ಡಾ. ಕುರುಂಜಿಯವರ ಹಾದಿಯಲ್ಲಿ ಡಾ. ರೇಣುಕಾಪ್ರಸಾದ್ ಶಿಕ್ಷಣ ಸಂಸ್ಥೆಗಳನ್ನು ಮುನ್ನಡೆಸುತ್ತಿದ್ದಾರೆ – ಭಾಗೀರಥಿ ಮುರುಳ್ಯ
ನಾವು ಯಾವುದೇ ಸ್ಥಾನಕ್ಕೆ ಹೋಗಬೇಕಾದರೂ, ಸಮಾಜದಲ್ಲಿ ಗುರುತಿಸಿಕೊಳ್ಳಬೇಕಾದರೂ ಶಿಕ್ಷಣ ಅತ್ಯಗತ್ಯ. ಇದನ್ನು ಅರಿತು ಡಾ. ಕುರುಂಜಿಯವರು ಸುಳ್ಯದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದರು.

ಡಾ. ಕುರುಂಜಿಯವರು ಶಿಕ್ಷಣಕ್ಕೆ ನೀಡಿದ ಮಹತ್ವವನ್ನು ಅರಿತು ಅವರ ಹಾದಿಯಲ್ಲೇ ಶಿಕ್ಷಣ ಸಂಸ್ಥೆಗಳನ್ನು ಬೆಳೆಸುತ್ತಿರುವವರು ಡಾ. ರೇಣುಕಾಪ್ರಸಾದ್ ಕೆ.ವಿ.ಯವರು. ನಾವು ಏನೇ ಆಗುವ ಮೊದಲು ಮಾನವರಾಗಬೇಕು. ಆಗ ಸಮಾಜ ನಮ್ಮನ್ನು ಗೌರವಿಸುತ್ತದೆ ಎಂದು ಶಾಸಕಿ ಕು. ಭಾಗೀರಥಿ ಮುರುಳ್ಯ ಹೇಳಿದರು. ಅವರು ನ. 12ರಂದು ಕುರುಂಜಿ ಜಾನಕಿ ವೆಂಕಟ್ರಮಣ ಗೌಡ ಸಭಾಭವನ ಅಮರಜ್ಯೋತಿಯಲ್ಲಿ ನಡೆದ ಸುಳ್ಯದ ಕೆ.ವಿ.ಜಿ ಅಮರಜ್ಯೋತಿ ಪಿ.ಯು. ಕಾಲೇಜಿನ ವಾರ್ಷಿಕೋತ್ಸವದ ಎಜೆ ಫಿಯೆಷ್ಟಾ 2024 ರ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಇನ್ನೊರ್ವ ಮುಖ್ಯ ಅತಿಥಿ ಎಸ್.ಎಲ್.ವಿ. ಬುಕ್ ಹೌಸ್ ಚಯರ್ ಮೆನ್ ದಿವಾಕರ್ ದಾಸ್ ಮಾತನಾಡುತ್ತಾ ನಾವು ಮುಖ್ಯವಾಗಿ ನಮ್ಮ ಹೆತ್ತವರನ್ನು, ವಿದ್ಯೆ ಕಲಿಸಿದ ಗುರುಗಳನ್ನು ಮತ್ತು ಹಿರಿಯರನ್ನು ಗೌರವಿಸಬೇಕು. ಆಗ ಸಮಾಜ ನಿಮ್ಮನ್ನು ಗೌರವಿಸುತ್ತದೆ ಎಂದರು. ಕೆ.ವಿ.ಜಿ ಚಾರಿಟೇಬಲ್ ಟ್ರಸ್ಟ್ ಆಡಳಿತ ನಿರ್ದೇಶಕರೂ, ಎ.ಒ.ಎಲ್.ಇ. ಕಮಿಟಿ ಬಿ ಚಯರ್ ಮೆನ್ ಡಾ. ರೇಣುಕಾಪ್ರಸಾದ್ ಕೆ.ವಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವಿ.ಟಿ.ಯು ಎಕ್ಸಿಕ್ಯುಟಿವ್ ಕೌನ್ಸಿಲ್ ಮೆಂಬರ್ ಹಾಗೂ ಕೆ.ವಿ.ಜಿ. ಅಮರಜ್ಯೋತಿ ಪ.ಪೂ. ಕಾಲೇಜಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಉಜ್ವಲ್ ಯು.ಜೆ ಮಾತನಾಡಿ ಕಾಲೇಜಿನ ಮ್ಯಾನೇಜಿಂಗ್ ಟ್ರಸ್ಟಿ ಡಾ. ರೇಣುಕಾಪ್ರಸಾದ್ ಕೆ.ವಿಯವರ ಮಾರ್ಗದರ್ಶನದಂತೆ ಪ್ರೊಫೆಷನಲ್ ಕೋರ್ಸ್ ಗಳಿಗೆ ನಮ್ಮ ಮಕ್ಕಳನ್ನು ಸೇರಿಸಬೇಕೆನ್ನುವ ಉದ್ದೇಶದಿಂದ ವಿಶೇಷ ಪರಿಣತರಿಂದ ವಿವಿಧ ತರಬೇತಿಗಳನ್ನು ನೀಡುತ್ತಿದ್ದೇವೆ. ನಮ್ಮ ಸಂಸ್ಥೆಯ ವಿದ್ಯಾರ್ಥಿ ಪ್ರಥಮ್ ಶೇಖರ್ ಅತ್ಯುತ್ತಮ ರ್ಯಾಂಕ್ ನೊಂದಿಗೆ ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ಉಚಿತ ಸೀಟ್ ಪಡೆದುಕೊಂಡಿರುವುದು ನಮ್ಮ ಸಂಸ್ಥೆಯ ಪ್ರಾಂಶುಪಾಲರು, ಉಪನ್ಯಾಸಕ ವೃಂದದವರ ತಂಡದ ಪ್ರಯತ್ನದಿಂದ ಸಾಧ್ಯವಾಗಿದೆ ಎಂದರು.

ವೇದಿಕೆಯಲ್ಲಿ ಉಪಸ್ಥಿತರಿದ್ದ
ಕಾಲೇಜಿನ ಪ್ರಾಂಶುಪಾಲರಾದ ಡಾ. ಯಶೋಧ ರಾಮಚಂದ್ರ ಕಾಲೇಜನ ವಾರ್ಷಿಕ ವರದಿ ವಾಚಿಸಿದರು. ಉಪನ್ಯಾಸಕಿ ಶ್ರೀಮತಿ ಮಲ್ಲಿಕಾ ಭಾಗೀರಥಿ ಮುರುಳ್ಯ ಮತ್ತು ಉಪನ್ಯಾಸಕಿ ಸುಶ್ಮಿತಾ ಜಾಕೆ ದಿವಾಕರ್ ದಾಸ್ ರ ಸನ್ಮಾನ ಪತ್ರ ವಾಚಿಸಿದರು. ಉಪನ್ಯಾಸಕಿ ರೀತಿ ಲಕ್ಕಿ ಪೋಷಕರ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು. ಉಪನ್ಯಾಸಕಿ ಶ್ರೀಮತಿ ಭವ್ಯ ಸಿ.ಟಿ ಪ್ರತಿಭಾನ್ವಿತ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು. ಉಪನ್ಯಾಸಕಿ ಅಭಿಜ್ಞಾ ಕೆವಿಜಿ ಎಜೆ ಸ್ಕಾಲರ್ ಶಿಫ್ ಫಲಿತಾಂಶವನ್ನು ವಾಚಿಸಿದರು. ಉಪನ್ಯಾಸಕರಾದ ಶ್ರೀಮತಿ ಬೀನಾ ಮತ್ತು ದೀಕ್ಷಿತ್ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳ ಹೆಸರನ್ನು, ರಾಜೇಶ್ ಟ್ಯಾಲಿ ಕೋರ್ಸ್ ಪೂರೈಸಿದ ವಿದ್ಯಾರ್ಥಿಗಳ ಹೆಸರನ್ನು ಮತ್ತು ರತ್ನಾವತಿ ಇತರ ಸಂಸ್ಥೆಗಳು ಕಳುಹಿಸಿದ ಶುಭಾಶಂಸನೆಗಳನ್ನು ವಾಚಿಸಿದರು. ವೇದಿಕೆಯಲ್ಲಿದ್ದ ಉಪಪ್ರಾಂಶುಪಾಲರಾದ ದೀಪಕ್ ವೈ.ಆರ್ ಸ್ವಾಗತಿಸಿ, ಉಪನ್ಯಾಸಕಿ ಶ್ರೀಮತಿ ಅರ್ಪಿತಾ ವಂದಿಸಿದರು.
ಆಂಗ್ಲ ಭಾಷಾ ಉಪನ್ಯಾಸಕಿ ಶ್ರೀಮತಿ ಮಲ್ಲಿಕಾ ಎಂ.ಎಲ್, ವಿದ್ಯಾರ್ಥಿಗಳಾದ ಕು. ಪ್ರತಿಜ್ಞಾ, ಶ್ರೇಯಸ್ ಕುಕ್ಕುಜೆ, ತನ್ವಿ ಯು.ಟಿ ಮತ್ತು ನಹೀಮಾ ತಸ್ನೀನ್ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಲಘು ಉಪಾಹಾರ ನಂತರ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಸಹಭೋಜನದೊಂದಿಗೆ ಕಾರ್ಯಕ್ರಮ ಸಮಾಪ್ತಿಗೊಳ್ಳಲಿದೆ.