ಅಗಲಿದ ಲಕ್ಷ್ಮಣ ಗೌಡ ಮದುವೆಗದ್ದೆಯವರಿಗೆ ನುಡಿನಮನ

0

ಉಬರಡ್ಕ ಮಿತ್ತೂರು ಗ್ರಾಮದ ಲಕ್ಷ್ಮಣ ಗೌಡ ಮದುವೆಗದ್ದೆಯವರಿಗೆ ನುಡಿನಮನ ಕಾರ್ಯಕ್ರಮವು ನ.1 ರಂದು ಮದುವೆಗದ್ದೆ ಮನೆಯಲ್ಲಿ ನಡೆಯಿತು.

ಕಾಯರ್ತೋಡಿ ಮಹಾವಿಷ್ಣು ದೇವಸ್ಥಾನ ಜೀರ್ಣೋದ್ದಾರ ಸಮಿತಿಯ ಮಾಜಿ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕ ಅರೆಭಾಷೆ ಅಕಾಡೆಮಿ ಮಾಜಿ ಸದಸ್ಯ ಎ.ಟಿ ಕುಸುಮಾಧರ ರವರು ನುಡಿನಮನ ಸಲ್ಲಿಸಿದರು. ಆಗಮಿಸಿದ ಎಲ್ಲರೂ ಮೃತರ ಆತ್ಮಕ್ಕೆ ಚಿರಶಾಂತಿ ಕೋರಿ ಮೌನ ಪ್ರಾರ್ಥನೆ ಮಾಡಿ, ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು.


ಈ ಸಂದರ್ಭದಲ್ಲಿ ಮೃತರ ಪತ್ನಿ ಶ್ರೀಮತಿ ತಾರಾಮಣಿ, ಪುತ್ರ ಸಂದೀಪ್ ಮದುವೆಗದ್ದೆ, ಪುತ್ರಿಯರಾದ ಶ್ರೀಮತಿ ಚೇತನಾ, ಶ್ರೀಮತಿ ವಿನುತಾ, ಸೊಸೆ ಶ್ರೀಮತಿ ಜಯಶ್ರೀ, ಸಹೋದರ ದಾಮೋದರ ಗೌಡ ಮದುವೆಗದ್ದೆ, ಸಹೋದರಿಯರಾದ ಶ್ರೀಮತಿ ಸಾವಿತ್ರಿ, ಶ್ರೀಮತಿ ಪಾರ್ವತಿ ಅಳಿಯಂದಿರಾದ ಮೋಹನ ಅರಂಬೂರು, ಲಕ್ಷ್ಮಣ್ ಮುತ್ಲಾಜೆ, ಮೊಮ್ಮಕ್ಕಳು, ಹಾಗೂ ಕುಟುಂಬಸ್ಥರು, ಬಂಧು ಮಿತ್ರರು, ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.