸೋಜಾ ಶಾಲು ಹಾಕಿ ಗೌರವಿಸಿದರು.
  • ಆರಂಭದಲ್ಲಿ ನಡೆದ ಬ್ಯಾನರ್ ಪ್ರದರ್ಶನದಲ್ಲಿ ಪಂಜ ಲಯನ್ಸ್ ಕ್ಲಬ್ ಪ್ರಥಮ, ದ್ವಿತೀಯ ಕುಕ್ಕೆ ಸುಬ್ರಹ್ಮಣ್ಯ, ತೃತೀಯ ಸಂಪಾಜೆ ಲಯನ್ಸ್ ಕ್ಲಬ್ ಪಡೆದುಕೊಂಡಿತು.
  • ಅದ್ರಷ್ಟವಂತ ಪ್ರತಿನಿಧಿಗಳಾಗಿ ಕೊಪ್ಪ ಲಯನ್ಸ್ ಕ್ಲಬ್‌ನ ತಾರನಾಥ್, ಸುಳ್ಯ ಲಯನ್ಸ್ ಕ್ಲಬ್‌ನ ರಾಧಾಮಣಿ ಬಿ.ಜಿ. ಆಯ್ಕೆಯಾಗಿ ಬಹುಮಾನ ಪಡೆದುಕೊಂಡರು.