ಸ್ಮಿತಾ ಅಮೃತ್ ರಾಜ್ ಅವರ ‘ತೇವ ಕಾಯುವ ನದಿ’ ಕೃತಿಗೆ ದತ್ತಿ ಬಹುಮಾನ

0

ಕರಾವಳಿ ಲೇಖಕಿಯರ ವಾಚಕಿಯರ ಸಂಘ (ರಿ) ಅವಿಭಜಿತ ದಕ್ಷಿಣ ಕನ್ನಡ ಕಾಸರಗೋಡು ಇವರು ನೀಡುವ 2023- 24 ನೇ ಸಾಲಿನ ವಿವಿಧ ದತ್ತಿ ಪ್ರಶಸ್ತಿಗಳನ್ನು ಘೋಷಿಸಿದ್ದು ತುಳು ಕನ್ನಡದ ಬರಹಗಾರ್ತಿಯರಿಗೆ ನೀಡುವ ಡಾ. ಸುನೀತಾ ಶೆಟ್ಟಿ ಮುಂಬೈ ದತ್ತಿ ಪ್ರಾಯೋಜಿತ ‘ತೌಳವಸಿರಿ’ ಪ್ರಶಸ್ತಿಯು ಹಿರಿಯ ಲೇಖಕಿ ಶಕುಂತಲಾ ಭಟ್ ಹಳೆಯಂಗಡಿ, ಇವರಿಗೆ ಲಭಿಸಿದೆ.

ಡಾ. ಸಾರಾ ಅಬೂಬಕರ್ ದತ್ತಿ ಪ್ರಶಸ್ತಿಯನ್ನು ಈ ಬಾರಿ ಮಹಿಳೆಯರ ಪ್ರವಾಸ ಸಾಹಿತ್ಯಕ್ಕೆ ನೀಡಲಾಗಿದ್ದು ಬೆಂಗಳೂರಿನ ಶ್ರೀಮತಿ ಜಯಶ್ರೀ ದೇಶಪಾಂಡೆ ಅವರ ‘ಹಲವು ನಾಡು ಹೆಜ್ಜೆ ಹಾಡು’ ಅನ್ನುವ ಕೃತಿ ಪಡೆದುಕೊಂಡಿದೆ.

ಮಹಿಳೆಯರ ಅಪ್ರಕಟಿತ ಕವನ ಸಂಕಲನಕ್ಕೆ ನೀಡಲಾಗುವ ಚಂದ್ರಭಾಗಿ ರೈ ದತ್ತಿ ಬಹುಮಾನ ಕವಯತ್ರಿ ಸುಳ್ಯದ ಸ್ಮಿತಾ ಅಮೃತ್ ರಾಜ್ ಅವರ ‘ತೇವ ಕಾಯುವ ನದಿ’ ಕೃತಿಗೆ ಲಭಿಸಿದೆ.

ಮಾರ್ಚ್ 20ರಂದು ಮಂಗಳೂರಿನಲ್ಲಿ ನಡೆಯುವ ಗಣ್ಯರ ಸಮ್ಮುಖದಲ್ಲಿ ನಡೆಯುವ ಸಮಾರಂಭದಲ್ಲಿ ಈ ಪ್ರಶಸ್ತಿಗಳನ್ನು ನೀಡಲಾಗುವುದೆಂದು ಕರಾವಳಿ ಲೇಖಕಿಯರ ವಾಚಕಿಯರ ಸಂಘದ ಪ್ರಕಟಣೆ ತಿಳಿಸಿದೆ.