ಬೆಳ್ಳಾರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಲೆಕ್ಕಿಗ ರವೀಂದ್ರ ರೈ ಎಂ ನಿವೃತ್ತಿ

0

ಬೆಳ್ಳಾರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಲೆಕ್ಕಿಗರಾಗಿ ಸೇವೆ ಸಲ್ಲಿಸುತ್ತಿದ್ದ ರವೀಂದ್ರ ರೈ ಎಂ.ರವರು ಆ.31 ರಂದು ಸೇವಾ ನಿವೃತ್ತಿ ಹೊಂದಿದ್ದಾರೆ.


ಇವರು 33 ವರ್ಷ ಸಹಕಾರಿ ಸಂಘದಲ್ಲಿ ಸುದೀರ್ಘ ಸೇವೆ ಸಲ್ಲಿಸಿದ್ದರು.
ದಿನಾಂಕ 1-09-1991 ರಿಂದ ಗುಮಾಸ್ತರಾಗಿ ಸಹಕಾರಿ ಸಂಘಕ್ಕೆ ಸೇರಿದ ಇವರು ದಿನಾಂಕ 1-03-2022 ರಿಂದ ಲೆಕ್ಕಿಗರಾಗಿ ಭಡ್ತಿ ಹೊಂದಿದರು.
ಬಳಿಕ ಸಹಕಾರಿ ಸಂಘದಲ್ಲಿ ಲೆಕ್ಕಿಗರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.
ಇವರು ಪಾಲ್ತಾಡು ಗ್ರಾಮದ ನೆಲ್ಯಾಜೆ ಮನೆಯವರಾಗಿದ್ದು ಇವರ ಪತ್ನಿ ಶ್ರೀಮತಿ ವೀಣಾ ರೈ ಗೃಹಿಣಿಯಾಗಿದ್ದಾರೆ.


ಪುತ್ರ ವಸೂನ್ ರೈ ಕಾರ್ಕಳ ನಿಟ್ಟೆ ಕಾಲೇಜಿನಲ್ಲಿ ಮೂರನೇ ವರ್ಷದ ಇಂಜಿನಿಯರಿಂಗ್ ವ್ಯಾಸಾಂಗ ಮಾಡುತ್ತಿದ್ದಾರೆ.
ಮತ್ತೋರ್ವ ಪುತ್ರ ಸುಹಾನ್ ರೈ ನರಿಮೊಗರು ಸಾಂದೀಪನಿ ಶಾಲೆಯಲ್ಲಿ ಹತ್ತನೇ ತರಗತಿಯಲ್ಲಿ ಕಲಿಯುತ್ತಿದ್ದಾರೆ.

ಸನ್ಮಾನ, ಬೀಳ್ಕೊಡುಗೆ

ನಿವೃತ್ತರಾದ ರವೀಂದ್ರ ರೈಯವರಿಗೆ ಸನ್ಮಾನ ಹಾಗೂ ಬೀಳ್ಕೊಡುಗೆ ಕಾರ್ಯಕ್ರಮ ಸಂಘದ ಸಭಾಭವನದಲ್ಲಿ ಸೆ.01 ರಂದು ನಡೆಯಲಿದೆ.