ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರಾಗಿ ಡಾ|| ಮುರಲೀ ಮೋಹನ ಚೂಂತಾರು ಅವರು ಅಧಿಕಾರ ಪಡೆದು 10 ವರ್ಷಗಳ ಅವಧಿಗೆ ಕೆಲಸ ನಿರ್ವಹಿಸಿ ಇದೀಗ ಸರಕಾರದ ಆದೇಶದಂತೆ ಜ. 6ರಂದು ದಕ್ಷಿಣ ಕನ್ನಡ ಜಿಲ್ಲಾ ಸಮಾದೇಷ್ಟರ ಹುದ್ದೆಯ ಪ್ರಭಾರವನ್ನು ದ.ಕ. ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ರಾಜೇಂದ್ರ ಡಿ.ಎಸ್. ರವರಿಗೆ ಹಸ್ತಾಂತರಿಸಿದರು.