ಅಮರಪಡ್ನೂರಿನ ಚೊಕ್ಕಾಡಿಯ ಪ್ರಗತಿಪರ ಕೃಷಿಕ ಚಂದ್ರಶೇಖರ ಸುಬ್ಬಯ್ಯ ಮೂಲೆಯವರ ಕೃಷಿ ತೋಟವನ್ನು ವೀಕ್ಷಿಸಲು ಕೇರಳದ ಮಂಜೇಶ್ವರ ತಾಲೂಕಿನ 2 ವಲಯದ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಸಂಘದ ಸದಸ್ಯರು ನ.23 ರಂದು ಕೃಷಿ ಅಧ್ಯಯನ ಪ್ರವಾಸ ದ ಸಂದರ್ಭದಲ್ಲಿ ಭೇಟಿ ನೀಡಿದರು.
ಸುಮಾರು 60 ಮಂದಿ ಸದಸ್ಯರ ತಂಡ ಬೆಳಗ್ಗೆ ಚಂದ್ರಶೇಖರ ರವರ ತೋಟಕ್ಕೆ ಭೇಟಿ ನೀಡಿ ವಿನೂತನ ಮಾದರಿಯ ಸಾವಯವ ತರಕಾರಿ ಕೃಷಿಯ ಬಗ್ಗೆ ಮಾಹಿತಿ ಪಡೆದುಕೊಂಡರು. ಧರ್ಮಸ್ಥಳ ಯೋಜನೆಯ ತಾಲೂಕು ಕೃಷಿ ಮೇಲ್ವಿಚಾರಕಿ ಪ್ರಿಯಾ ರವರು ಪ್ರವಾಸದ ನೇತೃತ್ವ ವಹಿಸಿದ್ದರು.
ಈ ಸಂದರ್ಭದಲ್ಲಿ ಸ್ಥಳೀಯ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಪ್ರಗತಿಪರ ಕೃಷಿಕ ರಾಘವೇಂದ್ರ ಪುಳಿಮಾರಡ್ಕ, ನಿವೃತ್ತ ಮುಖ್ಯ ಶಿಕ್ಷಕಿ ಶೀಲಾವತಿ ಕೊಳಂಬೆ, ಹಿರಿಯರಾದ ಶ್ರೀಮತಿ ದೇವಮ್ಮ ಸುಬ್ಬಯ್ಯಮೂಲೆ,
ಶ್ರೀಮತಿತನುಜ
ಚಂದ್ರಶೇಖರ ಹಾಗೂ ಕೃಷಿಕರು, ಕೂಲಿ ಕಾರ್ಮಿಕರು ಉಪಸ್ಥಿತರಿದ್ದರು. ಚಂದ್ರಶೇಖರ ರವರ ಅಡಿಕೆ ತೋಟದ ಮಧ್ಯೆ ಸೌತೆಕಾಯಿ ಕೃಷಿ ಮತ್ತು ತರಾವರಿ ತರಕಾರಿ ಕೃಷಿಯ ಕುರಿತು ಪತ್ರಿಕೆಗಳಲ್ಲಿ ಲೇಖನ ಬಂದಿರುವ ಹಿನ್ನೆಲೆಯಲ್ಲಿ ಇವರ ತೋಟವನ್ನು ವೀಕ್ಷಿಸಲು ಈಗಾಗಲೇ ಅನೇಕ ಕೃಷಿಕರು, ಸಂಘ ಸಂಸ್ಥೆಗಳ ಸದಸ್ಯರು ಭೇಟಿ ನೀಡಿರುತ್ತಾರೆ.