ಬಿರುಸಿನಿಂದ ನಡೆಯುತ್ತಿರುವ ಮತಯಾಚನೆ
ಮರ್ಕಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದ್ದು, ಒಟ್ಟು ೧೨ ಸ್ಥಾನಕ್ಕೆ ೨೯ ಮಂದಿ ನಾಮಪತ್ರ ಸಲ್ಲಿಸಿದ್ದರು. ಅವರಲ್ಲಿ ಇಬ್ಬರು ನಾಮಪತ್ರ ಹಿಂತೆಗೆದುಕೊಂಡಿದ್ದು, ಒಬ್ಬ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾದಂತಾಗಿದೆ. ಅಂತಿಮವಾಗಿ ೧೧ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ೨೭ ಮಂದಿ ಕಣದಲ್ಲಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ಜತೆಗೆ ೪ ಮಂದಿ ಸ್ವತಂತ್ರ ಸ್ಪರ್ಧಿಗಳು ಇರುವ ಕಾರಣ ಈ ಬಾರಿಯ ಚುನಾವಣೆ ಒಂದಷ್ಟು ಕೂತೂಹಲ ಕೆರಳಿಸಿದೆ. ನಾಳೆ (ದ.೨೫) ಚುನಾವಣೆ ನಡೆಯಲಿದೆ.
ಸಾಮಾನ್ಯ ೬ ಸ್ಥಾನಕ್ಕೆ ೧೫ ಮಂದಿ ನಾಮಪತ್ರ ಸಲ್ಲಿಸಿದ್ದು, ಬಿಜೆಪಿ ಬೆಂಬಲಿತ ಸಹಕಾರ ಭಾರತಿಯಿಂದ ವೆಂಕಟ್ರಮಣ ಅಂಗಡಿಮಜಲು, ನವೀನ ದೊಡ್ಡಿಹಿತ್ಲು, ದಯಾನಂದ ಪುರ, ಮೋನಪ್ಪ ಪೂಜಾರಿ ಹೈದಂಗೂರು(ರೆಂಜಾಳ), ಪ್ರಶಾಂತ್ ರೈ ಪಾರೆಪ್ಪಾಡಿ, ಚೆನ್ನಕೇಶವ ದೋಳ ನಾಮಪತ್ರ ಸಲ್ಲಿಸಿದ್ದಾರೆ. ಮರ್ಕಂಜ ಸಹಕಾರ ಬಳಗದಿಂದ ವೆಂಕಪ್ಪ ಕಾಯರ, ವಿಶ್ವನಾಥ ರೈ ಗೂಡಂಬೆ, ಕೊರಗಪ್ಪ ಗೌಡ ಮಿಯ್ಯೋಣಿ, ಪುಷ್ಪರಾಜ್ ಪಾರೆಪ್ಪಾಡಿ, ರಮೇಶ ಕಬ್ಬಿನಡ್ಕ, ಜಯರಾಮ ದೇಶಕೋಡಿ ನಾಮಪತ್ರ ಸಲ್ಲಿಸಿದ್ದಾರೆ. ಸ್ವತಂತ್ರ ಅಭ್ಯರ್ಥಿಗಳಾಗಿ ಮರ್ಕಂಜ ಪ್ರೌಢಶಾಲೆಯ ನಿವೃತ್ತ ಶಿಕ್ಷಕ ಅಚ್ಚುತ ತೇರ್ಥಮಜಲು, ಕೃಷ್ಣರಾಜ್ ಶೆಟ್ಟಿ ಬಲ್ನಾಡುಪೇಟೆ ನಾಮಪತ್ರ ಸಲ್ಲಿಸಿದ್ದಾರೆ.
ಹಿಂದುಳಿದ ವರ್ಗ ಪ್ರವರ್ಗ ಬಿ ಮೀಸಲು ೧ ಸ್ಥಾನಕ್ಕೆ ಸಹಕಾರ ಭಾರತಿಯಿಂದ ಮಹಾಬಲ ಕಟ್ಟಕ್ಕೋಡಿ, ಮರ್ಕಂಜ ಸಹಕಾರ ಬಳಗದಿಂದ ಯಶವಂತ ಸೂಟೆಗದ್ದೆ ಹಾಗೂ ಸ್ವತಂತ್ರ್ಯ ಅಭ್ಯರ್ಥಿಯಾಗಿ ಬಾಲಕೃಷ್ಣ ಗೌಡ ಜೋಗಿಮೂಲೆ ನಾಮಪತ್ರ ಸಲ್ಲಿಸಿದ್ದಾರೆ.
ಹಿಂದುಳಿದ ವರ್ಗ ಪ್ರವರ್ಗ ಎ ಮೀಸಲು ೧ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಸಹಕಾರ ಭಾರತಿಯಿಂದ ಸರಸ್ವತಿ ಕೊರಗಪ್ಪ ಪೂಜಾರಿ ಕಕ್ಕಾಡು, ಮರ್ಕಂಜ ಸಹಕಾರ ಬಳಗದಿಂದ ಶಕುಂತಳಾ ದಿವಾಕರ ಆಚಾರ್ಯ ಪನ್ನೆ ನಾಮಪತ್ರ ಸಲ್ಲಿಸಿದ್ದಾರೆ.
ಅನುಸೂಚಿತ ಪಂಗಡ ಮೀಸಲು ೧ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಸಹಕಾರ ಭಾರತಿಯಿಂದ ಲಿಂಗಪ್ಪ ನಾಯ್ಕ ತೋಟಚಾವಡಿ, ಮರ್ಕಂಜ ಸಹಕಾರ ಬಳಗದಿಂದ ಡಿಲ್ಲಿಕುಮಾರ ಕೊಚ್ಚಿ, ಸ್ವತಂತ್ರ್ಯ ಅಭ್ಯರ್ಥಿಯಾಗಿ ವಿಜಕುಮಾರ ಬಳ್ಳಕ್ಕಾನ ನಾಮಪತ್ರ ಸಲ್ಲಿಸಿದ್ದಾರೆ.
ಅನುಸೂಚಿತ ಜಾತಿ ಮೀಸಲು ೧ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಸಹಕಾರ ಭಾರತಿಯಿಂದ ಅಣ್ಣು ಅಂಗಡಿಮಜಲು ಮತ್ತು ಮರ್ಕಂಜ ಸಹಕಾರ ಬಳಗದಿಂದ ಅಣ್ಣು ಮೊಗೇರ ಕಟ್ಟಕ್ಕೋಡಿ ನಾಮಪತ್ರ ಸಲ್ಲಿಸಿದ್ದಾರೆ.
ಮಹಿಳಾ ೨ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಸಹಕಾರ ಭಾರತಿಯಿಂದ ಶ್ರೀಮತಿ ಲತಾ ಚೆನ್ನಕೇಶವ ಜೋಗಿಮೂಲೆ, ಶ್ರೀಮತಿ ಅಕ್ಷತಾ ಚೆನ್ನಕೇಶವ ಜೋಗಿಮೂಲೆ ಮತ್ತು ಮರ್ಕಂಜ ಸಹಕಾರ ಬಳಗದಿಂದ ಜಯಶ್ರೀ ಕುಸುಮಾಧ ಕೊಜಂಬೆ, ಶ್ರೀಮತಿ ಶೀಲಾವತಿ ಕರುಣಾಕರ ಕೊಚ್ಚಿ ನಾಮಪತ್ರ ಸಲ್ಲಿಸಿದ್ದಾರೆ. ಡಿ.೧೮ರಂದು ನಾಮಪತ್ರ ಪರಿಶೀಲನೆ ನಡೆಯಿತು.