ಸುಬ್ರಹ್ಮಣ್ಯ: ಕೆ.ಎಸ್ .ಆರ್.ಟಿ ಬಸ್ ನಿಲ್ದಾಣಕ್ಕೆ ಆದಿ ಸುಬ್ರಹ್ಮಣ್ಯ ರಸ್ತೆಯಿಂದ ಪ್ರವೇಶ ಆರಂಭ

0

ಪಾರ್ಕಿಂಗ್ ರೂಲ್ಸ್ ಪ್ರಾಯೋಗಿಕವಾಗಿ ಜಾರಿ

ಸುಬ್ರಹ್ಮಣ್ಯದ ಕೆ.ಎಸ್ .ಆರ್.ಟಿ ಬಸ್ ನಿಲ್ದಾಣಕ್ಕೆ ಆದಿ ಸುಬ್ರಹ್ಮಣ್ಯ ರಸ್ತೆಯಿಂದ ಪ್ರವೇಶ ಆರಂಭ ದ್ವಾರ ತೆರೆಯಲಾಗಿದೆ.

ಕೆಲ ವರ್ಷಗಳಿಂದ ಈ ಪ್ರವೇಶ ದ್ವಾರವನ್ನು ಮುಚ್ಚಲಾಗಿದ್ದು,ಇತ್ತೀಚೆಗೆ ಎ.ಸಿ ಅನುಮತಿ ನೀಡಿದ ಬಳಿಕ ಈ ದ್ವಾರ ತೆರಯಲು ಅನುಮತಿ ನೀಡಲಾಗಿತ್ತು.

ಸುಬ್ರಹ್ಮಣ್ಯಲ್ಲಿ ಪಾರ್ಕಿಂಗ್ ರೂಲ್ಸ್ ಪ್ರಾಯೋಗಿಕವಾಗಿ ಜೂ.16 ರಿಂದ ಜಾರಿಯಾಗಿದೆ. ಇತ್ತೀಚೆಗೆ ಸುಬ್ರಹ್ಮಣ್ಯ ಗ್ರಾ.ಪಂ ನಲ್ಲಿ ನಡೆದ ಸಭೆಯಲ್ಲಿ ಸುಬ್ರಹ್ಮಣ್ಯ ಠಾಣೆಯ ವತಿಯಿಂದ ಪಾರ್ಕಿಂಗ್ ರೂಲ್ಸ್ ಬಗ್ಗೆ ನಿರ್ಣಯ ಮಾಡಲಾಗಿತ್ತು. ಈ ನಿಯಮದಂತೆ ವಾಹನ ಸಂಚಾರ ಹಾಗೂ ಪಾರ್ಕಿಂಗ್ ನಿಯಮ ಪ್ರಾಯೋಗಿಕವಾಗಿ ಜಾರಿಗೊಳಿಸಲಾಗಿದೆ.