ಸುಳ್ಯ ಶ್ರೀ ಚೆನ್ನಕೇಶವ ದೇವರಿಗೆ ಸಮರ್ಪಣೆಯಾಗಲಿರುವ ಬ್ರಹ್ಮರಥವನ್ನು ಸ್ವಾಗತಿಸಲು ಪೈಚಾರ್ ಜಂಕ್ಷನ್‌ನಲ್ಲಿ ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ಸೇರಿದ್ದಾರೆ.
ಬಿಜೆಪಿ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ, ಮುಖಂಡರುಗಳಾದ ದಾಮೋದರ ಮಂಚಿ, ನ. ಪಂ ಸದಸ್ಯ ನಾರಾಯಣ ಶಾಂತಿನಗರ, ಕುಕ್ಕಂದೂರು ದೈವಸ್ಥಾನ, ಶ್ರೀ ಮುತ್ತಪ್ಪ ದೈವಸ್ಥಾನ, ಶ್ರೀ ಕೊರಗಜ್ಜ ದೈವಸ್ಥಾನ, ಹಿಂದೂ ಜಾಗರಣ ವೇದಿಕೆ ಪೈಚಾರು, ಶಾಂತಿನಗರ ವೇದಿಕೆ,ಶ್ರೀ ಮಾತಾ ಭಜನಾ ತಂಡ ಶಾಂತಿನಗರ ಸೇರಿದಂತೆ ವಿವಿಧ ಸಂಘ, ಸಂಸ್ಥೆಗಳ ಸದಸ್ಯರುಗಳು ಭಾಗವಹಿಸಿದ್ದರು.