‘ಸುದ್ದಿ’ ವರದಿ ಫಲಶ್ರುತಿ: ಮೂರೇ ದಿನದಲ್ಲಿ ಮುರಿದ ತೆಂಗಿನ ಮರ ತೆರವು

0

ಜಾಲ್ಸೂರು ಗ್ರಾಮದ ಸೋಣಂಗೇರಿಯ ಶ್ರೀ ಕೃಷ್ಣ ಭಜನಾ ಮಂದಿರಕ್ಕೆ ಹೋಗುವ ದಾರಿಯ ಬದಿಯಲ್ಲಿರುವ ಮುರಿದ ತೆಂಗಿನ ಮರ ಒಂದು ಅಪಾಯವನ್ನು ಆಹ್ವಾನಿಸುತ್ತಿದೆ ಎಂಬ ವರದಿನ್ನು ಸುದ್ದಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿತ್ತು.

ಇದಕ್ಕೆ ಸ್ಪಂದಿಸಿದ ಮೆಸ್ಕಾಂ ಇಲಾಖೆಯು ವರದಿ ಪ್ರಕಟಿಸಿದ ಮೂರೇ ದಿನಕ್ಕೆ ಅಪಾಯದಲ್ಲಿದ್ದ ತೆಂಗಿನ ಮರವನ್ನು ತೆರವುಗೊಳಿಸಿದೆ. ಇಲಾಖೆಯ ಈ ಕಾರ್ಯಕ್ಕೆ ಸ್ಥಳೀಯರ ಪ್ರಶಂಸೆ ದೊರೆಕಿದೆ.

ಸೋಣಂಗೇರಿ ಮಾರ್ಗವಾಗಿ ಸುಬ್ರಹ್ಮಣ್ಯ ಹೋಗುವ ರಸ್ತೆಗೆ ವಾಲಿಕೊಂಡು ಈ ತೆಂಗಿನ ಮರವಿತ್ತು.