ಪ್ರಕೃತಿ ಜೊತೆ ಬದುಕುವುದನ್ನು ಕಲಿಯಬೇಕು.-ಚಂದ್ರಮತಿ ಕೆ
ಪ್ರಕೃತಿ ಜೊತೆ ನಾವು ಬದುಕಬೇಕು ಪ್ರಕೃತಿಯ ವಿರುದ್ದವಾಗಿ ನಾವು ಬದುಕಲು ಹೋದಾಗ ಅಸಮತೋಲನ ಉಂಟಾಗುತ್ತದೆ. ಪ್ರಕೃತಿಗೆ ಹೊಂದಿಕೊಂಡು ನಾವು ಬದುಕಬೇಕು ಹಾಗಾದಾಗ ಪ್ರಕೃತಿ ಕೂಡ ಪೂರಕವಗಿ ಬೆಳೆಯಲು ಸಹಕಾರಿಯಾಗುತ್ತದೆ.
ಕೆಲವೊಮ್ಮೆ ಪ್ರಾಕೃತಿಕ ವಿಕೋಪಗಳು ಎದುರಾದಾಗ ಅದನ್ನು ಎದುರಿಸಲು ನಾವು ಸನ್ನದ್ಧರಾಗಿರಬೇಕು ರೆಡ್ ಕ್ರಾಸ್ ಶಿಬಿರದಿಂದ ಇದನ್ನು ಕಲಿಯಲು ಸಾದ್ಯ ಎಂದು ಸರಕಾರಿ ಪದವಿ ಪೂರ್ವ ಕಾಲೇಜು ಸುಳ್ಯ ಇಲ್ಲಿಯ ಭಾಷಾ ಶಿಕ್ಷಕರಾದ ಶ್ರೀಮತಿ ಚಂದ್ರಮತಿ ಕೆ ಹೇಳಿದರು.
ಅವರು ಮೇ ೨೭ರಂದು ಸರಕಾರಿ ಪ್ರಥಮ ದರ್ಜೆ ಕಾಲೇಜು ಸುಳ್ಯ ಇಲ್ಲಿ ನಡೆದ ಯುವ ರೆಡ್ ಕ್ರಾಸ್ ಘಟಕದ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡುತ್ತಿದ್ದರು. ಸಭೆಯ ಅದ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಸತೀಶ್ ಕುಮಾರ್ ಕೆ ಆರ್ ವಹಿಸಿದ್ದರು.
ವೇದಿಕೆಯಲ್ಲಿ ಐಕ್ಯೂಎಸಿ ಸಂಚಾಲಕರಾದ ಡಾ.ಜಯಶ್ರೀ ಕೆ, ಯುವ ರೆಡ್ ಕ್ರಾಸ್ ಘಟಕದ ಸಂಚಾಲಕರಾದ ಉದಯಶಂಕರ ಹೆಚ್, ಸಹ ಸಂಚಾಲಕರಾದ ಶ್ರೀಮತಿ ಸುರೇಖಾ ಹೆಚ್, ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಕಾರ್‍ಯಕ್ರಮ ಆರಂಭಗೊಂಡಿತು. ಘಟಕದ ಸಂಚಾಲಕರಾದ ಉದಯಶಂಕರ ಹೆಚ್ ಸ್ವಾಗತಿಸಿ, ಸಹ ಸಂಚಾಲಕರಾದ ಶ್ರೀಮತಿ ಸುರೇಖಾ ಹೆಚ್ ವಂದಿಸಿದರು. ದಿವ್ಯಶ್ರೀ ಎ ಕಾರ್‍ಯಕ್ರಮ ನಿರೂಪಿಸಿದರು.