ಬಡ್ಡಡ್ಕದಲ್ಲಿ 38 ನೇ ವರ್ಷದ ಅಯ್ಯಪ್ಪ ದೀಪೋತ್ಸವ- ಅಯ್ಯಪ್ಪ ವೃತಧಾರಿಗಳಿಂದ ಅಪ್ಪ ಸೇವೆ,ಅಗ್ನಿ ಸೇವೆ

0

ಅರ್ಚಕರು, ಶಿಕ್ಷಕ ಬಿ.ಆರ್. ವೆಂಕಟರಾಜ್ ಕಲ್ಲೂರಾಯರಿಗೆ ಸನ್ಮಾನ

ಬಡ್ಡಡ್ಕ- ಕಲ್ಲಪಳ್ಳಿ ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರದಲ್ಲಿ ಶಬರಿಮಲೆ ಅಯ್ಯಪ್ಪ ಸ್ವಾಮಿಯ 38 ನೇ ವರ್ಷದ ದೀಪೋತ್ಸವ ವು ಡಿ.24 ರಂದು ಬಡ್ಡಡ್ಕ ಮಂದಿರದ ವಠಾರದಲ್ಲಿ‌ ಭಕ್ತಿ ಸಂಭ್ರಮದಿಂದ ಜರುಗಿತು.

ಬೆಳಗ್ಗೆ ಅರ್ಚಕರಾದ ಬಿ.ಆರ್ ವೆಂಕಟರಾಜ್ ಕಲ್ಲೂರಾಯರ ನೇತೃತ್ವದಲ್ಲಿ ಗಣಪತಿ ಹವನವಾಗಿ ಮಧ್ಯಾಹ್ನ ಮಹಾಪೂಜೆಯಾಗಿ ಪ್ರಸಾದ ವಿತರಣೆಹಾಗೂ ಅನ್ನಸಂತರ್ಪಣೆಯಾಯಿತು.
ಸಂಜೆ ಪಿಂಡಿಬನ ವಿಷ್ಣುಮೂರ್ತಿ ದೈವಸ್ಥಾನದಿಂದ ಅಯ್ಯಪ್ಪ ಭಜನಾ ಮಂದಿರದ ತನಕ ಪಾಲ್ ಕೊಂಬು ಮೆರವಣಿಗೆಯು ಆಕರ್ಷಕ ಕುಣಿತ ಭಜನೆ ಹಾಗೂ ಮಕ್ಕಳ ದೀಪಾರಾಧನೆಯೊಂದಿಗೆ ಅಯ್ಯಪ್ಪವೃತಧಾರಿಗಳಿಂದ ಪೇಟ ತುಳ್ಳಲ್ ನೊಂದಿಗೆ ಚೆಂಡೆ ವಾದ್ಯ ಘೋಷದೊಂದಿಗೆ ಸಿಡಿ ಮದ್ದಿನ ಪ್ರದರ್ಶನ ದೊಂದಿಗೆ ಮಂದಿರದ ತನಕ‌ ಸಾಗಿ ಬಂತು.
ಬಳಿಕ ಮೇಲೇರಿಗೆ ಅಯ್ಯಪ್ಪ ವೃತಧಾರಿಗಳಿಂದ ಗುರುಸ್ವಾಮಿಯವರ ಮಾರ್ಗದರ್ಶನದಲ್ಲಿ
ಅಗ್ನಿಸ್ಪರ್ಶವಾಯಿತು.

ರಾತ್ರಿಅಯ್ಯಪ್ಪವೃತಧಾರಿಗಳಿಂದಅಪ್ಪಸೇವೆಹಾಗೂಪ್ರಾತ:ಕಾಲಅಗ್ನಿಸೇವೆಯುಜರುಗಿತು. ನಂತರ
ದೀಪಾರಾಧನೆಯೊಂದಿಗೆಪೂಜೆಯಾಗಿಪ್ರಸಾದ
ವಿತರಣೆಯಾಯಿತು.

ರಾತ್ರಿ ಮಂಗಳೂರು ಬಾಳ ಕಳವಾರು ಶ್ರೀ ಬೆಂಕಿನಾಥೇಶ್ವರ ಕೃಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿಯ ಕಲಾವಿದರ ಕೂಡುವಿಕೆಯಿಂದ
“ಶ್ರೀದೇವಿ ಅಗ್ನಿ ಕಲ್ಲುರ್ಟಿ” ಎಂಬ ಪುಣ್ಯ ಕಥಾ ಪ್ರಸಂಗ ಪ್ರದರ್ಶನವಾಯಿತು. ಆಗಮಿಸಿದ ಎಲ್ಲರಿಗೂ ರಾತ್ರಿ ಸಾರ್ವಜನಿಕ
ಅನ್ನಸಂತರ್ಪಣೆಯಾಯಿತು.

ಧಾರ್ಮಿಕ ಸಭೆ ಹಾಗೂ ಅರ್ಚಕ ಕಲ್ಲೂರಾಯರಿಗೆ ಸನ್ಮಾನ:

ಧಾರ್ಮಿಕ ಸಭೆಯು ಅಯ್ಯಪ್ಪ ಭಜನಾ ಮಂದಿರದ ಅಧ್ಯಕ್ಷ ಬಿ. ದಿನೇಶ್ ಬಡ್ಡಡ್ಕ ಅಧ್ಯಕ್ಷತೆಯಲ್ಲಿ ನಡೆಯಿತು.
ಮಂದಿರದ ಸ್ಥಳದಾನಿಗಳಾದ ಶ್ರೀಮತಿ ವೇದಾವತಿ ಅನಂತ ಎನ್.ಬಿ ಯವರು ಕಳೆದ 40 ವರ್ಷಗಳಿಂದ ಮಂದಿರದ ವೈದಿಕ ಕಾರ್ಯಕ್ರಮ ನಿರ್ವಹಿಸಿರುವ ಅರ್ಚಕರು ಹಾಗೂ ಶಿಕ್ಷಕರಾದ ಬಿ.ಆರ್ ವೆಂಕಟ್ರಾಜ್ ಕಲ್ಲೂರಾಯ ಮತ್ತು ಶ್ರೀಮತಿ ಸುವರ್ಣಲತಾ ದಂಪತಿ ಯವರನ್ನು ಅಯ್ಯಪ್ಪ ಭಜನಾ ಮಂದಿರ ಮತ್ತು ಸೇವಾ ಸಮಿತಿಯ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಆಲೆಟ್ಟಿ ಪಂಚಾಯತ್ ಸದಸ್ಯ ಸಾಂತಪ್ಪ ಪಿಂಡಿಬನ, ಮಂದಿರದ ಜೀ.ಸ.ಅಧ್ಯಕ್ಷ ಬಾಲಚಂದ್ರ ಪಿ.ಕೆ, ಆಲೆಟ್ಟಿ ಉಳ್ಳಾಕುಲು ಚಾವಡಿ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಪ್ರಸನ್ನ ಕೆ.ಸಿ.ಬಡ್ಡಡ್ಕ, ಗೌರವಾಧ್ಯಕ್ಷ ಡಾ.ಜಯದೀಪ್ ಎನ್.ಎ, ಶಾಲೆಯ ಮುಖ್ಯ ಶಿಕ್ಷಕ ರಾಧಾಕೃಷ್ಣ ಕೊಯಿಂಗಾಜೆ, ಗುರುಸ್ವಾಮಿಗಳಾದ ಜನಾರ್ದನ ಗುಂಡ್ಯ ಕಲ್ಲಪಳ್ಳಿ, ಜನಾರ್ದನ ರಂಗತ್ತಮಲೆ, ಅಮರ ಕ್ರೀಡಾ ಕಲಾ ಸಂಘದ ಅಧ್ಯಕ್ಷ ಕಮಲಾಕ್ಷ ಕೆ.ಬಡ್ಡಡ್ಕ ಉಪಸ್ಥಿತರಿದ್ದರು. ಕಾರ್ಯದರ್ಶಿ ಸನತ್ ಚಳ್ಳಂಗಾರು ಪ್ರಾರ್ಥಿಸಿದರು. ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿ ದಯಾನಂದ ಪತ್ತುಕುಂಜ ಪ್ರಾಸ್ತಾವಿಕ ಮಾತಿನೊಂದಿಗೆ ಸ್ವಾಗತಿಸಿದರು.
ಜತೆ ಕಾರ್ಯದರ್ಶಿ ಜಯಪ್ರಕಾಶ್ ಪೆರುಮುಂಡ ವಂದಿಸಿದರು. ಸುದ್ದಿ ವರದಿಗಾರ ಶಿವಪ್ರಸಾದ್ ಆಲೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ಮಂದಿರದ ಚಪ್ಪರ ನಿರ್ಮಾಣದ ಬಾಬ್ತುಅಮರ ಕ್ರೀಡಾ ಕಲಾ ಸಂಘದ ವತಿಯಿಂದ ರೂ.15 ಸಾವಿರದ ಚೆಕ್ ನ್ನು ಮಂದಿರಕ್ಕೆ ನೀಡಲಾಯಿತು. ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಸಹಕರಿಸಿದರು.