ಸತತ ಮೂರನೇ ಬಾರಿ ಪ್ರಧಾನಮಂತ್ರಿಯಾಗಿ ನರೇಂದ್ರ ಮೋದಿ ಪ್ರಮಾಣವಚನ ಸ್ವೀಕರಿಸಲಿರುವ ಹಿನ್ನೆಲೆ

0

ದೇಶದ 18ನೇ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸತತ ಮೂರನೇ ಬಾರಿಗೆ ದೇಶದ ಪ್ರಧಾನಮಂತ್ರಿಯಾಗಿ ನರೇಂದ್ರ ಮೋದಿಯವರು ನಾಳೆ ಪ್ರಮಾಣವಚನ ಸ್ವೀಕರಿಸಲಿರುವ ಹಿನ್ನೆಲೆಯಲ್ಲಿ ಸುಳ್ಯದ ಪ್ರಸಿದ್ಧ ಚಿನ್ನಾಭರಣಗಳ ಮಳಿಗೆ ಮುಳಿಯ ಜ್ಯುವೆಲ್ಲರಿ ಮಾಲಕರಾದ ಗೋವಿಂದ ಭಟ್ ಮುಳಿಯ ಹಾಗೂ ಶಿವರಾಮ ಭಟ್ ಮುಳಿಯ ಅವರು ಜೂ.8ರಂದು ಸಂಜೆ ಸುಳ್ಯದ ಕೊಯಿಂಗೋಡಿ ಕಾಂಪ್ಲೆಕ್ಸ್ ನಲ್ಲಿ ಮೋದಿ ಚಹಾಕೂಟ ಏರ್ಪಡಿಸಿದರು.

ಬಿಜೆಪಿ ಭದ್ರಕೋಟೆಯಾದ ಸುಳ್ಯದಿಂದ ಅತ್ಯಧಿಕ ಮತಗಳ ಮುನ್ನಡೆಯೊಂದಿಗೆ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಕ್ಯಾಪ್ಟನ್ ಬ್ರಿಜೇಶ್ ಚೌಟರು ಒಂದು ಲಕ್ಷಕ್ಕೂ ಅಧಿಕ ಬಹುಮತಗಳಿಂದ ನೂತನ ಸಂಸದರಾಗಿ ಆಯ್ಕೆಯಾಗಿದ್ದು, ದೇಶದಲ್ಲಿ ಎನ್.ಡಿ.ಎ. ಮಿತ್ರಪಕ್ಷಗಳ ಮೈತ್ರಿಕೂಟ ಅಧಿಕಾರದ ಚುಕ್ಕಾಣಿ ಹಿಡಿದಿದ್ದು, ಎನ್.ಡಿ.ಎ. ನೂತನ ನಾಯಕನಾಗಿ ನರೇಂದ್ರ ಮೋದಿಯವರು ಆಯ್ಕೆಯಾಗಿದ್ದು, ಜೂ.9ರಂದು ಸಂಜೆ ಸತತ ಮೂರನೇ ಬಾರಿಗೆ ಪ್ರಧಾನಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಈ ಹಿನ್ನೆಲೆಯಲ್ಲಿ ಮುಳಿಯ ಜ್ಯುವೆಲ್ಲರಿ ಮಾಲಕರು ತನ್ನ ಗ್ರಾಹಕರು ಸೇರಿದಂತೆ ಸುತ್ತಮುತ್ತಲಿನ ಅಂಗಡಿ ವ್ಯಾಪಾರಸ್ಥರು ಹಾಗೂ ಹಿತೈಷಿಗಳಿಗೆ ಮೋದಿ ಚಹಾ ಕೂಟ ಏರ್ಪಡಿಸಿದ್ದು, ಚಹಾಕೂಟದಲ್ಲಿ ಮೋದಿ ಚಹಾ, ಗೋಳಿಬಜೆ, ಬನ್ಸ್ – ಚಟ್ನಿ, ಬಿಸ್ಕೂಟ್ ರೊಟ್ಟಿ, ಮೈಸೂರು ಪಾಕ್, ಸೇಮಿಗೆ ಉಸುಳಿ, ಮೆಣಸುಪೋಡಿ, ಖರ್ಜೂರ ಪಾಯಸ, ಮ್ಯಾಂಗೋ ಜ್ಯೂಸ್, ಕಾಪಿ ಸೇರಿದಂತೆ ಸುಮಾರು ಹತ್ತು ವಿವಿಧ ತಿಂಡಿ ತಿನಿಸುಗಳನ್ನು ವಿತರಿಸಿದರು.

ಈ ಸಂದರ್ಭದಲ್ಲಿ ಸಿದ್ಧಾರ್ಥಕೃಷ್ಣ ಮುಳಿಯ, ಅನಂತಕೃಷ್ಣ ಮುಳಿಯ, ಸಮರ್ಥರಾಮ ಮುಳಿಯ ಸೇರಿದಂತೆ ಸಂಸ್ಥೆಯ ಸಿಬ್ಬಂದಿ ವರ್ಗದವರು, ಅಕ್ಕಪಕ್ಕದ ಅಂಗಡಿ ಮಾಲಕರು, ರಿಕ್ಷಾ ಚಾಲಕರು, ಸಂಸ್ಥೆಯ ಗ್ರಾಹಕರು ಸೇರಿದಂತೆ ನೂರಾರು ಮಂದಿ ಉಪಸ್ಥಿತರಿದ್ದರು.