ಸಿಡಿಲಿನ ಬಗ್ಗೆ ಆ್ಯಪ್, ಜಾಗೃತಿ ಮೂಡಿಸಲು ಕರೆ
ಕುಕ್ಕೆ ಸುಬ್ರಹ್ಮಣ್ಯದಲ್ಲಿ ಪ್ರಾಕೃತಿಕ ವಿಕೋಪ ಮುಂಜಾಗ್ರತಾ ಸಭೆಯ ಬಳಿಕ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹೇಳಿಕೆ
ಈ ಬಾರಿ ವಿಶೇಷವಾಗಿ ಸ್ಥಳೀಯ ಪ್ರಾಕೃತಿಕ ವಿಕೋಪ ಮುಂಜಾಗ್ರತಾ ಯೋಜನೆಯನ್ನು ಹಮ್ಮಿಕೊಳ್ಳಲಾಗುವುದು.ಈ ಮೂಲಕ ಸ್ಥಳೀಯವಾಗಿ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಲು ಆದೇಶಿಸಲಾಗಿದೆ.ಈ ಬಾರಿ ಮಳೆಯ ಪ್ರಮಾಣ ಅಧಿಕವಿರುವ ಕಾರಣ ಬೇರೆ ಬೇರೆ ಕಡೆಗಳಿಗೆ ಬೇರೆ ಬೇರೆ ಯೋಜನೆಗಳನ್ನು ಹಮ್ಮಿಕೊಳ್ಳಲಾಗುವುದು. ಗ್ರಾಮೀಣ ಪ್ರದೇಶಗಳಿಗೆ ಒಂದು ಯೋಜನೆಯಾದರೆ ನಗರ ಪ್ರದೇಶಗಳಿಗೆ ಪ್ರತ್ಯೇಕ ಯೋಜನೆ ಹಮ್ಮಿಕೊಳ್ಳಲಾಗುವುದು.
ಈ ಯೋಜನೆಯಲ್ಲಿ ಸ್ಥಳೀಯಾಡಳಿತಕ್ಕೆ ಸಂಪೂರ್ಣ ಜವಬ್ದಾರಿ ನೀಡಲಾಗುತ್ತದೆ. ಸ್ಥಳೀಯವಾಗಿ ಆಗುವ ಸಮಸ್ಯೆಗಳಿಗೆ ಸ್ಥಳೀಯವಾಗಿ ನಿವಾರಣೆ ಮಾಡುವುದು ಯೋಜನೆಯ ಉದ್ದೇಶವಾಗಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಹೇಳಿದರು.
ಕ ಸುಬ್ರಹ್ಮಣ್ಯ ದಲ್ಲಿ ಮೇ.16 ಸಂಜೆ ನಡೆದ ಪುತ್ತೂರು ಉಪ ವಿಭಾಗದ ಸುಳ್ಯ, ಕಡಬ, ಪುತ್ತೂರು, ಬೆಳ್ತಂಗಡಿ ಮೊದಲಾದ ಪ್ರದೇಶಗಳ ಅಧಿಕಾರಿಗಳೊಂದಿಗೆ ನಡೆಸಲಾದ ಪ್ರಾಕೃತಿಕ ವಿಕೋಪ ಮುಂಜಾಗ್ರತಾ ಸಭೆಯ ಬಳಿಕ ಅವರು ಮಾತನಾಡಿದರು. ಗ್ರಾಮ ಪಂಚಾಯತ್ ಸೇರಿದಂತೆ ಇತರ ಕಚೇರಿಗಳಲ್ಲಿ ಮತ್ತು ಮಾದ್ಯಮಗಳಲ್ಲಿ ಯೋಜನೆಯ ವಿವರಗಳನ್ನು ಬಿತ್ತರಿಸಲಾಗುವುದು ಎಂದರು.
ಸ್ಥಳೀಯವಾಗಿ ವ್ಯವಸ್ಥೆ:
ಸ್ಥಳೀಯವಾಗಿ ಜೆಸಿಬಿ, ರೋಪ್ ಗಳು, ಬೋಟ್, ಮಿಷನ್, ಸೈಯಿಂಗ್ ಮಿಷನ್ ಗಳು ಇತ್ಯಾದಿಗಳನ್ನು ಸ್ಥಳೀಯವಾಗಿ ತಯಾರಿರುವಂತೆ ವ್ಯವಸ್ಥೆ ಮಾಡಲಾಗುವುದು.ಅದನ್ನು ದಾಟಿ ಬರುವ ಸಮಸ್ಯೆಗಳ ನಿವಾರಣೆಗೆ ತಹಶೀಲ್ದಾರ್ ಗೆ ಮತ್ತು ಅಗ್ನಿ ಶಾಮಕ ದಳಕ್ಕೆ ಜವಬ್ದಾರಿ ನೀಡಲಾಗುವುದು. ಆ ನಂತರ ಎನ್ ಡಿ ಆರ್ ಎಫ್ ಮತ್ತು ಎಸ್ ಡಿ ಆರ್ ಎಫ್ ಗಳಿಗೆ ಜವಬ್ದಾರಿ ಹೊರಿಸುವ ಯೋಜನೆಯನ್ನು ಮಾಡಲಾಗಿದೆ.ಈ ಮೂಲಕ ಪ್ರಾಕೃತಿಕ ವಿಕೋಪ ಅಳವಡಿಸಿಕೊಳ್ಳಬೇಕಾದ ಮುಂಜಾಗ್ರತಾ ಕ್ರಮವನ್ನು ಯೋಜನಾಬದ್ದವಾಗಿ ಅಳವಡಿಸಿಕೊಳ್ಳಲಾಗಿದೆ ಎಂದು ಡಿಸಿ ಹೇಳಿದರು.
ಈಗಾಗಲೇ ಮುಂಜಾಗ್ರತಾ ಸಭೆ ನಡೆಸಲಾಗಿದೆ:
ಪುತ್ತೂರು ಉಪ ವಿಭಾಗದ ಪ್ರದೇಶಗಳ ಪುತ್ತೂರು ಉಪವಿಭಾಗ ವ್ತಾಪ್ತಿಯ ಕಡಬ, ಸುಳ್ಯ, ಬೆಳ್ತಂಗಡಿ, ಪುತ್ತೂರು ಪ್ರದೇಶಗಳೊಂದಿಗೆ ಪ್ರಾಕೃತಿಕ ವಿಕೋಪದ ಮುಂಜಾಗ್ರತಾ ಕ್ರಮ ಅನುಸರಿಸುವ ಸಲುವಾಗಿ ಸಭೆ ನಡೆಸಲಾಗಿದೆ.ಈ ಭಾಗಗಳ ಅಧಿಕಾರಿಗಳೊಂದಿಗೆ ಅಲ್ಲಿನ ಪರಿಸರ ಮತ್ತು ಪ್ರಾಕೃತಿಕ ವಿಚಾರಗಳ ಬಗ್ಗೆ ಚರ್ಚಿಸಲಾಗಿದೆ.ಈಗಾಗಲೇ ಈ ಬಗ್ಗೆ ಮೂರು ಸಭೆಗಳನ್ನು ನಡೆಸಲಾಗಿದೆ.ಇದೀಗ 4 ನೇ ಬಾರಿಗೆ ಪುತ್ತೂರು ಉಪ ವಿಭಾಗದ ವ್ಯಾಪ್ತಿಯ ಸಭೆಯನ್ನು ಮಾಡಲಾಗಿದೆ ಎಂದು ನುಡಿದರು.
5 ಲಕ್ಷ ರೂ ಪರಿಹಾರ:
ಪ್ರಾಕೃತಿಕ ವಿಕೋಪ ಪರಿಹಾರವಾಗಿ 24 ಗಂಟೆಯೊಳಗೆ 5 ಲಕ್ಷ ರೂ ನೀಡಲಾಗುವುದು.ಈಗಾಗಲೇ ಕಡಬದಲ್ಲಿ ಸಿಡಿಲು ಬಡಿದ ಓರ್ವರು ಉತ್ತರ ಪ್ರದೇಶದವರು ಇರುವ ಕಾರಣ ಅವರ ವಾರಸುದಾರರ ಬಗ್ಗೆ ತಿಳಿದುಕೊಂಡು ಅವರ ವಾರಸುದಾರರಿಗೆ ಮೊತ್ತ ನೀಡಲಾಗುವುದು.ಈ ಬಗ್ಗೆ ಈಗಾಗಲೇ ಅಲ್ಲಿನ ಜಿಲ್ಲಾಧಿಕಾರಿ ಗಳಿಗೆ ಪತ್ರ ಬರೆಯಲಾಗಿದೆ.ಅವರಿಂದ ವಿವರ ಬಂದ ತಕ್ಷಣ ನೀಡಲಾಗುವುದು. ಕೆಲ ಕಡೆ ನಡೆದ ಘಟನೆಗಳಿಗೆ ಈಗಾಗಲೇ ಪರಿಹಾರ ವಿತರಿಸಲಾಗಿದೆ ಎಂದು ಡಿಸಿ ನುಡಿದರು.
ಜಾಗೃತಿ ಮೂಡಿಸಲು ಕರೆ
ಸಿಡಿಲು, ಗುಡುಗು,ಗಾಳಿ ಮಳೆಯ ಬಗ್ಗೆ ಸಾರ್ವಜನಿಕರಲ್ಲಿ ಮಾದ್ಯಮದವರು ಜಾಗೃತಿ ಮೂಡಿಸಬೇಕು.ಗುಡುಗು,ಸಿಡಿಲು, ಗಾಳಿ ಮಳೆ ಸಂದರ್ಭ ಸಾರ್ವಜನಿಕರು ಜಾಗ್ರತೆ ವಹಿಸಬೇಕು.ಸರ್ವರೂ ಈ ಸಂದರ್ಭದಲ್ಲಿ ಜಾಗರೂಕರಾಗಿ ಇರಬೇಕು ಎಂದು ಹೇಳಿದರು.
ಸಿಡಿಲಿನ ಬಗ್ಗೆ ಆ್ಯಪ್
ಸಿಡಿಲಿನ ಬಗ್ಗೆ ಒಂದು ಆಪ್ ಇದೆ. ಡಿಸಾಸ್ಟ್ರಸ್ ಮೆನೇಜ್ ಮೆಂಟ್ ನಿಂದ ಈ ಆಪ್ ರಚಿಸಲಾಗಿದೆ. ಸಿಡಿಲಿನ ಬಗ್ಗೆ ತಿಳಿಸುವ ಆಪ್ ಇದಾಗಿದೆ.ಇದನ್ನು ಡೌನ್ ಲೋಡ್ ಮಾಡಿಕೊಂಡು ಸಿಡಿಲು ಬರುವ ತಾಣದ ಬಗ್ಗೆ ಮೊದಲೆ ತಿಳಿದುಕೊಳ್ಳಲು ಆಗುತ್ತದೆ.ಆದುದರಿಂದ ಈ ಆಪ್ ತುಂಬಾ ಪ್ರಯೋಜನಕಾರಿ ಮತ್ತು ಸಹಕಾರಿ .ಸಿಡಿಲು ಬರುವ ಸಂದರ್ಭ ತಿಳಿದುಕೊಂಡು ಆದಷ್ಟು ಮನೆಯ ಒಳಗೆ ಇದ್ದು, ವಿದ್ಯುತ್ ಉಪಕರಣಗಳ ಉಪಯೋಗ ಮಾಡದಂತೆ, ಮರಗಳ ಅಡಿಯಲ್ಲಿ ನಿಲ್ಲದಂತೆ ಸಾರ್ವಜನಿಕರು ಎಚ್ಚರಿಕೆ ವಹಿಸಲು ಇದು ಉಪಯೋಗವಾಗುತ್ತದೆ. ಸಹ
.ಅಲ್ಲದೆ ಈ ಭಾಗದಲ್ಲಿ ಲೈಟ್ನಿಂಗ್ ಎರೆಸ್ಟ್ ರಚಿಸುವ ಬಗ್ಗೆ ಚಿಂತನೆ ಮಾಡಲಾಗುತ್ತಿದೆ ಎಂದು ಡಿಸಿ ನುಡಿದರು.
ಈ ಸಂದರ್ಭದಲ್ಲಿ ಪುತ್ತೂರು ಉಪವಿಭಾಗ ಸಹಾಯಕ ಆಯುಕ್ತ ಜುಬಿನ್ ಮೊಹಪಾತ್ರ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ,
ಸುಳ್ಯ ತಹಶಿಲ್ದಾರ್ ಮಂಜುನಾಥ ಜಿ., ಕಡಬ ತಹಶಿಲ್ದಾರ್ ಪ್ರಭಾಕರ ಕಜೂರೆ, ಪುತ್ತೂರು ತಹಶಿಲ್ದಾರ್ ಕುಂಞಿ ಅಹ್ಮದ್, ಬೆಳ್ತಂಗಡಿ ತಹಶಿಲ್ದಾರ್ ಪೃಥ್ವಿ ಸಾನಿಕಮ್,
ಕಡಬ ಕಂದಾಯ ನಿರೀಕ್ಷಕ ಪೃಥ್ವಿಕುಮಾರ್, ಪಂಜ ಕಂದಾಯ ನಿರೀಕ್ಷಕ ರಂಜನ್ ಕಲ್ಕುದಿ, ಕಡಬ ಉಪ ತಹಶಿಲ್ದಾರ್ ಮನೋಹರ್ ಕೆ.ಟಿ. ಸುಳ್ಯ ನ.ಪಂ. ಮುಖ್ಯಾಧಿಕಾರಿ ಬಿ.ಎಂ.ಡಾಂಗೆ, ಸುಬ್ರಹ್ಮಣ್ಯ ಗ್ರಾ.ಪಂ. ಕಾರ್ಯದರ್ಶಿ ಮೋನಪ್ಪ.ಡಿ ಸೇರಿದಂತೆ ಪುತ್ತೂರು ಉಪವಿಭಾಗ ವ್ಯಾಪ್ತಿಯ ನಾಲ್ಕು ತಾಲೂಕುಗಳ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.