ಕಂದಾಯ ಇಲಾಖೆಯ ಪ್ರಥಮ ದರ್ಜೆ ಸಹಾಯಕಿ ಶ್ರೀಮತಿ ಗಿರಿಜಾಕ್ಷಿ ದಾಮೋದರ ಗೌಡ ಬಾಜಿನಡ್ಕ ನಿವೃತ್ತಿ

0

ಕಂದಾಯ ಇಲಾಖೆಯಲ್ಲಿ ಸುದೀರ್ಘ 19 ವರ್ಷ ಏಳು ತಿಂಗಳ ಕಾಲ ಪ್ರಥಮ ದರ್ಜೆ ಸಹಾಯಕಿಯಾಗಿ ಸೇವೆ ಸಲ್ಲಿಸಿದ್ದ ಅರಂತೋಡು ಗ್ರಾಮದ ಬಾಜಿನಡ್ಕದ ಶ್ರೀಮತಿ ಗಿರಿಜಾಕ್ಷಿ ದಾಮೋದರ ಗೌಡ ಅವರು ನಿವೃತ್ತಿ ಹೊಂದಿದ್ದಾರೆ.

2004ರಲ್ಲಿ ಪುತ್ತೂರಿನ ಬನ್ನೂರಿನಲ್ಲಿ ಗ್ರಾಮಕರಣಿಕರಾಗಿ ಸೇವಾ ವೃತ್ತಿಜೀವನ ಪ್ರಾರಂಭಿಸಿದ ಶ್ರೀಮತಿ ಗಿರಿಜಾಕ್ಷಿ ಆವರು ಬಳಿಕ ತೊಡಿಕಾನ ಹಾಗೂ ಅರಂತೋಡಿನಲ್ಲಿ ಸುದೀರ್ಘ 17 ವರ್ಷಗಳ ಅವಧಿ ಗ್ರಾಮಕರಣಿಕರಾಗಿ ಸೇವೆ ಸಲ್ಲಿಸಿದ್ದರು.

ಬಳಿಕ ಕಂದಾಯ ಇಲಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕಿಯಾಗಿ ಪದೋನ್ನತಿ ಹೊಂದಿ ಬಂಟ್ವಾಳ ತಾಲೂಕು ಕಛೇರಿಯಲ್ಲಿ ಒಂದು ವಾರಗಳ ಕಾಲ ಸೇವೆ ಸಲ್ಲಿಸಿ, ಅಲ್ಲಿಂದ ಪುತ್ತೂರು ಸಹಾಯಕ ಆಯುಕ್ತರ ಕಛೇರಿಯಲ್ಲಿ ಎರಡು ವರ್ಷಗಳ ಕಾಲ ಪ್ರಥಮ ದರ್ಜೆ ಸಹಾಯಕಿಯಾಗಿ ಸೇವೆ ಸಲ್ಲಿಸಿ, ಒಟ್ಟು 19 ವರ್ಷ ಏಳು ತಿಂಗಳ ಅವಧಿಯ ಸೇವಾ ವೃತ್ತಿಯಿಂದ ನಿವೃತ್ತಿ ಹೊಂದಿದ್ದಾರೆ.


ಇವರ ಪತಿ ದಿ. ದಾಮೋದರ ಗೌಡರು ಈ ಹಿಂದೆ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದರು. ಇವರ ಹಿರಿಯ ಮಗಳು ಕಾವ್ಯ ಹಾಗೂ ಎರಡನೇ ಮಗಳು ವಿದ್ಯಾಶ್ರೀ ಅವರಿಬ್ಬರನ್ನು ಬೆಳ್ತಂಗಡಿಗೆ ವಿವಾಹ ಮಾಡಿಕೊಡಲಾಗಿದ್ದು, ಪುತ್ರ ಶ್ರೀಕಾಂತ್ ಮೆಕಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದು ಬಿ.ಎಸ್.ಎನ್.ಎಲ್. ಕಛೇರಿಯಲ್ಲಿ ಉದ್ಯೋಗಿಯಾಗಿದ್ದಾರೆ.