ನಿಸರ್ಗ ಯುವಕ ಮಂಡಲ ಐನೆಕಿದು ಬೆಳ್ಳಿಹಬ್ಬ ಸಂಭ್ರಮ

0

ಡಿ.22 ರಂದು ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ

ಡಿ.28 ರಂದು ಹಗ್ಗಜಗ್ಗಾಟ, ಡಿ.29 ರಂದು ವಾಲಿಬಾಲ್

ಡಿ.28-29 ಡ್ಯಾನ್ಸ್ & ಬೀಟ್ಸ್, ಕುಮಾರ ವೈಭವ, ನಾಟಕ “ಕಲ್ಜಿಗದ ಮಾಯಕಾರೆ ಪಂಜುರ್ಲಿ”

ನಿಸರ್ಗ ಯುವಕ ಮಂಡಲ ಐನೆಕಿದು ಇದರ ಬೆಳ್ಳಿಹಬ್ಬದ
ಪ್ರಯುಕ್ತ ಐನೆಕಿದು ಶಾಲಾ ಬಳಿ ಡಿ.22 ರಂದು ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ, ಡಿ.28 ರಂದು ಹಗ್ಗಜಗ್ಗಾಟ, ಡಿ.29 ರಂದು ವಾಲಿಬಾಲ್, ಹಾಗೂ ಎರಡೂ ದಿನ ಸಂಜೆ ಬಳಿಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರಗಲಿದ್ದು ಡ್ಯಾನ್ಸ್ & ಬೀಟ್ಸ್, ಕುಮಾರ ವೈಭವ, ನಾಟಕ “ಕಲ್ಜಿಗದ ಮಾಯಕಾರೆ ಪಂಜುರ್ಲಿ” ನಡೆಯಲಿದೆ.

ಡಿ.22 ರಂದು ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ ನಡೆಯಲಿದ್ದು
ದ.ಕ ಜಿಲ್ಲಾ ವ್ಯಾಪ್ತಿಯ ಹಿಂದೂ ಭಾಂದವರ ಕ್ರಿಕೆಟ್ ಪಂದ್ಯಾಟವಾಗಿದ್ದು 7 ಜನರ 30 ಗಜಗಳ ಪಂದ್ಯಾಟ ವಾಗಿರುತ್ತದೆ.
ಮೊದಲು ನೊಂದಾಯಿಸಿದ 40 ತಂಡಗಳಿಗೆ ಭಾಗವಹಿಸಲು ಅವಕಾಶವಿದ್ದು, ವಿಜೇತ ತಂಡಗಳಿಗೆ ಪ್ರಥಮ, ದ್ವಿತೀಯ, ತೃತೀಯ, ಚತುರ್ಥ ನಗದು ಹಾಗೂ ನಿಸರ್ಗ ಟ್ರೋಫಿ ಬಹುಮಾವಿದೆ. ತಂಡದ ಪ್ರವೇಶ ಶುಲ್ಕ ರೂ.1500 ಇರಲಿದೆ.


ಡಿ. 28 ರಂದು ಬೆಳಗ್ಗಿನಿಂದ ಹಿಂದೂ ಬಾಂಧವರ ಹಗ್ಗ ಜಗ್ಗಾಟ ಪಂದ್ಯಾಟ ನಡೆಯಲಿದ್ದು
ಮೊದಲು ನೊಂದಾಯಿಸಿದ 40 ತಂಡಗಳಿಗೆ ಭಾಗವಹಿಸಲು ಅವಕಾಶವಿದೆ, ವಿಜೇತ ತಂಡಗಳಿಗೆ ಪ್ರಥಮ, ದ್ವಿತೀಯ, ತೃತೀಯ, ಚತುರ್ಥ ನಗದು ಹಾಗೂ ನಿಸರ್ಗ ಟ್ರೋಫಿ ಬಹುಮಾವಿದೆ. ತಂಡದ ಪ್ರವೇಶ ಶುಲ್ಕ ರೂ.700 ಇರಲಿದೆ. ಅಂದು ಸಂಜೆ ಗಂಟೆ 5.00 ರಿಂದ ವಿದ್ಯಾರ್ಥಿಗಳಿಂದ ಹಾಗೂ ಊರವರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದ್ದು ರಾತ್ರಿ ಗಂಟೆ 8.00 ರಿಂದ ಜೀವನ್ ಬೆಳ್ಳಾರೆ ನಿರ್ದೇಶನದ ಡ್ಯಾನ್ಸ್ & ಬೀಟ್ಸ್ ನೃತ್ಯ ಸಂಭಮ ನಡೆಯಲಿದೆ.

ಡಿ.29 ರಂದು ಸುಳ್ಯ ವಿಧಾನ ಸಭಾ ವ್ಯಾಪ್ತಿಯ ಹಿಂದೂ ಬಾಂಧವರ ವಾಲಿಬಾಲ್ ಪಂದ್ಯಾಟ ನಡೆಯಲಿದ್ದು ಮೊದಲು ನೋಂದಾಯಿತ 30 ತಂಡಗಳಿಗೆ ಭಾಗವಹಿಸಲು ಅವಕಾಶವಿದೆ. ವಿಜೇತ ತಂಡಗಳಿಗೆ ಪ್ರಥಮ, ದ್ವಿತೀಯ, ತೃತೀಯ, ಚತುರ್ಥ ನಗದು ಹಾಗೂ ನಿಸರ್ಗ ಟ್ರೋಫಿ ಬಹುಮಾವಿದೆ. ತಂಡದ ಪ್ರವೇಶ ಶುಲ್ಕ ರೂ.750 ಇರಲಿದೆ‌. ಅಂದು ಸಂಜೆ ಗಂಟೆ 5.00 ರಿಂದ ಕುಮಾರಸ್ವಾಮಿ ವಿದ್ಯಾಲಯದ ವಿದ್ಯಾರ್ಥಿಗಳಿಂದ ಕುಮಾರ ವೈಭವ ನಡೆಯಲಿದೆ. ಸಂಜೆ ಗಂಟೆ 7.00 ರಿಂದ ಸಭಾ ಕಾರ್ಯಕ್ರಮ ನಡೆಯಲಿದೆ. ರಾತ್ರಿ ಗಂಟೆ 9.00 ರಿಂದ ಶಾರದಾ ಆರ್ಟ್ಸ್‌ನ ಐಸಿರಿ ಕಲಾವಿದರು ಮಂಜೇಶ್ವರ ಇವರಿಂದ ತುಳು ಪೌರಾಣಿಕ ಭಕ್ತಿಪ್ರಧಾನ ನಾಟಕ “ಕಲ್ಜಿಗದ ಮಾಯಕಾರೆ ಪಂಜುರ್ಲಿ” ನಡೆಯಲಿದೆ. ಸಭಾ ಕಾರ್ಯಕ್ರಮದಲ್ಲಿ ಎಂ.ಎಲ್.ಎ ಕುl ಭಾಗೀರಥಿ ಮುರುಳ್ಯ, ಎಂ.ಎಲ್.ಸಿ ಕಿಶೋರ್ ಕುಮಾರ್, ದ.ಕ ಜಿಲ್ಲಾ ಯುವಜನ ಒಕ್ಕೂಟದ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು ಮತ್ತಿತರರು ಉಪಸ್ಥಿತರಿರಲಿದ್ದಾರೆ.