ಅಯ್ಯನಕಟ್ಟೆ ಶ್ರೀ ಇಷ್ಟದೇವತಾ ಉಳ್ಳಾಕುಲು ಸನ್ನಿಧಿಯಲ್ಲಿ ಅಷ್ಟಮಂಗಲ ಪ್ರಶ್ನೆ ನಡೆಸಲು ನಿರ್ಧಾರ

0

ಅಯ್ಯನಕಟ್ಟೆ ಶ್ರೀ ಇಷ್ಟದೇವತಾ ಉಳ್ಳಾಕುಲು ಸನ್ನಿಧಿಯಲ್ಲಿ ದೈವಜ್ಞರ ಸೂಚನೆಯ ಮೇರೆಗೆ ಅಷ್ಟಮಂಗಲ ಪ್ರಶ್ನೆಯನ್ನು ನಡೆಸುವ ಬಗ್ಗೆ ನ. 17ರಂದು ನಡೆದ ಭಕ್ತಾದಿಗಳ ಸಭೆಯಲ್ಲಿ ನಿರ್ಣಯಿಸಲಾಯಿತು. ಸನ್ನಿಧಿಗೆ ಸಂಬಂಧಿಸಿದ ಇತರ ದೈವೀ ಶಕ್ತಿಗಳ ಇರುವಿಕೆ, ಅವುಗಳಿಗೆ ಸೂಕ್ತ ಕಾಯಕಲ್ಪ ಒದಗಿಸುವುದು ಮತ್ತು ಕ್ಷೇತ್ರದ ಅಭಿವೃದ್ಧಿಗೆ ತೆಗೆದುಕೊಳ್ಳಬೇಕಾದ ಮುಂದಿನ ಹೆಜ್ಜೆಗಳ ಬಗ್ಗೆ ಸಮಗ್ರ ಮಾಹಿತಿಯನ್ನು ಪಡೆಯಬೇಕಾದರೆ ಅಷ್ಟಮಂಗಲ ಪ್ರಶ್ನೆ ನಡೆಸಬೇಕೆಂದು ದೈವಜ್ಞರು ಅಭಿಪ್ರಾಯಪಟ್ಟ ಹಿನ್ನೆಲೆಯಲ್ಲಿ ಸಭೆಯಲ್ಲಿ ಚರ್ಚಿಸಿ ಈ ನಿರ್ಣಯ ಕೈಗೊಳ್ಳಲಾಗಿದೆ.
ಶ್ರೀ ಇಷ್ಟದೇವತಾ ಉಳ್ಳಾಕುಲು ಸೇವಾ ಸಮಿತಿಯ ಅಧ್ಯಕ್ಷ ಚೆನ್ನಪ್ಪ ಗೌಡ ಕಜೆಮೂಲೆಯವರ ಅಧ್ಯಕ್ಷತೆಯಲ್ಲಿ ನಡೆದ ಭಕ್ತಾದಿಗಳ ಸಭೆಯಲ್ಲಿ
ವಿಶ್ವಸ್ಥರಾದ ವೆಂಕಟ್ರಮಣ ಗೌಡ ತಂಟೆಪ್ಪಾಡಿ, ಎನ್. ವಿಶ್ವನಾಥ ರೈ ಕಳಂಜ‌ಗುತ್ತು, ಶೀನಪ್ಪ ಗೌಡ ತೋಟದಮೂಲೆ, ಪ್ರಧಾನ ದೈವದ ಪಾತ್ರಿ ಲಕ್ಷ್ಮಣ ಗೌಡ ಬೇರಿಕೆ, ಕಳಂಜ ಗ್ರಾ.ಪಂ. ಅಧ್ಯಕ್ಷ ಬಾಲಕೃಷ್ಣ ಬೇರಿಕೆ, ಸೇವಾ ಸಮಿತಿ ಮತ್ತು ಜಾತ್ರೋತ್ಸವ ಸಮಿತಿ ಪದಾಧಿಕಾರಿಗಳಾದ ಶ್ರೀನಾಥ್ ರೈ, ಕುಶಾಲಪ್ಪ ಗೌಡ ಮಣಿಮಜಲು, ಪುರುಷೋತ್ತಮ ಗೌಡ ತಂಟೆಪ್ಪಾಡಿ, ಚಂದ್ರಶೇಖರ ರೈ ಬಜನಿ, ಬಜನಿಗುತ್ತು ಪ್ರಭಾಕರ ಆಳ್ವ, ಪ್ರಶಾಂತ್ ಕುಮಾರ್ ಕಿಲಂಗೋಡಿ, ರಾಮ್ ಪ್ರಸಾದ್ ಕಾಂಚೋಡು, ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಎಂ. ಕೂಸಪ್ಪ ಮುಗುಪ್ಪು, ಅನಂತಕೃಷ್ಣ ತಂಟೆಪ್ಪಾಡಿ, ಜಗನ್ನಾಥ ರೈ ಉರುಂಬಿ, ಕೃಷ್ಣಪ್ಪ ಪೂಜಾರಿ ಮೂಲೆಮಜಲು, ಕೌಶಿಕ್ ಕೊಡಪಾಲ, ಗಣೇಶ್ ಮುದ್ದಾಜೆ, ಮುಂಡುಗಾರು ಸುಬ್ರಹ್ಮಣ್ಯ, ಸುಧಾಕರ ರೈ ಎ.ಎಂ, ರುಕ್ಮಯ್ಯ ಗೌಡ ಕಳಂಜ, ಬಾಳಿಲ ಗ್ರಾ.ಪಂ. ಸದಸ್ಯರುಗಳಾದ ರವೀಂದ್ರ ರೈ ಟಪ್ಪಾಲುಕಟ್ಟೆ, ತಾರಾನಾಥ ಮಡಿವಾಳ, ದೈವ ನರ್ತಕರಾದ ನಾರಾಯಣ ಪರವ, ಜಯರಾಮ ಅಜಿಲ, ಪ್ರೀತೇಶ್ ತಂಟೆಪ್ಪಾಡಿ, ವೆಂಕಟ್ರಮಣ ಬೇರಿಕೆ, ಮಾಧವ ಕಜೆಮೂಲೆ, ರಾಜೇಶ್ ಪಟ್ಟೆ, ಪುಟ್ಟಣ್ಣ ಗೌಡ ತಂಟೆಪ್ಪಾಡಿ, ರಜಿತ್, ಟಿ. ಬಾಲಕೃಷ್ಣ ಗೌಡ, ಸಾಕೇತ್ ತಂಟೆಪ್ಪಾಡಿ, ರವೀಂದ್ರ, ಬಾಲಕೃಷ್ಣ ಗೌಡ ಮರೆಂಗಾಲ, ತಿಲಕ್ ಎಂ.ಟಿ, ದಿವಾಕರ ಬಾಳಿಲ, ರವೀಂದ್ರನಾಥ್ ರೈ, ರಾಜೇಶ್ ಎ, ರಂಜಿತ್ ಬಿ.ಎಲ್, ಗಿರಿಧರ ಕೆ ಸೇರಿದಂತೆ ಭಕ್ತಾದಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.