ಶಾಲಾ ಶಿಕ್ಷಣ ಇಲಾಖೆ ,ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸುಳ್ಯ,ಕ್ಷೇತ್ರ ಸಂಪನ್ಮೂಲ ಕೇಂದ್ರ ಸುಳ್ಯ,ದ.ಕ.ಜಿ.ಪಂ.ಸ.ಹಿ.ಪ್ರಾ.ಶಾಲೆ ದರ್ಖಾಸ್ತು ಆಂಗ್ಲ ಮಾಧ್ಯಮ ( ದ್ವಿ ಭಾಷಾ) ಉದ್ಘಾಟನಾ ಕಾರ್ಯಕ್ರಮವು ನ.29 ರಂದು ನಡೆಯಿತು.
ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ಶೀತಲ್ ಯು.ಕೆ.ದೀಪ ಬೆಳಗಿಸಿ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ಮುಖ್ಯ ರಸ್ತೆ ಬದಿ ಅಳವಡಿಸಿದ ಶಾಲಾ ನಾಮಫಲಕವನ್ನು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಶ್ರೀಮತಿ ರಾಜೀವಿ ಆರ್.ರೈ ಅನಾವರಣಗೊಳಿಸಿದರು.
ಆಂಗ್ಲ ಮಾಧ್ಯಮ ತರಗತಿಯನ್ನು ದರ್ಖಾಸ್ತು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷೆ ಶ್ರೀಮತಿ ಪ್ರೇಮಲತಾ ರೈ ರಿಬ್ಬನ್ ಕತ್ತರಿಸಿ ಉದ್ಘಾಟಿಸಿದರು.
ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಶ್ರೀಮತಿ ಪ್ರೇಮಾರವರು ಪ್ರಾಸ್ತಾವಿಕವಾಗಿ ಮಾತನಾಡಿ ಶಾಲಾ ಚಟುವಟಿಕೆಗಳ ಬಗ್ಗೆ ಮತ್ತು ಶಾಲೆಗೆ ಆಂಗ್ಲ ಮಾಧ್ಯಮ ಮಂಜೂರುಗೊಳ್ಳಲು ಪ್ರಯತ್ನಿಸಿದ ಶ್ರೀಮತಿ ರಾಜೀವಿ ಆರ್.ರೈ, ಶಾಲಾ ಸಂಚಲನ ಸಮಿತಿ ಕೋಶಾಧಿಕಾರಿ ಸುಪ್ರೀಯ ಎನ್.ಆಳ್ವ ,ಇಲಾಖೆಯವರು ಹಾಗೂ ಸಹಕರಿಸಿದವರನ್ನು ನೆನಪಿಸಿಕೊಂಡರು.
ಬೆಳ್ಳಾರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ನಮಿತಾ ಎಲ್.ರೈ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಶಿಕ್ಷಣ ಸಂಯೋಜಕಿ ಶ್ರೀಮತಿ ಸಂಧ್ಯಾ,ಬೆಳ್ಳಾರೆ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಗಂಗಾಧರ ರೈ ಪುಡ್ಕಜೆ,ಆಂಗ್ಲ ಮಾಧ್ಯಮ ಶಿಕ್ಷಕಿ ಸವಿತ ಗುಜರನ್, ಗ್ರಾಮ ಪಂಚಾಯತ್ ಸದಸ್ಯೆ ಭವ್ಯ , ಎಸ್.ಡಿ.ಎಂ.ಸಿ ಅಧ್ಯಕ್ಷ ಅಬುಸಾಲಿ ಉಪಸ್ಥಿತರಿದ್ದರು.
ಅತಿಥಿ ಶಿಕ್ಷಕಿ ಸೆಮಿಮಾ ಎಇ.ಎಚ್.ಸ್ವಾಗತಿಸಿ, ವಿದ್ಯಾರ್ಥಿಗಳು ಪ್ರಾರ್ಥಿಸಿ,ಶ್ರೀಧರ ಚೂಂತಾರು ಕಾರ್ಯಕ್ರಮ ನಿರೂಪಿಸಿ,ಶಿಕ್ಷಕಿ ಶ್ವೇತಾರವರು ವಂದಿಸಿದರು.