ಕೆವಿಜಿ ಐಪಿಎಸ್ ನಲ್ಲಿ 8, 9 ಮತ್ತು 10ನೇ ತರಗತಿಯ ಮಕ್ಕಳಿಗೆ ಬ್ಯಾಂಕ್ ಖಾತೆಯ ಸುರಕ್ಷತೆಯ ಬಗ್ಗೆ ಮಾಹಿತಿ ಕಾರ್ಯಾಗಾರ ನಡೆಯಿತು. ಸುಳ್ಯ ಫೆಡರಲ್ ಬ್ಯಾಂಕ್ ನ ಅಸಿಸ್ಟೆಂಟ್ ಮ್ಯಾನೇಜರ್ ಸ್ಕಂದನ್ ಶೇಷಾದಿರಿಯವರು ಮಾಹಿತಿಯನ್ನು ನೀಡಿದರು. ಶಾಲಾ ಮಕ್ಕಳಿಗೆ ನಾನಾ ರೀತಿಯ ಉಳಿತಾಯ ಖಾತೆಯ ಬಗ್ಗೆ ತಿಳಿಹೇಳಿದರು. ಸ್ಕ್ಯಾಮ್ ಮೂಲಕ ಮೋಸಹೋಗುವ, ಅದರಿಂದ ಆಗುವ ನಷ್ಟಗಳಿಂದ ಪಾರಾಗುವ ಬಗ್ಗೆ ಅನೇಕ ಸಲಹೆ ಸೂಚನೆಗಳನ್ನು ನೀಡಿದರು.
ಶಾಲಾ ಪ್ರಾಂಶುಪಾಲರಾದ ಅರುಣಕುಮಾರ್, ಉಪ ಪ್ರಾಂಶುಪಾಲೆ ಶಿಲ್ಪಾ ಬಿದ್ದಪ್ಪ ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.