ಸುಳ್ಯ ಸೈಂಟ್ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆಯ ಬಿಂದು ಕೆ.ಜೆ ಯವರಿಗೆ ಎಸ್.ಎಸ್.ಎಲ್.ಸಿ ಮರುಮೌಲ್ಯ ಮಾಪನದಲ್ಲಿ 6 ಅಂಕ ಹೆಚ್ಚಳ

0

ಎಸ್. ಎಸ್. ಎಲ್. ಸಿ ಫಲಿತಾಂಶ ಮೇ 9ರಂದು ಪ್ರಕಟಗೊಂಡಿದ್ದು, ಸುಳ್ಯದ ಸೈಂಟ್ ಜೋಸೆಫ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿ ಬಿಂದು ಕೆ.ಜೆ ಮರು ಮೌಲ್ಯಮಾಪನದ ನಂತರದ ಫಲಿತಾಂಶದಲ್ಲಿ 605 ಅಂಕಗಳ ಬದಲಾಗಿ 611 ಅಂಕಗಳನ್ನು ಪಡೆದುಕೊಂಡಿದ್ದಾರೆ.
ಪ್ರಥಮ ಫಲಿತಾಂಶದಲ್ಲಿ ಸಮಾಜ ವಿಜ್ಞಾನದ ಮೌಲ್ಯಮಾಪನದ ಎಡವಟ್ಟಿನಿಂದಾಗಿ ವಿದ್ಯಾರ್ಥಿನಿಯು 6 ಅಂಕಗಳನ್ನು ಕಳೆದುಕೊಂಡು ಮರು ಮೌಲ್ಯಮಾಪನದ ನಂತರ 5 ಅಂಕಗಳನ್ನು ಗಳಿಸಿದ್ದು ಹಾಗೂ ಇಂಗ್ಲೀಷ್ ಭಾಷಾ ವಿಷಯದಲ್ಲಿ 1 ಅಂಕಗಳಿಸುವುದರೊಂದಿಗೆ 122 ಅಂಕಗಳನ್ನು ಪಡೆದುಕೊಂಡು ಒಟ್ಟು 6 ಅಂಕದ ಹೆಚ್ಚಳದೊಂದಿಗೆ 611 ಅಂಕಗಳನ್ನು ಪಡೆದುಕೊಂಡು 97.76% ಶೇಕಡ ತನ್ನದಾಗಿಸಿಕೊಂಡಿದ್ದಾಳೆ. ಈಕೆಯು ಕೆ.ಎಸ್.ಆರ್.ಟಿ.ಸಿ ಉದ್ಯೋಗಿಯಾಗಿರುವ (T.C) ಜಗದೀಶ್ ಕಿರ್ಲಾಯ ಹಾಗೂ ಸೈಂಟ್ ಜೋಸೆಫ್ ಶಾಲಾ ಶಿಕ್ಷಕಿ ಶೋಭಾ ಜಗದೀಶ್ ದಂಪತಿಗಳ ಪುತ್ರಿ.