ಹಲವಾರು ವರ್ಷಗಳಿಂದ ಸಾಂಸ್ಕೃತಿಕ, ಧಾರ್ಮಿಕ ಹಾಗೂ ಸಮಾಜಮುಖಿ ಕಾರ್ಯಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವ ಪ್ರೆಂಡ್ಸ್ ಬೆಳ್ಳಾರೆ,ಆರ್ಥಿಕ ನೆರವಾಗುವ ಉದ್ಧೇಶದಿಂದ ನವರಾತ್ರಿಯ ಒಂದು ದಿನ ವಿವಿಧ ವೇಷ ಭೂಷನಗಳೊಂದಿಗೆ ಬೆಳ್ಳಾರೆ ಪೇಟೆಯಲ್ಲಿ ಧನ ಸಂಗ್ರಹ ಮಾಡಲಾಗಿತ್ತು.
ಬೆಳ್ಳಾರೆ ಗ್ರಾಮದ ದರ್ಖಾಸ್ತು 9 ವರ್ಷದ ವಿದ್ಯಾರ್ಥಿ ಹಿತೇಶ್ ಡಿ ಅನಾರೋಗ್ಯ ನಿಮಿತ್ತ ಸಾಯಿಬಾಬಾ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಮಣಿಪಾಲ ಉಡುಪಿ ಇಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪುಟ್ಟ ಬಾಲಕನ ಚಿಕಿತ್ಸಾ ವೆಚ್ಚಕ್ಕಾಗಿ ಸಂಗ್ರಹವಾದ ಒಟ್ಟು ರೂ.40000.00 ವನ್ನು ನವಂಬರ್ 14 ರ ಮಕ್ಕಳ ದಿನಾಚರಣೆಯಂದು ಆಸ್ಪತ್ರೆಯಲ್ಲಿ ಹಸ್ತಾಂತರಿಸಲಾಯಿತು,
ನಿರ್ಧಿಷ್ಟ ಉದ್ಧೇಶದಿಂದ ಹಮ್ಮಿಕೊಂಡ ಸಣ್ಣ ಪ್ರಯತ್ನಕ್ಕೆ ದೊಡ್ಡ ಮಟ್ಟದ ಸಹಾಯ ಮಾಡಿದ ಎಲ್ಲಾ ಮಹಾಜನತೆಗೆ,ಎಲ್ಲಾ ಸಂಘ ಸಂಸ್ಥೆಗಳ ಪದಾಧಿಕಾರಿಗಳಿಗೆ, ಸೂಕ್ತ ಮಾರ್ಗದರ್ಶನ ನೀಡಿದ ಎಲ್ಲಾ ಹಿರಿಯರಿಗೂ ಹಾಗೂ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬೆಳ್ಳಾರೆ ಪೋಲಿಸ್ ಠಾಣೆ ಉಪನೀರಿಕ್ಷಕರಾದ ಈರಯ್ಯ ದೂಂತುರು ಹಾಗೂ ಫ್ರೆಂಡ್ಸ್ ಕ್ಲಬ್ ನ ಪದಾಧಿಕಾರಿಗಳ ಕಾರ್ಯವನ್ನು ಸಾರ್ವಜನಿಕರು ಶ್ಲಾಘಿಸಿದ್ದಾರೆ.