ಸುಳ್ಯ ಸೈಂಟ್ ಬ್ರಿಜಿಡ್ಸ್ ಚರ್ಚ್ ಆವರಣದಲ್ಲಿ ಚರ್ಚ್ ಪಾಲನ ಪರಿಷದ್ ಹಾಗೂ ಕೆಥೋಲಿಕ್ ಸಭಾ,ಐಸಿವೈಎಂ,ವೈಸಿಎಸ್ ಮತ್ತು ಸರ್ವ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಬಂದುತ್ವ ಕ್ರಿಸ್ಮಸ್ ಕೂಟ ಹಾಗೂ ತುಳು ಹಾಸ್ಯಮಯ ನಾಟಕ ಡಿ.25 ರಂದು ಸಂಜೆ ಸೈಂಟ್ ಬ್ರಿಜಿಡ್ಸ್ ಚರ್ಚ್ ಆವರಣದಲ್ಲಿ ನಡೆಯಲಿದೆ.
ಕಾರ್ಯಕ್ರಮದ ಸಭಾಧ್ಯಕ್ಷತೆ ಸೈಂಟ್ ಬ್ರಿಜಿಡ್ಸ್ ಚರ್ಚ್ ಧರ್ಮಗುರುಗಳಾದ ರೆ.ಫಾ.ವಿಕ್ಟರ್ ಡಿಸೋಜ ವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಕೆವಿಜಿ ಇಂಜಿನಿಯರಿಂಗ್ ಕಾಲೇಜ್ ಅಸಿಸ್ಟೆಂಟ್ ಪ್ರೊಫೆಸರ್ ಅಜಿತ್ ಕುಮಾರ್, ಸುಳ್ಯ ನಗರ ಪಂಚಾಯತ್ ಸದಸ್ಯ ಡೇವಿಡ್ ಧೀರಾ ಕ್ರಾಸ್ತ,ಚರ್ಚ್ ಪಾಲನ ಸಮಿತಿ ಉಪಾಧ್ಯಕ್ಷ ನವೀನ್ ಮಚಾದೊ,ಕಾರ್ಯದರ್ಶಿ ಜೂಲಿಯಾನ ಕ್ರಾಸ್ತ,ಸುಳ್ಯ ಕೆಥೊಲಿಕ್ ಸಭಾ ಅಧ್ಯಕ್ಷ ಪ್ರೇಮ್ ಪ್ರಕಾಶ್ ಡಿಸೋಜ, ಸಂತ ರೈಮಂಡ್ ಕಾನ್ವೆಂಟ್ ಸುಪೀರಿಯರ್ ಸಿಸ್ಟರ್ ಗ್ರೇಸಿ ಡಿಸೋಜ, ಸಂತ ಅಸಿಸ್ಸಿ ಸದನ ಕಾನ್ವೆಂಟ್ ಸುಪೀರಿಯರ್ ಸಿಸ್ಟರ್ ಸಿಸಿಲಿ ಸೆಬ್ಯಾಸ್ಟಿಯನ್,ಐಸಿವೈಎಂ ಅಧ್ಯಕ್ಷ ಜೋಯ್ ಟೋನಿ ಡಿಸೋಜ, ವೈಸಿಎಸ್ ಅಧ್ಯಕ್ಷ ಡೇವಿನ್ ಕ್ರಾಸ್ತ ವೇದಿಕೆಯಲ್ಲಿ ಉಪಸ್ಥಿತರಿರುವರು.
ಈ ಕಾರ್ಯಕ್ರಮದಲ್ಲಿ ಸುಳ್ಯ ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎಂ ವೆಂಕಪ್ಪ ಗೌಡ,ದ.ಕ ಮತ್ತು ಉಡುಪಿ ಜಿಲ್ಲಾ ಮೀಪ್ ಶಿಕ್ಷಣ ಸಂಸ್ಥೆಗಳು ಒಕ್ಕೂಟ ಉಪಾಧ್ಯಕ್ಷ ಕೆ.ಎಂ ಮುಸ್ತಫಾ, ಚರ್ಚ್ ಪಾಲನ ನಾಮನಿರ್ದೇಶಿತ ಸದಸ್ಯ ಸಂತೋಷ್ ಕ್ರಾಸ್ತ ರವರನ್ನು ಸನ್ಮಾನಿಸಿ ಗೌರವಿಸಲಿದ್ದಾರೆ.
ಸಭಾ ಕಾರ್ಯಕ್ರಮದ ನಂತರ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಐಸಿರಿ ಕಲಾವಿದರು ಅಭಿನಯದ ತುಳು ಹಾಸ್ಯಮಯ ನಾಟಕ ಮುತ್ತು ಮನಿಪುಜೆ ನಾಟಕ ನಡೆಯಲಿದೆ